More

    ಖಾಲಿ ಹೊಲದಲ್ಲೇ ಸಡಗರ

    ಗೊರೇಬಾಳ: ಗ್ರಾಮದ ರೈತರು ಕುಟುಂಬ ಸಹಿತ ಹೊಲಗಳಿಗೆ ತೆರಳಿ ಭುಮಿತಾಯಿಗೆ ಚೆರಗ ಚೆಲ್ಲಿ ಸಂತೃಪ್ತ ಗೊಳಿಸಿದರು.

    ಈಗಾಗಲೇ ಭತ್ತದ ಕೊಯ್ಲು ಮುಗಿದಿದ್ದು, ತುಂಗಭದ್ರಾ ಜಲಾಶಯದಲ್ಲಿ ನೀರಿನ ಕೊರತೆಯಿಂದಾಗಿ ಭತ್ತದ ಎರಡನೇ ಫಸಲು ಇಲ್ಲದಂತಾಗಿದೆ. ಖಾಲಿ ಹೊಲದಲ್ಲೇ ಬನ್ನಿ ಗಿಡದ ಬುಡದಲ್ಲಿ ಪಾಂಡವರನ್ನು ಪ್ರತಿಷ್ಠಾಪಿಸಿ ಅಷ್ಟ ದಿಕ್ಕುಗಳಿಗೆ ಹುಲಿ ಹುಲಿಗ್ಯ ಎಂದು ಹೇಳುವ ಮೂಲಕ ಸಿಹಿ ಖಾದ್ಯದ ಚೆರಗವನ್ನು ರೈತರು ಚೆಲ್ಲಿದರು. ಎಳ್ಳು, ಶೇಂಗಾ ಹೋಳಿಗೆ, ಬದನೆಕಾಯಿ ಪಲ್ಯ, ಸಜ್ಜೆ ರೊಟ್ಟಿ ಇತರ ತಿನಿಸುಗಳನ್ನು ತಯಾರಿಸಿ ಕುಟುಂಬ ಸಮೇತ ಊಟ ಮಾಡಿ ಸಂಭ್ರಮಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts