More

    ದೃಶ್ಯಕಲಾ ಕಾಲೇಜಿನಲ್ಲಿ ಕಾರ್ಟೂನ್ -ಕ್ಯಾರಿಯೇಚರ್ ಗಳ ತೋರಣ..!

    ದಾವಣಗೆರೆ: ದೃಶ್ಯಕಲಾ ಕಾಲೇಜಿನ ಇತಿಹಾಸದಲ್ಲೇ ಮೊದಲ ಬಾರಿಗೆ ಆಯೋಜನೆಯಾಗಿದ್ದ ವ್ಯಂಗ್ಯಚಿತ್ರಗಳ ಪ್ರದರ್ಶನ ನೋಡುಗರ ಕಣ್ಮನ ಸೆಳೆಯಿತು.
    ಗೋಡೆಗೆ ನೇತು ಹಾಕಿದ್ದ ಕಾರ್ಟೂನ್‌ಗಳಲ್ಲಿ ಅದೇ ಕಾಲೇಜಿನ ಹಳೆಯ ಪ್ರಾಚಾರ್ಯರು, ಬೋಧಕ-ಬೋಧಕೇತರ ಸಿಬ್ಬಂದಿ ಚಿತ್ರಗಳೇ ಹೆಚ್ಚಿದ್ದವು. ಕೆಲವರ ಕ್ಯಾರಿಯೇಚರ್‌ಗಳೂ ಕಂಡುಬಂದವು. ಕುಲಪತಿ, ಜಿಲ್ಲಾಧಿಕಾರಿ ಇಬ್ಬರೂ ತಮ್ಮ ಕಾರ್ಟೂನ್‌ಗಳನ್ನು ನೋಡಿ ನಸುನಕ್ಕರು.
    ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ರಾಹುಲ್‌ಗಾಂಧಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಹಿನ್ನೆಲೆಗಾಯಕಿ ದಿ.ಲತಾ ಮಂಗೇಶ್ಕರ್, ಚಿತ್ರನಟರಾದ ದಿ.ಪುನೀತ್ ರಾಜಕುಮಾರ್, ದಿ.ಶಂಕರ್‌ನಾಗ್, ದಿ. ವಿಷ್ಣುವರ್ಧನ್, ಉಪೇಂದ್ರ ಮೊದಲಾದವರ ವ್ಯಂಗ್ಯಚಿತ್ರಗಳು ಹೊಸ ಲೋಕಕ್ಕೆ ಕರೆದೊಯ್ದವು.
    ರಾಜ್ಯ ಸರ್ಕಾರ ಜಾರಿಗೊಳಿಸಿದ ಶಕ್ತಿ, ಗೃಹಲಕ್ಷ್ಮೀ ಯೋಜನೆಯಿಂದಾದ ಸಾಮಾಜಿಕ ಬದಲಾವಣೆಗಳು, ಟೊಮ್ಯಾಟೋ ಬೆಲೆ ಏರಿಕೆ ತಂದ ಪರಿಣಾಮದ ಚಿತ್ರಣವನ್ನು ಚಿತ್ರಗಳು ಕಟ್ಟಿಕೊಟ್ಟವು. ಆ್ಯನಿಮೇಷನ್ ಮಾಧ್ಯಮದ ಮೂಲಕ ರಚಿತ ವ್ಯಂಗ್ಯಚಿತ್ರಗಳೂ ಅಲ್ಲಿದ್ದವು. ಅನ್ವಯಿಕ ವಿಭಾಗದ 30 ವಿದ್ಯಾರ್ಥಿಗಳು 120 ಕಲಾಕೃತಿಗಳನ್ನು ರಚಿಸಿದ್ದಾರೆ. ಸಾರ್ವಜನಿಕರು ಆ.12ರವರೆಗೆ ವೀಕ್ಷಿಸಬಹುದು.

    ಆಸಕ್ತಿ ಇರಲಿಲ್ಲ.

    ನನಗೆ ಕ್ಯಾರಿಯೇಚರ್ ರಚನೆಯಲ್ಲಿ ಆಸಕ್ತಿ ಇರಲಿಲ್ಲ. ಪ್ರಭಾರ ಪ್ರಾಚಾರ್ಯ ಜೈರಾಜ್ ಸರ್ ಹಾಗೂ ಹಿರಿಯರ ಮಾರ್ಗದರ್ಶನದಲ್ಲಿ ಮೊದಲ ಬಾರಿಗೆ ಇದರಲ್ಲಿ ಭಾಗಿಯಾಗಿದ್ದು ಒಳ್ಳೆಯ ಅನುಭವ ನೀಡಿತು ಎಂದು ವಿದ್ಯಾರ್ಥಿನಿ ಕೀರ್ತನಾ ಆಲ್ಫೋನ್ಸಾ ಅನಿಸಿಕೆ ಹಂಚಿಕೊಂಡರು.

    ಮನ ಸೋತ ಡಿಸಿ
    ಕಲಾಕೃತಿಗಳನ್ನು ಕಣ್ತುಂಬಿಕೊಂಡ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ ಅವರು ಕೂಡ ‘ ಈ ಪ್ರದರ್ಶನಕ್ಕೆ ಸಂಪೂರ್ಣ ಮನ ಸೋತಿದ್ದೇನೆ’ ಎಂದು ಷರಾ ಬರೆದರು. ದಾವಿವಿ ಕುಲಪತಿ ಪ್ರೊ. ಬಿ.ಡಿ.ಕುಂಬಾರ್ ಕೂಡ ‘ವೃತ್ತಿಜೀವನದಲ್ಲಿ ಇಂತಹ ಕಲಾಪ್ರದರ್ಶನ ಕಂಡಿಲ್ಲ’ ಎಂದು ಶ್ಲಾಘಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts