More

    ತೊಗರಿ ಖರೀದಿ 20 ಕ್ವಿಂಟಾಲ್​ಗೆ ಹೆಚ್ಚಳ

    ಬೀದರ್: ಕೇಂದ್ರ ಸರ್ಕಾರದ ಬೆಂಬಲ ಬೆಲೆಯಲ್ಲಿ ತೊಗರಿ ಮಾರಾಟ ಮಾಡಿದ ರೈತರಿಗೆ ಸರ್ಕಾರ ಇದೀಗ ಮತ್ತೊಂದು ಅವಕಾಶ ನೀಡಿದೆ. 20 ಕ್ವಿಂಟಾಲ್​ಗೆ ತೊಗರಿ ಖರೀದಿಗೆ ಆದೇಶ ಹೊರಡಿಸಿ ಕರೊನಾ ಸಂಕಷ್ಟದಲ್ಲಿರುವ ಬೆಳೆಗಾರರ ನೆರವಿಗೆ ಬಂದಿದೆ.
    ಜಿಲ್ಲೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ನೋಂದಣಿಯಾದ ರೈತರಿಂದ ಹಿಂದಿನದ್ದು ಸೇರಿ ಪ್ರತಿ ರೈತರಿಂದ 20 ಕ್ವಿಂಟಾಲ್ ತೊಗರಿ ಖರೀದಿಗೆ ಸರ್ಕಾರ ನಿರ್ಧರಿಸಿದೆ. ಈಗಾಗಲೇ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿರುವಂಥ ರೈತರಿಗೆ ಕರೊನಾ ಹಿನ್ನೆಲೆಯಲ್ಲಿ ಮತ್ತೊಂದು ಅವಕಾಶ ಸಿಕ್ಕಂತಾಗಿದ್ದು ಖುಷಿ ತಂದಿದೆ.
    ಜಿಲ್ಲೆಯ 115ಕ್ಕೂ ಅಧಿಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪಿಕೆಪಿಎಸ್) ಮೂಲಕ ಜಿಲ್ಲಾಡಳಿತ ತೊಗರಿ ಖರೀದಿಸುತ್ತಿದೆ. ಕ್ವಿಂಟಾಲ್ಗೆ 5800 ರೂ. ದರದಲ್ಲಿ ಕೇಂದ್ರ ಸರ್ಕಾರ ಬೆಂಬಲ ಬೆಲೆ ಮಾರ್ಗಸೂಚಿ ಅನ್ವಯ ಬೀದರ್ ಸೇರಿ ತೊಗರಿ ಬೆಳೆಯುವ 9 ಜಿಲ್ಲೆಗಳಲ್ಲಿ ಖರೀದಿಗೆ ಅವಕಾಶ ನೀಡಲಾಗಿದೆ. ಕೇಂದ್ರ ಬೆಂಬಲ ಬೆಲೆಯೊಂದಿಗೆ ರಾಜ್ಯ ಸರ್ಕಾರ 300 ರೂ. ಪ್ರೋತ್ಸಾಹಧನ ನೀಡುತ್ತಿದ್ದರಿಂದ ಕ್ವಿಂಟಾಲ್ ತೊಗರಿಗೆ 6100 ರೂ. ರೈತರ ಕೈ ಸೇರಲಿದೆ.
    ಇತ್ತೀಚೆಗೆ 5 ಕ್ವಿಂಟಾಲ್ ತೊಗರಿ ಖರೀದಿಗೆ ಅವಕಾಶ ನೀಡಲಾಗಿತ್ತು. ಈ ಆದೇಶ ಮಾರ್ಪಡಿಸಿ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ನೋಂದಣಿಯಾದ ರೈತರಿಂದ ಈಗಾಗಲೇ ಖರೀದಿಸಿರುವ ತೊಗರಿ ಪ್ರಮಾಣ ಸೇರಿ ಎಕರೆಗೆ 7 ಕ್ವಿಂಟಾಲ್ ಹಾಗೂ ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಾಲ್ ಖರೀದಿಸಬೇಕು ಎಂದು ಸಹಾಕಾರ ಇಲಾಖೆ ಅಧೀನ ಕಾರ್ಯದಶರ್ಿ ಬಿ.ಎಸ್. ಮಂಜುನಾಥ ಆದೇಶ ಹೊರಡಿಸಿದ್ದಾರೆ.
    ಎಲ್ಲ ಖರೀದಿ ಏಜೆನ್ಸಿಗಳು ಬೆಂಬಲ ಬೆಲೆ ಯೋಜನೆಯಡಿ ಖರೀದಿ ಪ್ರಕ್ರಿಯೆ ವೇಳೆ ಹೊರಡಿಸಿದ ಆದೇಶಗಳಲ್ಲಿನ ಸೂಚನೆ ಕಡ್ಡಾಯ ಪಾಲಿಸಬೇಕು. ಕರೊನಾ ತಡೆ ಹಿನ್ನೆಲೆಯಲ್ಲಿ ಲಾಕ್ಡೌನ್ ಅನುಸಾರ ಸಾಮಾಜಿಕ ಅಂತರ ಹಾಗೂ ನೈರ್ಮಲ್ಯ ಕಾಪಾಡಬೇಕು. ಕರೊನಾ ತಡೆಗಟ್ಟುವ ಬಗ್ಗೆ ಕೇಂದ್ರ, ರಾಜ್ಯ ಸರ್ಕಾರದ ಸೂಚನೆಗಳನ್ನು ತಪ್ಪದೆ ಪಾಲಿಸಲು ಆದೇಶದಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts