More

    ‘ಗೋಬ್ಯಾಕ್’ ಹೇಳಿಕೆ ದಲಿತ ವಿರೋಧಿ ಮನಸ್ಥಿತಿ

    ಚಿತ್ರದುರ್ಗ: ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಚಿತ್ರದುರ್ಗದಲ್ಲಿ ಎನ್‌ಡಿಎ ಅಭ್ಯರ್ಥಿ ಗೋವಿಂದ ಎಂ.ಕಾರಜೋಳ ಅವರಿಗೆ ‘ಗೋ ಬ್ಯಾಕ್’ ಹೇಳುವಂತೆ ಮತದಾರರನ್ನು ಪ್ರಚೋದಿಸಿರುವ ಸಿಎಂ ಸಿದ್ದರಾಮಯ್ಯ ಅವರ ನಡೆ ಖಂಡನೀಯ ಎಂದು ಎಂಎಲ್‌ಸಿ ಕೆ.ಎಸ್.ನವೀನ್ ಹೇಳಿದರು.
    ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗೋಬ್ಯಾಕ್ ಹೇಳುವಂತೆ ತಿಳಿಸುವ ಮೂಲಕ ಸಿಎಂ, ಮಾದಿಗ ಸಮುದಾಯದ ಕಾರಜೋಳ ಅವರನ್ನು ಯಾವ ರೀತಿ ಕಾಣುತ್ತಿದ್ದಾರೆ? ಸಿಎಂ ಅವರ ಈ ಹೇಳಿಕೆ ದಲಿತರೆಡೆ ಹೊಂದಿರುವ ಅವರ ಮನಸ್ಥಿತಿಯನ್ನು ಬಿಂಬಿಸುತ್ತಿದೆ. ಇದು ಸಿಎಂಗೆ ಶೋಭೆ ತರದು ಎಂದರು.
    ಯಾರು ಎಲ್ಲಿ ಬೇಕಾದರೂ ಸ್ಪರ್ಧಿಸಲು ಸಂವಿಧಾನ ಅವಕಾಶ ನೀಡಿದೆ. ಮೈಸೂರಿನಿಂದ 800 ಕಿಮೀ ದೂರವಿರುವ ಬದಾಮಿಯಲ್ಲಿ ಸಿದ್ದರಾಮಯ್ಯ ಅವರು ಸ್ಪರ್ಧಿಸಬಹುದಾದರೆ ಕಾರಜೋಳ ಅವರು ಯಾಕೆ ದುರ್ಗಕ್ಕೆ ಬರಬಾರದು ಎಂದು ಪ್ರಶ್ನೀಸಿದರು.
    ‘ಮಿಸ್ಟರ್ ಕಾರಜೋಳ್ ಗೋಬ್ಯಾಕ್’ ಎಂದಿರುವ ಸಿದ್ದರಾಮಯ್ಯಗೆ ಅಂದು ಬದಾಮಿ ಜನ ಗೋಬ್ಯಾಕ್ ಎಂದಿದ್ದರೆ ನಿವೃತ್ತಿ ಪಡೆದು ಮನೆಯಲ್ಲಿ ಇರಬೇಕಾಗುತ್ತಿತ್ತು ಎಂದು ಹೇಳಿದರು.
    ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಜಿ.ಟಿ.ಸುರೇಶ್ ಸಿದ್ದಾಪುರ, ಸಂಪತ್‌ಕುಮಾರ್, ಮಾಧ್ಯಮ ವಕ್ತರರಾದ ತಿಪ್ಪೇಸ್ವಾಮಿ ಛಲವಾದಿ, ನಾಗರಾಜ್ ಬೇದ್ರೆ, ಶಿವಪ್ರಕಾಶ್ ದಗ್ಗೆ, ಮುಖಂಡ ನವೀನ್ ಚಾಲುಕ್ಯ ಇದ್ದರು.

    *ಜಿಲ್ಲೆಯ ಜನರಿಗೆ ನೇರ ಲಾಭ
    ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹತ್ತು ಹಲವು ಯೋಜನೆಗಳ ಲಾಭ ಜಿಲ್ಲೆಯ ಲಕ್ಷಾಂತರ ಫಲಾನುಭವಿಗಳಿಗೆ ನೇರವಾಗಿ ತಲುಪಿವೆ ಎಂದು ಕೆ.ಎಸ್.ನವೀನ್ ಹೇಳಿದರು.
    ಉಚಿತ ಪಡಿತರ ಯೋಜನೆ ಲಾಭ ಜಿಲ್ಲೆಯ 16.37 ಲಕ್ಷ ಜನರಿಗೆ ದೊರೆಯುತ್ತಿದೆ. ಈ ಯೋಜನೆ ಇನ್ನೂ 5 ವರ್ಷ ಮುಂದುವರಿಯಲಿದೆ ಎಂದರು.
    ಜಿಲ್ಲೆಯ 6.50 ಲಕ್ಷ ಜನರು ಆಯುಷ್ಮಾನ್ ಭಾರತ್ ಕಾರ್ಡ್ ಹೊಂದಿದ್ದಾರೆ. 1.90 ಲಕ್ಷ ಮನೆಗಳಿಗೆ ಜೆಜೆಎಂ ಅಡಿ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗಿದೆ. 3.24 ಲಕ್ಷ ಜನರಿಗೆ ಇ-ಶ್ರಮ ಕಾರ್ಡ್ ದೊರಕಿದೆ. ಜನಧನ್ ಯೋಜನೆ ಜಿಲ್ಲೆಯಲ್ಲಿ ಶೇ.100 ಅನುಷ್ಠಾನ ಗೊಂಡಿದೆ ಎಂಬಿತ್ಯಾದಿ ಕೇಂದ್ರದ ಜನ ಕಲ್ಯಾಣ ಯೋಜನೆಗಳ ಲಾಭ ಜಿಲ್ಲೆ ದೊರಕಿರುವು ಕುರಿತು ಅಂಕಿ-ಅಂಶಗಳೊಂದಿಗೆ ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts