More

    ದೇವಸಮುದ್ರ ಕೆರೆಯಲ್ಲಿ ಬೀಡುಬಿಟ್ಟ ಕಾಡಾನೆಗಳು

    ವಿಜಯವಾಣಿ ಸುದ್ದಿಜಾಲ ಹೊಸೂರು
    ಕೃಷ್ಣಗಿರಿ ಸಮೀಪದ ದೇವಸಮುದ್ರ ಕೆರೆಯಲ್ಲಿ 2 ಕಾಡಾನೆಗಳು ಬೀಡು ಬಿಟ್ಟಿದ್ದು, ಸ್ಥಳೀಯರಲ್ಲಿ ಸೃಷ್ಟಿಸಿದೆ. ಧರ್ಮಪುರಿ ಜಿಲ್ಲೆಯ ಮಾರಂಡಳ್ಳಿ, ಪಂಚಪಲ್ಲಿ ಅರಣ್ಯದಿಂದ ತಪ್ಪಿಸಿಕೊಂಡು ಬಂದಿರುವ ಕಾಡಾನೆಗಳು ಕೃಷ್ಣಗಿರಿ ಜಿಲ್ಲೆಯ ಬೈಯೂರು ಪ್ರದೇಶದ ಕೃಷ್ಣಗಿರಿ-ಧರ್ಮಪುರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೊರಸುಪ್ಪಟ್ಟಿ ಗ್ರಾಮದ ವೇದಿ (60) ಎಂಬಾತನ ಮೇಲೆ ದಾಳಿ ಮಾಡಿ, ಸಾಯಿಸಿದ್ದವು. ಈಗ ಪುನಃ ಕೆರೆಯಲ್ಲಿ ಆನೆಗಳು ಕಾಣಿಸಿಕೊಂಡಿದ್ದು, ಕಾಡಿಗೆ ಓಡಿಸಲು ಶನಿವಾರ ರಾತ್ರಿ ಅರಣ್ಯ ಇಲಾಖೆ ಕಾರ್ಯಾಚರಣೆ ಕೈಗೊಂಡಿದೆ. ದೇವಸಮುದ್ರ ಸೇರಿ ದುರಿಂಚಿಪಟ್ಟಿ, ನೆಕುಂದಿ, ಅವಧಾನಪಟ್ಟಿ, ದ್ವಾರಕಾಪುರಿ, ಕೃಷ್ಣಗಿರಿ ಅಣೆಕಟ್ಟು ಪ್ರದೇಶದಲ್ಲಿ ವಾಸಿಸುವ ಗ್ರಾಮಸ್ಥರು ಮನೆಯಿಂದ ಹೊರಬಾರದಂತೆ ಸಾರ್ವಜನಿಕರಿಗೆ ಮನವಿ ಮಾಡಿದೆ. ಕೆರೆಯಲ್ಲಿ ಆನೆಗಳು ಬೀಡು ಬಿಟ್ಟಿರುವುದನ್ನು ಸಾರ್ವಜನಿಕರು ವೀಕ್ಷಣೆಗೆ ಮುಗಿ ಬಿದ್ದ ಹಿನ್ನೆಲೆಯಲ್ಲಿ ಧರ್ಮಪುರಿ – ಕೃಷ್ಣಗಿರಿ – ಬೆಂಗಳೂರು ಹೆದ್ದಾರಿಯಲ್ಲಿ ಸಂಚಾರಿ ದಟ್ಟಣೆ ಉಂಟಾಗಿ, ವಾಹನ ಸವಾರರು ಪರದಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts