More

    ದಡದಹಳ್ಳಿಗೆ ಬಸ್ ಸಂಚಾರ ಪ್ರಾರಂಭ

    ಹಸಿರು ನಿಶಾನೆ ತೋರಿದ ಶಾಸಕ ಸಿ.ಎನ್. ಬಾಲಕೃಷ್ಣ

    ಚನ್ನರಾಯಪಟ್ಟಣ: ಸಾರ್ವಜನಿಕರು ಸಾರಿಗೆ ಬಸ್‌ಗಳಲ್ಲಿ ಸಂಚಾರಿಸಿದಲ್ಲಿ ಮಾತ್ರ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಶಕ್ತಿ ತುಂಬಲು ಸಾಧ್ಯವೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.


    ತಾಲೂಕಿನ ದಡದಹಳ್ಳಿ ಗ್ರಾಮದಿಂದ ಚನ್ನರಾಯಪಟ್ಟಣಕ್ಕೆ ಪ್ರಾರಂಭಿಸಿರುವ ಸಾರಿಗೆ ಬಸ್ ಸಂಚಾರಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿ, ಕೆಎಸ್‌ಆಆರ್‌ಟಿಸಿ ನಿಗಮ ಅರ್ಥಿಕ ಸಂಕಷ್ಟದಲ್ಲಿದ್ದರೂ ತಮ್ಮ ಕೋರಿಕೆಗೆ ಅಧಿಕಾರಿಗಳು ಸ್ಪಂದಿಸಿದ್ದಾರೆ ಎಂದರು.


    ಪ್ರತಿದಿನ ಬೆಳಗ್ಗೆ 8.30ಕ್ಕೆ ಚನ್ನರಾಯಪಟ್ಟಣದಿಂದ ಹೊರಟು ಹೌಸಿಂಗ್ ಬೋರ್ಡ್, ಶ್ರೀನಿವಾಸಪುರ, ನಲ್ಲೂರು ಹಾಗೂ ದೊಡ್ಡಗನ್ನಿ ಮೂಲಕ ದಡದಹಳ್ಳಿಗೆ ಆಗಮಿಸಲಿದೆ. ಆದೇ ರೀತಿ ಸಂಜೆ 5.15ಕ್ಕೆ ಬಸ್ ನಿಲ್ದಾಣದಿಂದ ಹೊರಟು ದಡದಹಳ್ಳಿಗೆ ಆಗಮಿಸಿ ಆನೆಗೊಳ ಗ್ರಾಮದ ಮೂಲಕ ಚನ್ನರಾಯಪಟ್ಟಣಕ್ಕೆ ತಲುಪಲಿದೆ ಎಂದು ತಿಳಿಸಿದರು.


    ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಬಸ್ ಸಂಚಾರಕ್ಕೆ ಬೇಡಿಕೆ ಇಟ್ಟಿದ್ದ ಹಿನ್ನೆಲೆಯಲ್ಲಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಖಾಯಂ ಮಾರ್ಗದಡಿ ಬಸ್ ವ್ಯವಸ್ಥೆ ಒದಗಿಸಲಾಗಿದೆ. ಇದರಿಂದ ಸಾರ್ವಜನಿಕರಿಗಷ್ಟೇ ಅಲ್ಲದೇ ಕಚೇರಿ, ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.


    ಆನೆಗೊಳ ಗ್ರಾಮಕ್ಕೆ ಹೋಗುವ ಮಾರ್ಗಮಧ್ಯೆ ಇರುವ ಸೇತುವೆ ಕಿರಿದಾಗಿದ್ದು, ಆದನ್ನು ಶೀಘ್ರದಲ್ಲೇ ಸರಿಪಡಿಸಲಾಗುವುದು. ಅಲ್ಲದೆ, ತಾಲೂಕಿನಲ್ಲಿ ಅಗತ್ಯವಿರುವ ಮಾರ್ಗಗಳನ್ನು ಗುರುತಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.


    ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ನಂಜುಂಡೇಗೌಡ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಗಿಡ್ಡಮ್ಮ, ಸದಸ್ಯ ದಿವಾಕರ್, ಸೊಸೈಟಿ ಅಧ್ಯಕ್ಷ ವಾಸು, ಮಾಜಿ ಅಧ್ಯಕ್ಷ ಕುಮಾರ್, ಮುಖಂಡರಾದ ಯೋಗಣ್ಣ, ತಾರನಾಥ್, ಪ್ರಕಾಶ್, ಕೆಎಸ್‌ಆರ್‌ಟಿಸಿ ಅಧಿಕಾರಿ ನಾಗೇಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts