More

    ದೀಪಾವಳಿ: ಎಣ್ಣೆ ಸ್ನಾನದ ಸಡಗರ, ನೀರು ತುಂಬುವ ಸಂಭ್ರಮ

    ಸೊರಬ: ದೀಪಾವಳಿ ಹಬ್ಬದ ಸಡಗರ, ಸಂಭ್ರಮ ತಾಲೂಕಿನಾದ್ಯಂತ ಮನೆ ಮಾಡಿದ್ದು, ಬೆಳಕಿನ ಹಬ್ಬವನ್ನು ಸಂಪ್ರದಾಯಬದ್ಧವಾಗಿ ಆಚರಣೆ ಮಾಡುತ್ತಿರುವ ದೃಶ್ಯಗಳು ಎಲ್ಲೆಡೆ ಕಂಡು ಬಂದವು. ಮೂರು ದಿನಗಳ ಕಾಲ ಆಚರಿಸಲ್ಪಡುವ ದೀಪಾವಳಿ ಹಬ್ಬದ ಮೊದಲ ದಿನವಾದ ನರಕ ಚತುರ್ದಶಿಯಂದು ಎಣ್ಣೆ-ಅರಿಶಿನ ಹಚ್ಚಿಕೊಂಡು ಸ್ನಾನ ಮಾಡಿ, ಮಹಿಳೆಯರು ಮತ್ತು ಮಕ್ಕಳು ಹೊಸ ಬಟ್ಟೆ ತೊಟ್ಟು ಕೆರೆ, ಬಾವಿಗಳಿಂದ ನೀರು ತುಂಬಿಕೊಂಡು ಬಂದು ಮನೆಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ಬಾರಿ ಮಂಗಳವಾರ ಸೂರ್ಯ ಗ್ರಹಣ ಇರುವುದರಿಂದ ಸೋಮವಾರವೇ ಬೂರೆ ಹಬ್ಬ, ಅಮಾವಾಸೆ ಹಬ್ಬ (ಲಕ್ಷ್ಮೀ ಪೂಜೆ) ಮಾಡಲಾಯಿತು. ಬಲಿಪಾಡ್ಯಮಿ ದಿನವಾದ ಬುಧವಾರ ದನ ಬೆದರಿಸುವ ಆಚರಣೆ ನಡೆಯಲಿದೆ.
    ನಿನ್ನೆಯೇ ವಾರದ ಸಂತೆ: ಹಬ್ಬ ಹಾಗೂ ಸೂರ್ಯ ಗ್ರಹಣದ ಕಾರಣ ಪ್ರತಿ ಮಂಗಳವಾರ ನಡೆಯುತ್ತಿದ್ದ ಸಂತೆ, ಈ ಬಾರಿ ಸೋಮವಾರವೇ ನಡೆಯಿತು. ಹೂವು, ಹಣ್ಣು, ತರಕಾರಿ ಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು. ದನಕರುಗಳ ಶೃಂಗಾರಕ್ಕೆ ರೈತರು ಹಗ್ಗ, ದಂಡೆ, ಗಂಟೆ ಹಾಗೂ ಗೆಜ್ಜೆ ಕೊಳ್ಳುತ್ತಿದ್ದ ದೃಶ್ಯ ಕಂಡುಬಂದವು. ಜಾನುವಾರುಗಳ ಶೃಂಗಾರದ ವಸ್ತುಗಳ ಮಾರಾಟ ಸಂತೆಗೆ ಮೆರಗು ತಂದಿತ್ತು. ಹೂವು-ಹಣ್ಣುಗಳ ಬೆಲೆ ದುಪ್ಪಟ್ಟಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts