More

    ಗಾಂಧಿ ನೆನೆಯುವುದು ನಮ್ಮ ಕರ್ತವ್ಯ

    ಚನ್ನರಾಯಪಟ್ಟಣ: ದೇಶದ ಸ್ವಾತಂತ್ರ್ಯಕ್ಕೆ ಅಹಿಂಸಾ ಮಾರ್ಗದಲ್ಲಿ ಹೋರಾಡಿದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಮಹತ್ವ, ಅವರ ಇತಿಹಾಸ, ಅವರನ್ನು ವಿಶೇಷವಾಗಿ ನೆನೆಯುವುದೇ ನಮ್ಮ ಕರ್ತವ್ಯ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.

    ಪಟ್ಟಣದ ಪೇಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಗಾಂಧಿ ಕುಟೀರವನ್ನು ಉದ್ಘಾಟಿಸಿ ಮಾತನಾಡಿ, ಗಾಂಧೀಜಿ ಅವರು ಸರಳತೆ, ಸತ್ಯ, ಅಹಿಂಸೆಯ ಮೂಲಕ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ತಂದುಕೊಟ್ಟ ಮಹಾನ್ ವ್ಯಕ್ತಿ. ಅವರು ಉಪವಾಸ ಸತ್ಯಾಗ್ರಹ ಮತ್ತು ಅಸಹಕಾರ ಚಳವಳಿಗಳ ಮೂಲಕ ಪ್ರಪಂಚದಾದ್ಯಂತ ಖ್ಯಾತಿ ಗಳಿಸಿದ್ದರು. ಸರಳ ಜೀವನ ಶೈಲಿಯನ್ನು ರೂಪಿಸಿಕೊಂಡು, ಭಾರತದಲ್ಲಿನ ಅತಿ ಬಡ ವ್ಯಕ್ತಿಯೂ ತಮ್ಮನ್ನು ಒಪ್ಪುವ ರೀತಿಯಲ್ಲಿ ಉಡುಪು ಧರಿಸಿದ ಅವರು ತನ್ನ ಬಟ್ಟೆಯನ್ನು ತಾನೇ ನೂಲುವ ಮೂಲಕ ಖಾದಿ ಬಟ್ಟೆಯನ್ನು ಸಮರ್ಥಿಸಿದರು. ತಮ್ಮ ಜೀವನದ ಸರಳತೆಯನ್ನು ವ್ಯಕ್ತಪಡಿಸಲು ಅವರು ತಮ್ಮ ಜೀವನದುದ್ದಕ್ಕೂ ಧೋತಿಯನ್ನು ಉಡುತ್ತಿದ್ದರು. ಇಂತಹ ಮಹಾನ್ ವ್ಯಕ್ತಿಗಳ ತತ್ವ ಆದರ್ಶಗಳನ್ನು ಯುವಜನತೆ ಜೀವನದಲ್ಲಿ ಅಳವಡಿಸಿಕೊಂಡು ಸದೃಢ ದೇಶ ಕಟ್ಟುವಲ್ಲಿ ಹೆಜ್ಜೆಯಿಡಬೇಕಾಗಿದೆ ಎಂದು ತಿಳಿಸಿದರು.

    ಮುಖ್ಯ ಶಿಕ್ಷಕಿ ನೇತ್ರಾವತಿ ಮಾತನಾಡಿ, ಸರಳ, ನೇರ, ಸಜ್ಜನಿಕೆಯ ಮಹಾ ಮಾನವತಾವಾದಿ ಗಾಂಧೀಜಿ ಅವರು ಸತ್ಯ ಮತ್ತು ಅಹಿಂಸೆ ಮೂಲಕ ಜಗತ್ತನ್ನು ಗೆದ್ದವರು. ಅವರ ಸತ್ಯ, ಸರಳತೆ, ಅಹಿಂಸೆಯ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಹೆಜ್ಜೆ ಇಡೋಣ. ವಿದ್ಯಾರ್ಥಿಗಳಿಗೆ ಗಾಂಧೀಜಿಯ ಮೌಲ್ಯಗಳ ಅರಿವು ಮೂಡಿಸುವ ಉದ್ದೇಶದಿಂದ ನಿವೃತ್ತ ಅಪಾರ ಜಿಲ್ಲಾಧಿಕಾರಿ ಎಚ್.ಎಂ.ನಾಗಪ್ಪ ಅವರು ಗಾಂಧೀಜಿ ಜೀವನ ಚರಿತ್ರೆಯನ್ನು ತಿಳಿಸುವ ನೂರು ಭಿತ್ತಿ ಚಿತ್ರಗಳನ್ನು ನೀಡಿ ಇತರರ ಸಹಕಾರದೊಂದಿಗೆ ಶಾಲೆಯಲ್ಲಿ ಗಾಂಧಿ ಕುಟೀರ ತೆರೆಯಲಾಗಿದೆ ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ಗಾಂಧಿ ಪುತ್ಥಳಿ ನಿರ್ಮಾಣ ಹಾಗೂ ಗಾಂಧಿ ಕುಟೀರ ನಿರ್ಮಾಣಕ್ಕೆ ಸಹಕರಿಸಿದ ಕೆ.ಟಿ.ಪರಮೇಶ್, ಎಚ್.ಎಸ್.ಮಂಜುನಾಥ್, ಶಿವಶಂಕರಪ್ಪ ಅವರನ್ನು ಸನ್ಮಾನಿಸಲಾಯಿತು. ಜಿಪಂ ಮಾಜಿ ಸದಸ್ಯ ಕುಸುಮಾ ಬಾಲಕೃಷ್ಣ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಹಡೇನಹಳ್ಳಿ ಲೋಕೇಶ್, ನಿವೃತ್ತ ಅಪಾರ ಜಿಲ್ಲಾಧಿಕಾರಿ ಎಚ್.ಎಂ.ನಾಗಪ್ಪ, ಮುಖ್ಯ ಶಿಕ್ಷಕಿ ನೇತ್ರಾವತಿ, ಉ.ರಾ.ನಾಗೇಶ್, ಪ್ರಾಂಶುಪಾಲ ಕೆ.ಟಿ.ರಾಮೇಗೌಡ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಟಿ.ಮಂಜಪ್ಪ, ದೇವರಾಜೇಗೌಡ, ಚಲುವನಾರಾಯಣಸ್ವಾಮಿ, ಮಲ್ಲೇಗೌಡ, ಎಲ್.ಆರ್. ಸತೀಶ್, ಎ.ಎಚ್.ಭೀಮೇಶ್, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts