More

    ಚಿನ್ನ-ಬೆಳ್ಳಿ ತೊಡಿಸಿ ಲಕ್ಷ್ಮೀ ಆರಾಧನೆ

    ಕನಕಗಿರಿ: ಬರದ ನಡುವೆಯೂ ಪಟ್ಟಣ ಸೇರಿ ತಾಲೂಕು ವ್ಯಾಪ್ತಿಯಲ್ಲಿ ದೀಪಾವಳಿಯನ್ನು ಭಾನುವಾರ ರಾತ್ರಿ ಲಕ್ಷ್ಮೀ ಪೂಜೆಯೊಂದಿಗೆ ಜನತೆ ಸಡಗರದಿಂದ ಆಚರಿಸಿದರು.

    ಎಪಿಎಂಸಿ ವ್ಯಾಪ್ತಿಯ ದಲಾಲಿ, ಫರ್ಟಿಲೈಜರ್ಸ್‌ ಸೇರಿ ಕಿರಾಣಿ, ಬಟ್ಟೆ, ಬೀದಿ ಅಂಗಡಿಗಳಲ್ಲಿ ಗಣಪತಿ, ಸರಸ್ವತಿ ಹಾಗೂ ಲಕ್ಷ್ಮೀಗೆ ಚಿನ್ನ, ಬೆಳ್ಳಿ ಸರಗಳನ್ನು ತೊಡಿಸಿ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. ಯಂತ್ರೋಪಕರಣಗಳಿರುವ ಅಂಗಡಿಗಳಲ್ಲಿ ಮಾವಿನ ತೋರಣ, ಚೆಂಡು, ಅಡಕೆ ಹಾಗೂ ರೇಷ್ಮೆ ಹೂಗಳಿಂದ ಅಲಂಕರಿಸಲಾಗಿತ್ತು. ಅಂಗಡಿಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಿದವು.

    ದೀಪಾವಳಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಸರ್ಕಾರ ಆದೇಶಿಸಿತ್ತು. ಇದರಿಂದ ತಾಲೂಕಾಡಳಿತ ಹಾನಿಕಾರಕ ಪಟಾಕಿ ಮಾರಾಟ ಮಾಡುತ್ತಿದ್ದ ಅಂಗಡಿಗಳಿಗೆ ದಾಳಿ ಮಾಡಿತ್ತು. ಆದರೂ, ಪೂಜೆಯ ನಂತರ ಕೆಲ ಅಂಗಡಿಗಳ ಮುಂದೆ ಹಾನಿಕಾರಕ ಪಟಾಕಿಗಳನ್ನು ಸಿಡಿಸಲಾಯಿತು.

    ಭಾನುವಾರ ರಾತ್ರಿಯಿಂದ ಸೋಮವಾರ ಮಧ್ಯಾಹ್ನದವರೆಗೂ ಎರಡೂ ದಿನ ಅಮಾವಾಸ್ಯೆ ಆಚರಿಸಲಾಗಿದ್ದು, ಮಂಗಳವಾರ ಲಕ್ಷ್ಮೀ ವಾರ ಆಗಿದ್ದರಿಂದ ಬುಧವಾರ ಉತ್ತರ ಪೂಜೆಯೊಂದಿಗೆ ಲಕ್ಷ್ಮೀ ವಿಸರ್ಜನೆ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts