More

    ದಾನಗಳಲ್ಲಿ ಮತದಾನ ಸರ್ವಶ್ರೇಷ್ಠ


    ಯಾದಗಿರಿ: ಎಲ್ಲ ದಾನಗಳಿಗಿಂತಲೂ ಚುನಾವಣೆಗಳಲ್ಲಿ ಮತದಾನ ಮಾಡುವುದು ಶ್ರೇಷ್ಠ ದಾನವಾಗಿದೆ.ಹೀಗಾಗಿ ಎಲ್ಲರು ತಪ್ಪದೇ ಮತದಾನ ಮಾಡುವಂತೆ ಪಂಚಾಯತ ಅಭಿವೃದ್ಧಿ ಅಕಾರಿ ನೀಲಕಂಠ ಶಹಾಪೂರಕರ್ ಸಲಹೆ ನೀಡಿದರು.
    ಯಾದಗಿರಿ ತಾಪಂ, ಹಾಗೂ ತಾಲೂಕು ಸ್ವೀಪ್ ಸಮಿತಿಯಿಂದ ತಾಲೂಕಿನ ಮುದ್ನಾಳ್ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ನರೇಗಾ ಕೋಲಿ ಕಾಮರ್ಿಕರಿಗೆ ಮತದಾನ ಜಾಗೃತಿ ಅಭಿಯಾನದಲ್ಲಿ ಮಾತನಾಡಿ, ಪ್ರತಿ ಐದು ವರ್ಷಕ್ಕೊಮ್ಮೆ ಚುನಾವಣೆ ಬರುತ್ತವೆ. ನಿಮ್ಮ ಒಂದು ಮತ ದೇಶವನ್ನು ಸದೃಢಗೊಳಿಸುತ್ತದೆ. ಹೀಗಾಗಿ ತಮ್ಮ ಹಕ್ಕನ್ನು ತಪ್ಪದೆ ಚಲಾಯಿಸಬೇಕು ಎಂದು ಕಿವಿಮಾತು ಹೇಳಿದರು.
    ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳು ಹಬ್ಬಗಳಿದ್ದಂತೆ. ಸಡಗರದಿಂದ ಈ ಪ್ರಕ್ರಿಯೆಯಲ್ಲಿ ಎಲ್ಲರು ಭಾಗವಹಿಸಬೇಕು. ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶದ ಪ್ರತಿಯೊಬ್ಬರಿಗೆ ಮತದಾನದ ಹಕ್ಕು ಕೊಡಿಸಿದ್ದಾರೆ. ಚುನಾವಣೆಗಳಲ್ಲಿ ಮತ ಹಾಕುವುದು ನಮ್ಮ ಹಕ್ಕು ಎಂದರು.
    ಪುರುಷರಿರಲಿ, ಮಹಿಳೆಯರಿರಲಿ, ವಿಶೇಷಚೇತನರಿರಲಿ 18ವರ್ಷ ಪೂರೈಸಿದ ಮತದಾರ ಪಟ್ಟಿಯಲ್ಲಿ ಹೆಸರಿರುವರು ಚುನಾವಣೆಯಲ್ಲಿ ಮತ ಹಾಕುವುದು ಸಂವಿಧಾನಾತ್ಮಕ ಹಕ್ಕಾಗಿದೆ. ಯಾವುದೇ ಆಮಿಷಗಳಿಗೆ ಒಳಗಾಗದೆ ಮತದಾನದ ದಿನ ಎಲ್ಲ ಕೆಲಸಗಳನ್ನು ಬದಿಗಿಟ್ಟು ನಿಮ್ಮ ಮತದಾನ ಕೇಂದ್ರಕ್ಕೆ ತೆರಳಿ ಎಲ್ಲರೂ ಮತ ಚಲಾುಸುವುದು ಜವಾಬ್ದಾರಿಯುತ ಪ್ರಜೆಗಳ ಕರ್ತವ್ಯ ಎಂದು ತಿಳಿಸಿದರು.

    ಐಇಸಿ ಸಂಯೋಜಕ ಬಸಪ್ಪ ಹೋತಪೇಟ, ಗ್ರಾಪಂ ಅಮಜದ್ ಖಾನ್, ಕಾಯಕ ಬಂಧು ತ್ರಿವೇಣಿ, ಸಾಬಣ್ಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts