More

    ದುರಾಸೆ ಬದಲಾಗದಿದ್ದರೆ ಕ್ರಾಂತಿ  – ಸಂತೋಷ್ ಹೆಗ್ಡೆ ಎಚ್ಚರಿಕೆ – ಉಪನ್ಯಾಸ ಕಾರ್ಯಕ್ರಮ

    ದಾವಣಗೆರೆ: ಅಧಿಕಾರ ಹಾಗೂ ಆಸ್ತಿಯ ದುರಾಸೆಗೆ ಸಿಲುಕಿರುವ ಸಮಾಜವನ್ನು ಬದಲಾಯಿಸದೇ ಹೋದರೆ ಕ್ರಾಂತಿಯೇ ಉಂಟಾಗಲಿದೆ. ಇದರಿಂದ ಯಾರಿಗೂ ಗೆಲುವಿಲ್ಲ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಎಚ್ಚರಿಸಿದ್ದಾರೆ.
    ಜಿಲ್ಲಾ ವಕೀಲರ ಸಂಘದಿಂದ ವಕೀಲರ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಸಾಮಾಜಿಕ ಮೌಲ್ಯ ಮತ್ತು ಸಮಕಾಲೀನ ಸಮಾಜ’ ವಿಷಯ ಕುರಿತು ಉಪನ್ಯಾಸ ನೀಡಿದರು.
    ದುರಾಸೆಯಿಂದಾಗಿ ಭ್ರಷ್ಟಾಚಾರ ಹೆಚ್ಚಾಗಿ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮವಾಗುತ್ತಿದೆ. ಹೀಗೆಯೇ ಮುಂದುವರೆದರೆ ಭಾರತದ ಪರಿಸ್ಥಿತಿಯೂ ಪಕ್ಕದ ಪಾಕಿಸ್ತಾನ ಇಲ್ಲವೇ ಶ್ರೀಲಂಕಾ ರೀತಿ ಆಗಬಹುದು ಎಂದವರು ಕಳವಳ ವ್ಯಕ್ತಪಡಿಸಿದರು.
    ಹಣ ಗಳಿಸುವ ಹಾದಿಯಲ್ಲಿ ಸಾಕಷ್ಟು ಜನರಿಗೆ ಅನ್ಯಾಯ ಆಗುತ್ತಿದೆ. ಶ್ರೀಮಂತರಾಗುವ ಆಸೆ ತಪ್ಪಲ್ಲ. ಕಾನೂನಿನ ಚೌಕಟ್ಟಿನಲ್ಲಿ ಸಿರಿವಂತರಾಗಬೇಕು. ಹಣವಂತರು ಏನೇ ತಪ್ಪೆಸಗಿರೂ ಸಮಾಜ ಗೌರವಿಸುವುದು ಸರಿಯಲ್ಲ ಎಂದರು.
    ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ್‌ಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ, ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜೆ.ವಿ. ವಿಜಯಾನಂದ, ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಟಿ. ದಶರಥ ಉಪಸ್ಥಿತರಿದ್ದರು.
    ಕಲ್ಪನಾ ಕೆ. ಪತಂಗೆ ಪ್ರಾರ್ಥಿಸಿದರು. ವಕೀಲರ ಸಂಘದ ಉಪಾಧ್ಯಕ್ಷ ಜಿ.ಕೆ. ಬಸವರಾಜ ಸ್ವಾಗತಿಸಿದರು. ಕಾರ್ಯದರ್ಶಿ ಎಸ್. ಬಸವರಾಜ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts