More

    ದುಡಿಮೆ ಜತೆಗೆ ಆರೋಗ್ಯದ ಮೇಲಿರಲಿ ನಿಗಾ

    ಶಿಕಾರಿಪುರ: ದೇಶ ಕಟ್ಟಿದವರು, ದೇಶ ಕಟ್ಟುವವರು ಕಾರ್ಮಿಕರು. ಹಾಗಾಗಿ ತಮ್ಮ ಸುರಕ್ಷತೆ ಮತ್ತು ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ಕಟ್ಟಡ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಟಿ.ಮಹದೇವ ಆಚಾರ್ ಹೇಳಿದರು.
    ಸೋಮವಾರ ಪಟ್ಟಣದ ಕಟ್ಟಡ ಕಾರ್ಮಿಕರ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಮಿಕರ ಆರೋಗ್ಯ ತಪಾಸಣೆ ಹಾಗೂ ಸಂಚಾರಿ ಆರೋಗ್ಯ ವಾಹನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಕಾರ್ಮಿಕರು ಶ್ರಮಜೀವಿಗಳು. ನಿರಂತರವಾಗಿ ಕೆಲಸದಲ್ಲಿ ತೊಡಗುವ ಕಾರ್ಮಿಕರಿಗಾಗಿ ಸರ್ಕಾರ ಕಾರ್ಮಿಕ ಇಲಾಖೆ ಅಡಿಯಲ್ಲಿ ಸಂಚಾರಿ ಆರೋಗ್ಯ ಚಿಕಿತ್ಸಾ ವಾಹನದ ವ್ಯವಸ್ಥೆ ಮಾಡಿದ್ದು ಉತ್ತಮ ಕಾರ್ಯವಾಗಿದೆ. ಇದು ಕಾರ್ಮಿಕರು ಕೆಲಸ ಮಾಡುವ ಜಾಗದಲ್ಲಿಯೇ ಚಿಕಿತ್ಸೆ ನೀಡುತ್ತದೆ. ಸರ್ಕಾರದ ಈ ಸೌಲಭ್ಯವನ್ನು ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕು. ಈ ಮೂಲಕ ಆರೋಗ್ಯದ ಕಡೆಗೂ ಗಮನ ಕೊಡಬೇಕು ಎಂದು ತಿಳಿಸಿದರು.
    ಆರೋಗ್ಯ ಸಲಹಾ ಸಮಿತಿ ಸದಸ್ಯ ಶಿವಪ್ಪ ಬಿಎಸ್‍ಎನ್‍ಎಲï ಮಾತನಾಡಿ, ದುಡಿಯುವ ವರ್ಗಕ್ಕೆ ಸರ್ಕಾರ ಈ ಸೇವೆ ನೀಡಿರುವುದು ಉತ್ತಮವಾಗಿದೆ. ಎಲ್ಲ ಕಾರ್ಮಿಕರು ಇದರ ಸದುಪಯೋಗ ಪಡೆಯುವಂತೆ ಮನವಿ ಮಾಡಿದರು. ಸಂಚಾರಿ ಆರೋಗ್ಯ ವಾಹನ ತಪಾಸಣೆಯಲ್ಲಿ ನೂರಕ್ಕೂ ಹೆಚ್ಚು ಕಾರ್ಮಿಕರಿಗೆ ಚಿಕಿತ್ಸೆ ಹಾಗೂ ಔಷಧವನ್ನು ಉಚಿತವಾಗಿ ನೀಡಲಾಯಿತು.
    ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಮುನಿರತ್ನ, ಸಂಘದ ಜಿ¯್ಲÁ ಕಾರ್ಯದರ್ಶಿ ಕೆ.ಸುಂದರ್ ಬಾಬು, ಆರೋಗ್ಯ ಅ„ಕಾರಿ ಡಾ. ಪ್ರಗತಿ, ಸಂಘದ ಪದಾ„ಕಾರಿಗಳಾದ ಸೈಯದ್ ಸಲೀಂ, ಗಿಡ್ಡಪ್ಪ ಚೂರಿ, ರವಿಕುಮಾರ್, ಬಸವರಾಜಪ್ಪ, ಸತೀಶ, ರಹೀಮ್, ನಾಗರಾಜ್, ಹೊನ್ನಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts