More

    ತೋಟಿಕೆರೆ ಕೋಡಿ ನಿರ್ಮಾಣ, ಏರಿ ಅಭಿವೃದ್ಧಿ


    ಚನ್ನರಾಯಪಟ್ಟಣ: ಎರಡು ಕೋಟಿ ರೂ. ವೆಚ್ಚದಲ್ಲಿ ತಾಲೂಕಿನ ತೋಟಿ ಗ್ರಾಮದ ಕೆರೆಯ ಕೋಡಿ ನಿರ್ಮಾಣ ಹಾಗೂ ಏರಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಸಿ.ಎನ್.ಬಾಲಕೃಷ್ಣ ಮಂಗಳವಾರ ಭೂಮಿಪೂಜೆ ನೆರವೇರಿಸಿದರು.

    ಈ ಭಾಗದಲ್ಲಿ ಸುಮಾರು 15-20 ವರ್ಷಗಳಿಂದ ವಾಡಿಕೆಯಂತೆ ಮಳೆಯಾಗಿರಲಿಲ್ಲ. ಆದರೆ ಕಳೆದ ವರ್ಷ ವ್ಯಾಪಕ ಮಳೆ ಸುರಿದ ಹಿನ್ನೆಲೆ ಕೆರೆ ತುಂಬಿದ್ದು, ಏರಿ ಮತ್ತು ಕೋಡಿ ಶಿಥಿಲವಾಗಿರುವುದು ಪತ್ತೆಯಾಗಿದೆ. ಹೀಗಾಗಿ ಸಣ್ಣ ನೀರಾವರಿ ಇಲಾಖೆಯ ಮೂಲಕ 2 ಕೋಟಿ ರೂ. ವೆಚ್ಚದಲ್ಲಿ ಕೋಡಿ ನಿರ್ಮಾಣ, ಕೆಲವೆಡೆ ತಡೆಗೋಡೆ ಹಾಗೂ ಏರಿಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಸಿ.ಎನ್.ಬಾಲಕೃಷ್ಣ ತಿಳಿಸಿದರು.
    ಹಿರೀಸಾವೆ ಹಾಗೂ ಬಾಳಗಂಚಿ ಕೆರೆಗಳ ನೀರು ಕಡಿಮೆಯಾದ ನಂತರ ಏರಿಗಳ ದುರಸ್ತಿ ಕಾರ್ಯ ಮಾಡಲಾಗುವುದು. ಮಲ್ಲವನಘಟ್ಟ ಗ್ರಾಮದ ಕೆರೆ ಏರಿ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ಉಳಿದ ಕೆರೆಗಳನ್ನು ಪರಿಶೀಲಿಸಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

    ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್, ಮಾಜಿ ಉಪಾಧ್ಯಕ್ಷ ಶಿವಭೋವಿ, ಮಾಜಿ ಸದಸ್ಯ ಮಹೇಶ್, ತೋಟಿ ನಾಗಣ್ಣ, ಸೊಸೈಟಿ ನಿರ್ದೇಶಕ ನಂಜುಂಡೇಗೌಡ, ಮಂಜುಳಾ ಗೋಪಾಲ್, ಮಾಜಿ ಅಧ್ಯಕ್ಷ ಮಂಜೇಗೌಡ, ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಮಾಜಿ ಅಧ್ಯಕ್ಷ ಜಯರಾಮ್, ಮುಖಂಡರಾದ ಮದನ್‌ಕುಮಾರ್, ಟಿ.ಪಿ.ಮಂಜು, ಮಂಜುನಾಥ್, ವೇಣು, ಫೈನಾನ್ಸ್ ಮಹೇಶ್, ರಂಗೇಗೌಡ, ಕೃಷ್ಣಮೂರ್ತಿ, ಮೀನು ಉದ್ಯಮಿ ಟಿ.ಸಂಪತ್, ಮಧು ಹಾಗೂ ತೋಟಿ, ತೋಟಿ ಕೊಪ್ಪಲು, ಜಿನ್ನೇನಹಳ್ಳಿ, ಮಾದಲಗೆರೆ ಗ್ರಾಮಸ್ಥರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts