More

    ದಿನ ಪತ್ರಿಕೆಗಳ ಓದಿನಿಂದ ಸಾಮಾನ್ಯ ಜ್ಞಾನ ವೃದ್ಧಿ

    ಚಿತ್ರದುರ್ಗ: ವಿದ್ಯೆ ಯಾರಪ್ಪನ ಸ್ವತ್ತೂ ಅಲ್ಲ,ಎಲ್ಲರೂ ಶಿಕ್ಷಣ ಪಡೆಯುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಜಿಲ್ಲಾ ಉಸ್ತುವಾ ರಿ ಸಚಿವ ಡಿ.ಸುಧಾಕರ್ ಹೇಳಿದರು.

    ರಾಜ್ಯಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ,ನಗರದ ತರಾಸು ರಂಗಮಂದಿರದಲ್ಲಿ ಸೋಮವಾ ರ ಏರ್ಪಡಿಸಿದ್ದ ಜಿಲ್ಲಾಉಸ್ತುವಾರಿ ಸಚಿವ, ಜಿಲ್ಲೆಯ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಸನ್ಮಾನ,ಎಸ್ಸೆಸ್ಸೆಲ್ಸಿ,ಸೆಕೆಂಡ್‌ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗ ಳೊಂದಿಗೆ ಉತ್ತೀರ್ಣರಾದ ಜಿಲ್ಲೆಯ ರಾಜ್ಯಸರ್ಕಾರಿ ನೌಕರರ ಪ್ರತಿಭಾವಂಥ ಮಕ್ಕಳ ಪ್ರತಿಭಾಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು,ಆಧುನಿಕ ಜಗತ್ತಿನ ಸವಾಲುಗಳನ್ನು ಎದುರಿಸಲು ಸಾಮಾನ್ಯ ಜ್ಞಾನದರಿವು ಅಗತ್ಯ.

    ಪಠ್ಯಪುಸ್ತಕಗಳ ಜತೆ ದಿನ ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳ ಬೇಕು. ಕೇವಲ ಪಠ್ಯಾಧ್ಯಯನ ಪುಸ್ತಕದ ಬದನೆಕಾಯಿ ಅನಿಸಿ ಕೊಳ್ಳುತ್ತದೆ. ಜಗತ್ತಿನ ಆಗುಹೋಗುಗಳ ತಿಳಿವಳಿಕೆ,ಪರಿಶ್ರಮದೊಂದಿಗೆ ಗುರಿ ಸಾಧಿಸುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

    ನಮ್ಮ ಸರ್ಕಾರ ಈಡೇರಿಸಿರುವ ಗ್ಯಾರಂಟಿಗಳ ಯಶಸ್ವಿ ಅನುಷ್ಠಾನಕ್ಕೆ ನೌಕರರ ಸಹಕಾರ ಅಗತ್ಯ. ಗ್ಯಾರಂಟಿಗಳಿಂದಾಗಿ ಪ್ರಸಕ್ತ ಸಾಲಿನಲ್ಲಿ ಒಂದಿಷ್ಟು ಆರ್ಥಿಕ ಹೊರೆಯಾಗಿದೆ,ಆದರೆ ಮುಂದಿನ ಹಣಕಾಸು ಸಾಲಿನಿಂದ ಅಭಿವೃದ್ಧಿ ಕೆಲಸಗಳಿಗೆ ಅನುದಾನ ಸಿಗಲಿದೆ ಎಂದು ವಿ ಶ್ವಾಸ ವ್ಯಕ್ತಪಡಿಸಿದರು.

    ಚಳ್ಳಕೆರೆ ಶಾಸಕ ಟಿ.ರಘಮೂರ್ತಿ ಮಾತನಾಡಿ,ನೌಕರ ವರ್ಗಕ್ಕೆ ರಾಜಕಾರಣ ಬೇಕಾಗಿಲ್ಲ. ಯಾವುದೇ ಪಕ್ಷ ಅಧಿಕಾರದಲ್ಲಿ ಇರಲಿ,ಸಕಾ ರರ್ದ ಯೋಜನೆಗಳನ್ನು ಪ್ರಾಮಾಣಿಕವಾಗಿ ಜನರಿಗೆ ತಲುಪಿಸುವ ಕೆಲಸ ಕಾರ‌್ಯಾಂಗದ್ದಾಗಿದೆ. ಕಾರ‌್ಯಾಂಗ-ಶಾಸಕಾಂಗ ಪರಸ್ಪರ ಒಂದು ಬಂಡಿಯ ಚಕ್ರಗಳಿದ್ದಂತೆ. ಇವರೆಡೂ ಹಾದಿ ತಪ್ಪಿದರೆ ನ್ಯಾಯಾಂಗ ಮಧ್ಯಪ್ರವೇಶಿಸುತ್ತದೆ ಎಂದರು.

    ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು,ಕಳೆದ ನಾಲ್ಕು ವರ್ಷಗಳಿಂದ ನೌ ಕರರ ಮಕ್ಕಳಿಗೆ ಪ್ರತಿಭಾಪುರಸ್ಕಾರ ಕಾರ‌್ಯಕ್ರಮ ಏರ್ಪಡಿಸಿಕೊಂಡು ಬರುತ್ತಿದೆ. ಪ್ರತಿ ವರ್ಷ 8 ಸಾವಿರಕ್ಕೂ ಹೆಚ್ಚು ಮಕ್ಕಳನ್ನು ಪುರಸ್ಕರಿಸ ಲಾ ಗುತ್ತಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಈ ಬಾರಿ 250 ವಿದ್ಯಾರ್ಥಿಗಳನ್ನು ಗೌರವಿಸಲಾಗುತ್ತಿದೆ. ಪ್ರತಿ ವಿದ್ಯಾರ್ಥಿಗೆ ಒಂದು ಸಾವಿರ ರೂ.ನಗ ದು,ಸ್ಮರಣಿಕೆ ನೀಡಲಾಗುತ್ತಿದೆ.

    ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವ ಹೊಣೆ ನಮ್ಮ ಮೇಲಿದೆ. ಚುನಾವಣೆ ಪೂರ್ವದಲ್ಲಿ ಭರವಸೆ ನೀಡಿದಂತೆ 7ನೇ ವೇತನ ಆಯೋಗದ ಶಿಫಾರಸು ಹಾಗೂ ಎನ್‌ಪಿಎಸ್ ರದ್ದುಪಡಿಸಿ ಒಪಿಎಸ್‌ನ್ನು ರಾಜ್ಯಸರ್ಕಾರ ಜಾರಿಗೊಳಿಸಬೇಕಿದೆ ಎಂದರು.

    ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್,ಎಡಿಸಿ ಬಿ.ಟಿ.ಕುಮಾರಸ್ವಾಮಿ,ಎಸಿ ಎಂ.ಕಾರ್ತಿಕ್,ಜಿಪಂ ಡಿಎಸ್ ಡಾ.ರಂಗಸ್ವಾಮಿ,ಮಾ ಜಿ ಸದಸ್ಯ ನಾಗೇಂದ್ರನಾಯ್ಕ,ಸಂಘದ ಜಿಲ್ಲಾಧ್ಯಕ್ಷ ಕೆ.ಟಿ.ತಿಮ್ಮಾರೆಡ್ಡಿ,ಮಾಜಿ ಅಧ್ಯಕ್ಷ ಕೆ.ಜಿ.ಜಗದೀಶ್,ಡಿಡಿಪಿಐ ಕೆ.ರವಿಶಂಕರ್‌ರೆಡ್ಡಿ,ಡಿಡಿ ಪಿಯು ಎ.ರಾಜು,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ. ತಾಜ್‌ಪೀರ್,ಎಂ.ವಿ.ರುದ್ರಪ್ಪ,ಎಸ್.ಬಸವರಾಜು,ಮಲ್ಲಿಕಾರ್ಜುನ ಬಳ್ಳಾರಿ,ಡಾ.ಸ ದಾನಂದ ನೆಲ್ಕುದರಿ,ಸಿದ್ದೇಶ್ವರ್,ವೇಣುಗೋಪಾಲ್ ಮತ್ತಿತರ ಸಂಘದ ರಾಜ್ಯ,ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳು,ತಾಲೂಕು ಶಿಕ್ಷಣಾಧಿಕಾರಿಗಳು,ನಾನಾ ಪ್ರಮುಖರು ಇದ್ದರು.

    ಸಂಘದ ಜಿಲ್ಲಾ ಶಾಖೆ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ‌್ಯಕ್ರಮ ನೆರವೇರಿತು.


    ಕೋಟ್
    ಮೊಬೈಲ್‌ನಿಂದಾಗಿ ಇಂದು ಓದಿನ ಕಡೆ ಯಾರಿಗೂ ಗಮನವಿಲ್ಲದಂತಾಗುತ್ತಿದೆ. ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಓ ದಿನೆಡೆ ಹೆಚ್ಚಿನ ಗಮನ ಹರಿಸಬೇಕಿದೆ. ಸರ್ಕಾರಿ ನೌಕರಿಗೆಂದು ಓದದೆ,ವೃತ್ತಿ ಕೌಶಲ್ಯಗಳನ್ನು ತಿಳಿಯಲು ವಿದ್ಯಾರ್ಥಿಗಳು ಮುಂದಾಗ ಬೇಕು.ಪಾಲಕರು,ಶಿಕ್ಷಕರು,ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು.
    ಬಿ.ಟಿ.ಕುಮಾರಸ್ವಾಮಿ,ಎಡಿಸಿ,ಚಿತ್ರದುರ್ಗ.


    .


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts