More

    ತೋಟಗಾರಿಕೆ ಇಲಾಖೆಯಿಂದ ತರಕಾರಿ ಬೀಜಗಳ ವಿತರಣೆಗಾಗಿ ಅರ್ಜಿ ಆಹ್ವಾನ

    ಗದಗ: 2023-24 ನೇ ಸಾಲಿಗೆ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ, ಉತ್ತಮ ಗುಣಮಟ್ಟದ ತರಕಾರಿ ಬೀಜಗಳನ್ನು ವಿತರಿಸಲು ಅರ್ಹ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ,

    ತರಕಾರಿಗಳು ಪೌಷ್ಠಿಕಾಂಶಗಳ ಆಗರಗಳು, ಕಡಿಮೆ ಅವಧಿಯಲ್ಲಿ, ಕಡಿಮೆ ವೆಚ್ಚದಲ್ಲಿ ಕಡಿಮೆ ಕ್ಷೇತ್ರದಲ್ಲಿ ಅಧಿಕ ಇಳುವರಿ, ಅಧಿಕ ಲಾಭ, ಪಡೆದುಕೊಳ್ಳಲು ವಿವಿಧ ತಳಿಯ ಸುಧಾರಿತ ತರಕಾರಿ ಬೀಜಗಳನ್ನು ತೋಟಗಾರಿಕೆ ಇಲಾಖೆಯಿಂದ ವಿತರಿಸಲು ನಿರ್ಧರಿಸಲಾಗಿದೆ. ಈ ವರ್ಷ ಬರಗಾಲ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ರೈತರು ಕಡಿಮೆ ಅವಧಿಯಲ್ಲಿ, ಕಡಿಮೆ ನೀರಿನಲ್ಲಿ, ಅಧಿಕ ಇಳುವರಿ  ಕೊಡುವ ತರಕಾರಿ ತಳಿಗಳನ್ನು ವಿತರಿಸಲಾಗುವುದು.

    ಸುಮಾರು 2000 ರೂಪಾಯಿ ಬೆಲೆ ಬಾಳುವ ಮೆಣಸಿನಕಾಯಿ, ಟೊಮೆಟೋ, ಬದನೆ, ಚವಳೆ, ಬೆಂಡಿ, ಹೀರೆಕಾಯಿ, ಸವತೆಕಾಯಿ ಉತ್ತಮ ಗುಣಮಟ್ಟದ ತರಕಾರಿ ಬೀಜಗಳನ್ನು ಉಚಿತವಾಗಿ ವಿತರಿಸಲಾಗುವುದು. ಈ ತರಕಾರಿ ತೋಟಗಳಿಗೆ ಹನಿ ನೀರಾವರಿ ಸೌಲಭ್ಯವನ್ನು ಅಳವಡಿಸಿಕೊಂಡ ರೈತರಿಗೆ ಸಹಾಯಧನವನ್ನು ನೀಡಲಾಗುವುದು. ಅರ್ಹ ರೈತರು 2 ಫೆÇೀಟೋ,  ಎಫ್.ಐ.ಡಿಸಂಖ್ಯೆ, ಉತಾರ, ಖಾತೆ ಉತಾರ, ನೀರಾವರಿ ಸರ್ಟಿಫಿಕೇಟ್, ಬ್ಯಾಂಕ್ ಪುಸ್ತಕ, ಆಧಾರ ಕಾರ್ಡ್‍ನೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.

    ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕುಗಳ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಣ್ಣ ಮತ್ತು ಅತೀ ಸಣ್ಣ ರೈತರು, ದೊಡ್ಡ ರೈತರು, ಮಹಿಳೆಯರು, ವಿಕಲಚೇತನರು ಹಾಗೂ ಅವರ ಅವಲಂಬಿತ ಕುಟುಂಬದವರು ಇದರ ಲಾಭ ಪಡೆದುಕೊಳ್ಳಲು ಜನೆವರಿ 10 ರೊಳಗಾಗಿ ಅರ್ಜಿ ಸಲ್ಲಿಸಬೇಕು.  

    ಅರ್ಹರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಶಿರಹಟ್ಟಿ  ಹಿರಿಯ  ಸಹಾಯಕ ತೋಟಗಾರಿಕೆ ನಿರ್ದೇಶಕರಾದ  ಸುರೇಶ ಕುಂಬಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts