More

    ತೋರಿಕೆಗಾಗಿ ದೇವರ ಸೇವೆ ಬೇಡ

    ಹಾಸನ: ‘ಮನುಷ್ಯ ಕೊಟ್ಟದ್ದು ಮನೆವರೆಗೆ, ದೇವರು ಕೊಟ್ಟದ್ದು ಕೊನೆವರೆಗೆ’ ಎಂಬ ನಾಣ್ಣುಡಿ ಅರಿತು ಬದುಕಬೇಕು ಎಂದು ಕಂದಾಯ ಸಚಿವ ಆರ್. ಅಶೋಕ್ ಕಿವಿಮಾತು ಹೇಳಿದರು.

    ತಾಲೂಕಿನ ದೇವರಾಯಪಟ್ಟ ಗ್ರಾಮದಲ್ಲಿ ಶುಕ್ರವಾರ ಶ್ರೀ ವೀರಾಂಜನೇಯ ದೇವಾಲಯ ಲೋಕಾರ್ಪಣೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
    ಹಣದ ಬದಲಿಗೆ ಪ್ರೀತಿ, ವಿಶ್ವಾಸದಿಂದ ದೇವಸ್ಥಾನಕ್ಕೆ ಬರಬೇಕು. ತೋರಿಕೆಗಾಗಿ ದೇವರ ಸೇವೆ ಮಾಡುವುದು ಬೇಡ. ಮಾಡುವ ಕೆಲಸದಲ್ಲಿ ಶ್ರದ್ಧೆ, ಪ್ರಾಮಾಣಿಕತೆ ಹಾಗೂ ನಂಬಿಕೆಯಿದ್ದರೆ ದೇವರು ಹರಸುತ್ತಾನೆ. ಗುಡಿ ಗೋಪುರ ಕಟ್ಟುವ ಕೆಲಸ ಒಬ್ಬರಿಂದ ಸಾಧ್ಯವಿಲ್ಲ. ಆದ್ದರಿಂದ ಗ್ರಾಮದ ಎಲ್ಲರೂ ಆರ್ಥಿಕ ನೆರವು ನೀಡಬೇಕು ಎಂದರು.

    ಭಾರತೀಯ ಪರಂಪರೆ ಹಾಗೂ ಸಂಸ್ಕೃತಿಗೆ ತನ್ನದೇಯಾದ ಇತಿಹಾಸವಿದೆ. ದೇಶವನ್ನು ಫ್ರೆಂಚರು, ಬ್ರಿಟಿಷರು ಸೇರಿದಂತೆ ಅನೇಕ ವಿದೇಶಿಗರು ಆಳಿದ್ದಾರೆ. ಜತೆಗೆ ಅಪಾರ ಸಂಪತ್ತನ್ನು ಲೂಟಿ ಹೊಡೆದಿದ್ದಾರೆ. ಆದರೆ, ಇಲ್ಲಿನ ಸಂಸ್ಕೃತಿ, ಪರಂಪರೆ ಲೂಟಿ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಭಾರತೀಯ ಸಂಸ್ಕೃತಿ ಅಷ್ಟೊಂದು ಮಹತ್ವದ್ದಾಗಿದೆ ಎಂದು ಹೇಳಿದರು.

    ಭಾರತೀಯ ಆಧ್ಯಾತ್ಮಿಕ ಪರಂಪರೆಯನ್ನು ಉಳಿಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕು. ಭವಿಷ್ಯದ ಪೀಳಿಗೆಗೆ ದೇಶದ ನೈಜ ಇತಿಹಾಸ ತಿಳಿಸಬೇಕು ಎಂದರು.

    ಶಾಸಕ ಪ್ರೀತಂ ಜೆ.ಗೌಡ ಮಾತನಾಡಿದರು. ಜಿಲ್ಲಾಧಿಕಾರಿ ಆರ್. ಗಿರೀಶ್, ಡಿ.ಟಿ. ಪ್ರಕಾಶ್, ಪ್ರದೀಪ್, ರಾಕೇಶ್ ಕುಮಾರ್ ಹಾಗೂ ಇತರರಿದ್ದರು. ಸಚಿವರನ್ನು ಭವ್ಯ ಮೆರವಣಿಗೆ ಮೂಲಕ ಕರೆತರಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts