More

    ದೂರದಿಂದ ಅಭ್ಯರ್ಥಿ ಕರೆತಂದಿದ್ದಾರೆ,ಶುಕ್ರವಾರ ಬೆಂಬಲಿಗರ ಸಭೆ

    ಚಿತ್ರದುರ್ಗ:ಚಿತ್ರದುರ್ಗ ಲೋಕಸಭಾ ಎಸ್‌ಸಿ ಮೀಸಲು ಕ್ಷೇತ್ರದ ಟಿಕೆಟ್ ನಿರೀಕ್ಷೆಯಲ್ಲಿದ್ದ ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಅವರ ಪುತ್ರ ಎಂ.ಸಿ.ರಘುಚಂದನ್,ಟಿಕೆಟ್ ಕೈ ತಪ್ಪಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
    ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಮೂರ‌್ನಾಲ್ಕು ಸ್ಥಳೀಯ ಆಕಾಂಕ್ಷಿಗಳಿದ್ದವು. ಆದರೆ ಕಾರಣಾಂತರಗಳಿಂದ ಪಕ್ಷ ಗೋವಿಂದ ಎಂ.ಕಾರಜೋಳ ಅವರನ್ನ ಅಭ್ಯರ್ಥಿ ಎಂದು ಘೋಷಿಸಿದೆ. ಪಕ್ಷದ ಈ ನಡೆಯನ್ನು ಅತ್ಯಂತ ನೋವಿನಿಂದ ಖಂಡಿಸುತ್ತೇನೆ. ಚಿತ್ರದುರ್ಗ ನಿರಾಶ್ರೀತರ ಕೇಂದ್ರವಾಗಿದೆ. ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಸೋತಿದ್ದವರು ಇಲ್ಲಿ ಕಾಂಗ್ರೆಸ್ಸಿಂದ ಹಾಗೂ ಅನೇಕಲ್‌ನಲ್ಲಿ ಸೋತಿದ್ದವರು ಬಿಜೆಪಿಯಿಂದ ಇಲ್ಲಿ ಎಂಪಿ ಆಗಿದ್ದಾರೆ. ಈಗ ಮುಧೋಳದಲ್ಲಿ ಸೋತವರನ್ನು ಅಭ್ಯರ್ಥಿ ಮಾಡಲಾಗಿದೆ. ಬಿ.ಎಸ್.ಯ ಡಿಯೂರಪ್ಪ ಹಾಗೂ ಬಿ.ವೈ.ವಿಜಯೇಂದ್ರರನ್ನು ಬಹಳವಾಗಿ ನಂಬಿದ್ದೆ.
    ಗಂಡು ಮೆಟ್ಟಿದ ನಾಡು ದುರ್ಗ ಹೆಸರಿಗೆ ಮಾತ್ರವೆನ್ನುವಂತಾಗಿದೆ. ನಮ್ಮ ಭಾಗದ ಕಟ್ಟ ಕಡೆಯ ನಾಯಕರು ಬೆಳೆಯಬೇಕು. ಮದ ಕರಿನಾಯಕರ ಕಾಲದಿಂದ ಮೈಸೂರಿಂದ ಬಂದವರನ್ನ ನೋಡಿದ್ದೇವೆ. ಈಗ ದೂರದಿಂದ ಅಭ್ಯರ್ಥಿ ಕರೆತಂದಿದ್ದಾರೆ. ನಮ್ಮಲ್ಲಿಯಾರಿಗೂ ಈ ಶಕ್ತಿ ಇರಲಿಲ್ಲವೇ?
    ಪಕ್ಷ ಯಾರಿಗೆ ಟಿಕೆಟ್ ಕೊಟ್ಟಿದ್ದರೂ ಅದು ಸ್ಥಳೀಯರಿಗೆ ಸಿಗಬೇಕಿತ್ತು.

    ಜನಾರ್ದನಸ್ವಾಮಿ ಅವರಿಗಾದರೂ ಸಿಗಬೇಕಿತ್ತು. ಇಲ್ಲಿಯ ಜನ ಮಾತನಾಡುವುದಿಲ್ಲ ಎಂದು ತಿಳಿದಿದ್ದಾರೆ.ನನಗೆ ಟಿಕೆಟ್ ತಪ್ಪಿಸಲು ಕಳ್ಳಿನರಸಪ್ಪನ ಕೆಲಸ ಮಾಡಿದ್ದಾರೆ. ಒಬ್ಬರ ಮಕ್ಕಳ ಜೀವನ ಹಾಳು ಮಾಡಿದ್ರೆ, ನಿಮ್ಮ ಮಕ್ಕಳ ಜೀವನ ಹಾಳಾಗುತ್ತೆ. ಇಂಥವರನ್ನ ಭಗವಂತ ನೋಡುತ್ತಿದ್ದಾನೆ,ಕಾಲವೇ ಎಲ್ಲದಕ್ಕೂ ಉತ್ತರ ಕೊಡುತ್ತದೆ.

    ನಾಳೆ ಬೆಂಬಲಿಗರ ಸಭೆ
    ಶುಕ್ರವಾರ ತಮ್ಮ ಬೆಂಬಲಿಗರ ಸಭೆ ಕರೆದು ತಮ್ಮ ಮುಂದಿನ ನಡೆ ಪ್ರಕಟಿಸುವುದಾಗಿ ಹೇಳಿದ ರಘುಚಂದನ್,ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಅಧಿಕಾರಕ್ಕೆ ಬರಬೇಕು. 74 ವರ್ಷದ ಕಾರಜೋಳರನ್ನು ಕರೆತರುತ್ತಿದ್ದಾರೆ. ದೂರದಿಂದ ಬಂದು ಕಾರಜೋಳ ಕಾರ್ಯಕರ್ತರ ರಕ್ಷಣೆ ಮಾಡುತ್ತಾರೆಯೇ?
    ನಮಗೆ ಸ್ವಾಭಿಮಾನ ಇಲ್ಲ ಎಂದುಕೊಂಡಿದ್ದಾರೆ. ನಮ್ಮ ಅಭಿಮಾನ,ಪ್ರೀತಿ ದೌರ್ಬಲ್ಯ ಎಂದುಕೊಂಡರೇ ಅದು ಅವರ ದೌರ್ಬಲ್ಯ. ಚಿತ್ರದುರ್ಗದ ಅಸ್ಮಿತೆ ಏನಾಗುತ್ತಿದೆ? ನಮ್ಮಲ್ಲಿ ಯಾರೂ ಗಂಡಸರು ಇರಲಿಲ್ಲವೇ? ಏನಿದು ದೌರ್ಜನ್ಯ,ದಬ್ಬಾಳಿಕೆ ?
    ಮೀಸಲಾತಿ ನ್ಯಾಯ ಜಿಲ್ಲೆ ಮಟ್ಟದ ಜನರಿಗೆ ಸಿಗಬೇಕು. ನನಗೆ ಟಿಕೆಟ್ ಬೇಡ,ಎರಡು ಪಕ್ಷದಲ್ಲೂ ಸ್ಥಳೀಯ ಅಭ್ಯರ್ಥಿಗಳು ಇರ ಲಿಲ್ಲವೆ?ಮತ ಹಾಕಲು ಮಾತ್ರ ಕಾರ್ಯಕರ್ತರುಬೇಕು. ಅಧಿಕಾರಕ್ಕೆ ಬೇಡವೇ? ನಾನು ಸುಮ್ಮನೆ ಇರಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts