More

    ದೃಢೀಕರಣ ಪತ್ರಕ್ಕೆ ಕ್ಷೌರಿಕರನ್ನು ಅಲೆದಾಡಿಸಬೇಡಿ

    ಮುಂಡರಗಿ: ಉದ್ಯೋಗ ದೃಢೀಕರಣ ಪತ್ರ ನೀಡುವುದಕ್ಕೆ ಕ್ಷೌರಿಕರನ್ನು ಅಲೆದಾಡಿಸಬಾರದು ಮತ್ತು ಸಹಾಯಧನ ಕುರಿತಾದ ಪ್ರಚಾರ ಫಲಕದಲ್ಲಿರುವಂತಹ ತಾರತಮ್ಯ ಸರಿಪಡಿಸಬೇಕು ಎಂದು ತಾಲೂಕು ಶ್ರೀ ಶಿವಶರಣ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಕಾರ್ಯಕರ್ತರು ಶುಕ್ರವಾರ ತಹಸೀಲ್ದಾರ್​ಗೆ ಮನವಿ ಸಲ್ಲಿಸಿದರು.

    ಲಾಕ್​ಡೌನ್​ನಿಂದಾಗಿ ಸಂಕಷ್ಟದಲ್ಲಿದ್ದ ಕ್ಷೌರಿಕರಿಗೆ ರಾಜ್ಯ ಸರ್ಕಾರವು 5 ಸಾವಿರ ರೂ.ಗಳ ಸಹಾಯಧನ ಘೊಷಿಸಿದೆ. ಸಹಾಯಧನ ಪಡೆದುಕೊಳ್ಳುವುದಕ್ಕೆ ಉದ್ಯೋಗ ದೃಢೀಕರಣ ಪತ್ರ ನೀಡುವಂತೆ ಸೇವಾಸಿಂಧು ಆಪ್​ನಲ್ಲಿ ತಿಳಿಸಲಾಗಿದೆ. ಆದ್ದರಿಂದ ಅರ್ಜಿ ನಮೂನೆಯಲ್ಲಿ ತಮ್ಮ ಇಲಾಖೆ ಅಧಿಕಾರಿಗಳು ಉದ್ಯೋಗ ದೃಢೀಕರಣ ಪತ್ರ ನೀಡುವುದಕ್ಕೆ ಕ್ಷೌರಿಕರನ್ನು ಅಲೆದಾಡಿಸದೆ ಸಹಿ ಮಾಡುವಂತೆ ತಿಳಿಸಬೇಕು. ಸಹಾಯಧನ ಘೊಷಣೆ ಕುರಿತಾದ ಸಾರ್ವಜನಿಕರ ಜಾಗದಲ್ಲಿರುವ ಪ್ರಚಾರ ಫಲಕದಲ್ಲಿ ಹಡಪದ ಕ್ಷೌರಿಕರು ಅಥವಾ ಕ್ಷೌರಿಕರು ಎನ್ನುವ ಪದದ ಬದಲು ಆಂಧ್ರಪ್ರದೇಶ ಭಾಗದಿಂದ ವಲಸೆ ಬಂದಂತ ಸವಿತಾ ಸಮಾಜ ಎಂಬ ಪದ ಹಾಕಲಾಗಿದೆ. ತಕ್ಷಣ ಪ್ರಚಾರ ಫಲಕದಲ್ಲಿ ಕ್ಷೌರಿಕರು ಅಥವಾ ಹಡಪದ ಸಮಾಜ ಬಾಂಧವರು ಎಂದು ಹಾಕಬೇಕು. ಇಲ್ಲವಾದರೆ ಫಲಕದಲ್ಲಿ ಸವಿತಾ ಎನ್ನುವ ಪದವಿರುವ ಅಕ್ಷರಕ್ಕೆ ಕಪ್ಪು ಪಟ್ಟಿ ಅಂಟಿಸಬೇಕು ಎಂದು ಮನವಿ ಸಲ್ಲಿಸಿದರು.

    ತಹಸೀಲ್ದಾರ್ ಪರವಾಗಿ ಶಿರಸ್ತೇದಾರ್ ಎಸ್.ಎಸ್. ಬಿಚ್ಚಾಲಿ ಮನವಿ ಸ್ವೀಕರಿಸಿದರು. ತಾಲೂಕು ಹಡಪದ ಸಮಾಜದ ಅಧ್ಯಕ್ಷ ಈರಣ್ಣ ಹಡಪದ, ಪುರಸಭೆ ಸದಸ್ಯ ಲಿಂಗರಾಜಗೌಡ ಪಾಟೀಲ, ದೇವು ಹಡಪದ, ಜಗದೀಶ ಹಡಪದ, ಡಿ.ಕೆ. ಹಡಪದ, ಮಂಜುನಾಥ ಬಳಗಾನೂರ, ಶರಣಪ್ಪ ಹಡಪದ, ಸೋಮಣ್ಣ ಹಡಪದ, ರುದ್ರಪ್ಪ ಹಡಪದ, ಕೆ.ಐ. ಹಡಪದ, ಹನುಮಂತ ಹಡಪದ, ಮಹೇಶ ಹಡಪದ, ಎಸ್.ಎಸ್. ಹಡಪದ, ಎ.ಡಿ. ಹಡಪದ, ಎಂ.ವೈ. ಹಡಪದ ಇತರರಿದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts