More

    ದಾರಿ ತಪ್ಪುತ್ತಿರುವ ಇಂದಿನ ಯುವಕರು

    ಹುಣಸಗಿ : ಇಂದಿನ ಯುವಕರು ನಮ್ಮ ದೇಶದ ಇತಿಹಾಸ ಅರಿತುಕೊಳ್ಳದೇ ದಾರಿ ತಪ್ಪುತ್ತಿದ್ದಾರೆ ಎಂದು ಧರ್ಮಜಾಗರಣ ವೇದಿಕೆಯ ಉತ್ತರ ಪ್ರಾಂತ ಪ್ರಮುಖ ಸ್ವತಂತ್ರ ಶಿಂಧೆ ಆತಂಕ ವ್ಯಕ್ತಪಡಿಸಿದರು.

    ಪಟ್ಟಣದ ಒಳ ಅಗಸಿಯಲ್ಲಿ ವಿಶ್ವ ಹಿಂದು ಪರಿಷತ್ ಹಾಗೂ ಭಜರಂಗ ದಳ ಗುರುವಾರ ಹಮ್ಮಿಕೊಂಡ ಶೌರ್ಯ ಜಾಗರಣ ಯಾತ್ರೆಯ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಈ ಯಾತ್ರೆ ಮೂಲಕ ನಮ್ಮ ಯುವಕರಿಗೆ ಶೌರ್ಯ ಸಾಹಸದ ಚರಿತ್ರೆ ನೆನಪಿಸಿಕೊಡಲಾಗುತ್ತಿದೆ. ಹಾಗೆಯೇ ಛತ್ರಪತಿ ಶಿವಾಜಿ, ರಾಣಾ ಪ್ರತಾಪ್‌ಸಿಂಹ, ಭಗತ್‌ಸಿಂಗ್ ಮತ್ತು ವೀರ ಸಾವರಕರ ಅಂತಹ ವ್ಯಕ್ತಿಗಳ ಚರಿತ್ರೆ ತಿಳಿದುಕೊಳ್ಳಬೇಕು ಎಂದು ಯುವಕರಿಗೆ ಕಿವಿ ಮಾತು ಹೇಳಿದರು.

    ವಿಶ್ವದ ಬಹುತೇಕ ದೇಶಗಳು ಇಂದು ಭಾರತೀಯ ಸಂಸ್ಕೃತಿ ಹಾಗೂ ಪರಂಪರೆತಿಳಿದುಕೊಳ್ಳಲು ಉತ್ಸುಕದಲ್ಲಿವೆ. ಆದರೆ ನಮ್ಮ ದೇಶದಲ್ಲಿರುವ ಕೆಲವರು ನಮ್ಮ ಧರ್ಮ ಮತ್ತು ಸಂಸ್ಕೃತಿಯನ್ನು ನಿಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇದಕ್ಕೆ ಕೆಲ ರಾಜಕಾರಣಿಗಳ ಬೆಂಬಲ ಕೂಡ ಇದೆ. ಆದರೆ ಇಂತಹ ಘಟನೆ ಮೆಟ್ಟಿ ನಿಲ್ಲುವ ತಾಕತ್ತು ಭಾರತಕ್ಕಿದೆ. ಇತಿಹಾಸದುದ್ದಕ್ಕೂ ಇಂತರಹ ಹಲವಾರು ಸವಾಲುಗಳನ್ನು ಭಾರತ ಎದುರಿಸುತ್ತಾ ಬಂದಿದೆ ಎಂದರು.

    ಅಗತೀರ್ಥನ ಶಾಂತಮಯ ಸ್ವಾಮೀಜಿ ಮಾತನಾಡಿದರು. ದೇವಾಪುರ ಹಿರೇಮಠದ ಶಿವಮೂರ್ತಿ ಶಿವಾಚಾರ್ಯ, ಗುಳಬಾಳದ ಮರಿ ಹುಚ್ಚೇಶ್ವರ ಸ್ವಾಮೀಜಿ, ಕೆಂಭಾವಿಯ ಚನ್ನಬಸವ ಶಿವಾಚಾರ್ಯ, ವಜ್ಜಲ ತಾಂಡಾದ ವಿಠ್ಠಲ ಮಹಾರಾಜ್, ಬಲಶೆಟ್ಟಿಹಾಳದ ಸಿದ್ಧಲಿಂಗ ಶಾಸ್ತಿç, ವಿಶ್ವ ಹಿಂದು ಪರಿಷತ್ ಜಿಲ್ಲಾ ಸೇವಾ ಪ್ರಮುಖ ಬಸವರಾಜ ವೈಲಿ, ಉಪಾಧ್ಯಕ್ಷ ವೆಂಕಟೇಶ ಅರಳಿಗಿಡ, ತಾಲೂಕು ಅಧ್ಯಕ್ಷ ನೀಲಕಂಠ ಸ್ವಾಮಿ ವಿರಕ್ತಮಠ ಇದ್ದರು.
    ವಿನೋದ ದೊರೆ ಸ್ವಾಗತಿಸಿದರು. ಮಹೇಶ ಸ್ಥಾವರಮಠ ವಂದಿಸಿದರು. ಆನಂದ ಬಾರಿಗಿಡದ ನಿರೂಪಣೆ ಮಾಡಿದರು. ಕರ‍್ಯಕ್ರಮಕ್ಕೂ ಮುನ್ನ ಭಾರತ ಮಾತೆಯ ಭಾವಚಿತ್ರದ ಮೆರವಣಿಗೆ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts