More

    ದುಶ್ಚಟದಿಂದ ಕುಟುಂಬದ ನೆಮ್ಮದಿ ಹಾಳು

    ರಾಯಬಾಗ: ದುಶ್ಚಟಗಳಿಂದ ದೂರವಿದ್ದಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ಪರಮಾನಂದವಾಡಿ ಗುರುದೇವ ಬ್ರಹ್ಮಾನಂದ ಆಶ್ರಮದ ಡಾ.ಅಭಿನವ ಬ್ರಹ್ಮಾನಂದ ಸ್ವಾಮೀಜಿ ಹೇಳಿದರು.

    ಪಟ್ಟಣದ ಬಾಬು ಜಗಜೀವನರಾಮ್ ಸಭಾ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ರಾಯಬಾಗ, ಪ್ರಗತಿ ಬಂಧು ಸ್ವಸಹಾಯ ಸಂಘದ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 1,629ನೇ ಮದ್ಯರ್ವಜನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

    ಕುಟುಂಬದ ನೆಮ್ಮದಿ, ಆರ್ಥಿಕ ಹಾಗೂ ಸಾಮಾಜಿಕ ಪರಿಸ್ಥಿತಿ ಹಾಳಾಗಲು ಕುಡಿತವೇ ಕಾರಣವಾಗಿದೆ. ಆದ್ದರಿಂದ, ಶಿಬಿರದ ಲಾಭ ಪಡೆದು ನೆಮ್ಮದಿ ಜೀವನ ಸಾಗಿಸಬೇಕೆಂದರು.
    ಚಿಕ್ಕೋಡಿ ಜಿಲ್ಲಾ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಎಸ್.ಟಿ.ಮುನ್ನೊಳ್ಳಿ ಮಾತನಾಡಿ, ಮದ್ಯಪಾನ ಮುಕ್ತ ಸಮಾಜ ನಿರ್ಮಾಣದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದರು. ಸಿಪಿಐ ಎಚ್.ಡಿ.ಮುಲ್ಲಾ, ಯುವ ಧುರೀಣ ಧೂಳಗೌಡ ಪಾಟೀಲ, ಯೋಜನೆ ಜಿಲ್ಲಾ ನಿರ್ದೇಶಕ ಕೃಷ್ಣಾ ಟಿ., ಧಾರವಾಡ ಜನಜಾಗೃತಿ ವೇದಿಕೆ ಯೋಜನಾಧಿಕಾರಿ ನಾಗೇಶ ವೈ.ಎ., ಮಾತನಾಡಿದರು.

    ಮದ್ಯವರ್ಜನ ವ್ಯವಸ್ಥಾಪನಾ ಸಮತಿ ಅಧ್ಯಕ್ಷ ಜಯದೀಪ ದೇಸಾಯಿ, ತಾಲೂಕು ಯೋಜನಾಧಿಕಾರಿ ಸಂತೋಷಕುಮಾರ ರೈ, ಮುಖಂಡ ಕಿರಣ ಕಲ್ಲೋಳಿಕರ, ಪಪಂ ಅಧ್ಯಕ್ಷ ಸಂತೋಷ ಮೇತ್ರಿ, ವಕೀಲರ ಸಂಘದ ಅಧ್ಯಕ್ಷ ಆರ್.ಎಚ್.ಗೊಂಡೆ, ಕರವೇ ಅಧ್ಯಕ್ಷ ಅಶೋಕ ಅಂಗಡಿ, ಜನಜಾಗೃತಿ ವೇದಿಕೆ ಜಿಲ್ಲಾ ಉಪಾಧ್ಯಕ್ಷೆ ವಿದ್ಯಾ ಪೂಜಾರಿ, ಸದಸ್ಯರಾದ ವಸಂತ ಹೊಸಮನಿ, ಗಿರೀಶ ಪಾಟೀಲ, ಯಲ್ಲಪ್ಪ ಶಿಂಗೆ, ಜಿನೇಂದ್ರ ಖೇಮಲಾಪುರೆ, ರಾಜು ಗಡ್ಡಿ, ರಾಮಚಂದ್ರ ಹೊಸಮನಿ, ಸುರೇಶ ನಾಯ್ಕ, ಪ್ರದೀಪ ಶೆಟ್ಟಿ, ಕಾರ್ತಿಕ ಶಿರಹಟ್ಟಿ, ಗಜಾನನ ಕೊಕಾಟೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts