More

    ದೇವನಹಳ್ಳಿಯಲ್ಲಿ ಪಕ್ಷೇತರ ಅಭ್ಯರ್ಥಿ ಅಬ್ಬರದ ಪ್ರಚಾರ


    ದೇವನಹಳ್ಳಿ
    ಸಮಾಜ ಸೇವಕರಾಗಿ ದೇವನಹಳ್ಳಿಗೆ ಆಗಮಿಸಿ ಪಕ್ಷೇತರ ಅಭ್ಯರ್ಥಿಯಾಗಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ವಿ.ಮಂಜುನಾಥ್ ಹಳೇ ತಾಲೂಕು ಕಚೇರಿ ಬಳಿ ಇರುವ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಿರುಸಿನ ಪ್ರಚಾರ ಮಾಡಿದರು.
    600ಕ್ಕೂ ಹೆಚ್ಚು ಕಾರ್ಯಕರ್ತರು ಹಾಗೂ ಬಿಎಸ್‌ಪಿ ಕಾರ್ಯಕರ್ತರ ಜತೆಯಲ್ಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮತಯಾಚನೆ ಮಾಡುತ್ತಿದ್ದೇನೆ. ಹಾಗೆಯೇ ಪ್ರತಿಗ್ರಾಮಗಳಲ್ಲಿ ನನಗೆ ಅಭೂತ ಪೂರ್ವ ಸ್ವಾಗತ ಮಾಡುತ್ತಿದ್ದಾರೆ. ನಾನು ಹಲವು ವರ್ಷಗಳಿಂದ ತಾಲೂಕಿನಲ್ಲಿ ಸಮಾಜಸೇವೆ ಮಾಡುವ ಮೂಲಕ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದು, ಜನರು ನನ್ನನ್ನು ಬೆಂಬಲಿಸುವ ವಿಶ್ವಾಸವಿದೆ ಎಂದು ವಿ.ಮಂಜುನಾಥ್ ತಿಳಿಸಿದರು.
    ಅನೇಕ ಗ್ರಾಮಗಳಲ್ಲಿ ಸಮರ್ಪಕವಾದ ಮೂಲಸೌಕರ್ಯ ಇಲ್ಲದಿರುವುದು ಗಮನಕ್ಕೆ ಬಂದಿದೆ. ಬಡಜನರ ಕಷ್ಟ ಕೇಳದಂತಾಗಿದೆ. ಕೆಲವು ಹಳ್ಳಿಗಳಲ್ಲಿ ಮನೆಗಳಿಲ್ಲದೆ, ಕುಸಿಯುವಂತಹ ಪರಿಸ್ಥಿತಿಯಲ್ಲಿರುವ ಗೋಡೆಗಳ ನಡುವೆ ಜೀವನ ಸಾಗಿಸುತ್ತಿದ್ದಾರೆ ಎಂದು ಬೇಸರಿಸಿದರು.
    ಹಾಲಿ ಶಾಸಕರು, ಗ್ರಾಮೀಣ ಭಾಗದಲ್ಲಿ ಮೂಲಸೌಕರ್ಯ ಒದಗಿಸದಿರುವುದು ಎಲ್ಲಡೆ ಎದ್ದು ಕಾಣುತ್ತಿದೆ. ನಾನು ವಿಜಯಶಾಲಿಯಾದರೆ ಗ್ರಾಮೀಣ ಭಾಗದ ಜನರ ಸಂಕಷ್ಟಕ್ಕೆ ಸ್ಪಂದಿಸಿ ಸಮಗ್ರ ಅಭಿವೃದ್ಧಿ ಮಾಡುತ್ತೇನೆ. ಸೂರಿಲ್ಲದವರಿಗೆ ಸೌಲಭ್ಯ ಕಲ್ಪಿಸಲು ಮೊದಲ ಆದ್ಯತೆ ನೀಡಲಾಗುವುದು ಎಂದರು.
    ಬಿಎಸ್‌ಪಿ ತಾಲೂಕು ಅಧ್ಯಕ್ಷ ಬಂಗಾರಪ್ಪ ಮಾತನಾಡಿ, ಬಿಎಸ್‌ಪಿಯಿಂದ ಪಕ್ಷೇತರ ಅಭ್ಯರ್ಥಿ ಮಂಜುನಾಥ್ ಪರ ಪ್ರಚಾರ ಮಾಡಿ ಹೆಚ್ಚು ಮತ ಲಭಿಸುವಂತೆ ಮಾಡಲು ತಾಲೂಕಿನಾದ್ಯಂತ ಸಂಚಾರ ಮಾಡಲಾಗುತ್ತಿದೆ, ಬಿಎಸ್‌ಪಿಯ 25 ಸಾವಿರಕ್ಕೂ ಹೆಚ್ಚು ಮತಗಳಿದ್ದು, ಕಳೆದ ಚುನಾವಣೆಯಲ್ಲಿ ಹಾಲಿ ಶಾಸಕರ ಪರ ಕೆಲಸ ಮಾಡಿದ್ದೆವು. ಈ ಬಾರಿ ಮಂಜುನಾಥ್ ಅವರ ಕ್ರ.ಸಂ.10ರ ಕಬ್ಬು ಮತ್ತು ರೈತನ ಗುರುತಿಗೆ ಮತ ನೀಡುವಂತೆ ಜನರಿಗೆ ಅರಿವು ಮೂಡಿಸಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts