More

    ದೇವರ ಮೂರ್ತಿ ತಯಾರಕರು ವಿಶ್ವಕರ್ಮರು

    ಅಥಣಿ ಗ್ರಾಮೀಣ, ಬೆಳಗಾವಿ: ದೇವಾಲಯ ಮೂರ್ತಿ, ಆಭರಣದಂತಹ ಅಲಂಕಾ ರಿಕ ವಸ್ತುಗಳ ತಯಾರಿಕೆಯಲ್ಲಿ ಪಂಚಾಳ ಸಮುದಾಯ ತೊಡಗಿಸಿಕೊಂಡಿದೆ ಎಂದು ವಿಶ್ವಕರ್ಮ ಸಮಾಜದ ಯುವ ಮುಖಂಡ ಮಲ್ಲಿಕಾರ್ಜುನ ಪತ್ತಾರ ಹೇಳಿದರು,
    ತಾಲೂಕಿನ ಅಡಹಳ್ಳಿ ಗ್ರಾಪಂ ಸಭಾಭವನದಲ್ಲಿ ಶನಿವಾರ ಹಮ್ಮಿ ಕೊಂಡಿದ್ದ ವಿಶ್ವಕರ್ಮ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ವಿಶ್ವಕರ್ಮರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಎಲ್ಲ ಜಾತಿ, ಧರ್ಮಗಳ ಜತೆ ವಿಶ್ವಕರ್ಮ ಸಮಾಜ ಬಾಂಧವ್ಯವನ್ನು ಹೊಂದಿದೆ. ಸಮಾಜದಲ್ಲಿ ಅನೇಕರು ಉದ್ಯೋಗ ವಿಲ್ಲದೇ ಜೀವನ ನಿರ್ವಹಣೆಗೆ ಹೆಣ ಗಾಡುತ್ತಿದ್ದಾರೆ. ಅವರಿಗೆ ಸರ್ಕಾರ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು. ಪಿಕೆಪಿಎಸ್ ನಿರ್ದೇಶಕ ಸುನಿಲ ಕೆಂಚಣ್ಣವರ ಮಾತನಾಡಿ, ದೇವರ ಶಿಲ್ಪಿ ವಿಶ್ವಕರ್ಮ ಸಮಾಜದ ಎಲ್ಲ ಕುಶಲ ಕರ್ಮಿಗಳಿಗೆ ಒಳಿತು ಮಾಡಲಿ ಎಂದು ಹಾರೈಸಿದರು. ಮಹಾದೇವ ಪಾಟೀಲ, ಯಮನಪ್ಪ ಭಜಂತ್ರಿ, ಅಪ್ಪಾಸಾಬ ಅವಟಿ, ಅಮ್ಜಾದ ಜಮಾದಾರ, ಪಿಡಿಒ ಶರಣಗೌಡ ಗೂಗಲ್, ದಿಲಿಪ ಸೂರ್ಯವಂಶಿ, ಮಲ್ಲಪ್ಪ ಖೊಬ್ರಿ ಇದ್ದರು.
    ಗುರ್ಲಾಪುರ ವರದಿ: ಸಮೀಪದ ಇಟನಾಳ ಗ್ರಾಮದಲ್ಲಿ ಶನಿವಾರ ವಿಶ್ವಕರ್ಮ ಜಯಂತಿಯನ್ನು ಮೌನೇಶ್ವರ ದೇವಸ್ಥಾನದ ಆವರಣದಲ್ಲಿ ಆಚರಿಸಲಾಯಿತು. ಮೌನೇಶ್ವರ ಕಮಿಟಿ ಅಧ್ಯಕ್ಷ ಈರಪ್ಪ ಬಡಿಗೇರ, ಗ್ರಾಪಂ ಉಪಾಧ್ಯಕ್ಷ ವಿವೇಕ ಮಾರಾಪುರ, ಗಿರಿಗೌಡ ಪಾಟೀಲ, ಶಂಕರಗೌಡ ಪಾಟೀಲ, ಮಹಾದೇವ ಮಗುದುಮ್, ಮುತ್ತಪ್ಪ ಡಾಂಗೆ, ಶಿವಬೋಧ ಪತ್ತಾರ, ವಿಷ್ಣು ಬಡಿಗೇರ, ಮೌನೇಶ ಬಡಿಗೇರ, ವಿಶ್ವಕರ್ಮ ಬಡಿಗೇರ, ವಿರೂಪಾಕ್ಷ ಬಡಿಗೇರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts