More

    ದಾದಿಯರ ಸೇವೆ ಅಮೋಘ

    ಔರಾದ್: ಎಷ್ಟೇ ಸಣ್ಣ ರೋಗವಿದ್ದರೂ ಆರೈಕೆ ಮಾಡುವ ದಾದಿಯರ ಸೇವೆ ಅಮೋಘವಾದದ್ದು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ತಾಲೂಕು ಪ್ರಮುಖ ಅಂಬಾದಾಸ ನಳಗೆ ಹೇಳಿದರು.
    ವಿಶ್ವ ದಾದಿಯರ ದಿನ ನಿಮಿತ್ತ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಫ್ಲಾರೆನ್ಸ್ ನೈಟಿಂಗೇಲ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಕರೊನಾ ವಿರುದ್ಧದ ಹೋರಾಟದಲ್ಲಿ ತಮ್ಮ ಜೀವದ ಹಂಗು ತೊರೆದು ಹಗಲಿರುಳು ಸೇವೆ ಸಲ್ಲಿಸುತ್ತಿರುವ ನರ್ಸ್​ಗಳ ಸೇವೆ ಶ್ಲಾಘನೀಯ. ಅವರ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
    ಮುಖಂಡ ಹಾವಪ್ಪ ದ್ಯಾಡೆ ಮಾತನಾಡಿ, ಚಿಕಿತ್ಸೆ ಇಲ್ಲದ ಕರೊನಾ ವೈರಸ್ ರಣಕೇಕೆ ಹಾಕುತ್ತಿರುವ ಸಂದರ್ಭದಲ್ಲಿ ಯೋಧರಂತೆ ದಾದಿಯರ ಸೇವೆ ಶ್ಲಾಘನೀಯ. ಕೆಲವೊಮ್ಮೆ ವೈದ್ಯ ನೀಡಿದ ಔಷಧಕ್ಕಿಂತ ದಾದಿಯರು ನೀಡುವ ಸೇವೆ ಮುಖ್ಯವಾಗಿರುತ್ತದೆ. ಕರೊನಾ ತೀವ್ರತೆ ಹೆಚ್ಚಾಗುತ್ತಿದ್ದು, ದಾದಿಯರಿಗೆ ಪಿಪಿಇ ಕಿಟ್ ಸೇರಿ ಎಲ್ಲ ವೈದ್ಯಕೀಯ ಸೌಲಭ್ಯ ಸರ್ಕಾರ ನೀಡಬೇಕು ಎಂದರು.
    ಪ್ರಮುಖರಾದ ಅನೀಲ ಮೇತ್ರೆ, ರಮೇಶ ವಾಘಮಾರೆ, ಮಾರುತಿ ಧನೆ, ಪ್ರಮೋದ, ಡಾ.ಮಹೇಶ ಬಿರಾದಾರ, ಡಾ.ಶಿಲ್ಪಾ ಶಿಂಧೆ, ಡಾ.ಪ್ರವೀಣ ಬುಟ್ಟೆ, ಡಾ.ವಿಜಯಲಕ್ಷ್ಮೀ, ನರ್ಸ್​ಗಳಾದ ಇಂದಿರಾ, ಕೇವಲಾಬಾಯಿ, ಎಲಿಜಬೇತ್ ಲೀನಾ, ಪ್ರವೀಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts