More

    ತೊಗರಿ ಖರೀದಿ 20 ಕ್ವಿಂಟಾಲ್ಗೆ ಏರಿಕೆ

    ಬೀದರ್: ಖರೀದಿ ಕೇಂದ್ರಗಳ ಮೂಲಕ ಬೆಂಬಲ ಬೆಲೆಯಲ್ಲಿ ಪ್ರತಿ ರೈತರಿಂದ 20 ಕ್ವಿಂಟಾಲ್ ತೊಗರಿ ಖರೀದಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದರು. ಇಲ್ಲಿನ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಆವರಣದಲ್ಲಿ ಮೂರು ದಿನದ ರಾಜ್ಯ ಮಟ್ಟದ ಮೂರನೇ ಪಶು ಮೇಳಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿ, ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚಿನ ತೊಗರಿ ಬೆಳೆಯಲಾಗುತ್ತದೆ. ಬೆಂಬಲ ಬೆಲೆಯಲ್ಲಿ ಗರಿಷ್ಠ 10 ಕ್ವಿಂಟಾಲ್ ಖರೀದಿಗೆ ಅವಕಾಶವಿತ್ತು. ರೈತರ ಬೇಡಿಕೆಗೆ ಸ್ಪಂದಿಸಿ 20 ಕ್ವಿಂಟಾಲ್​ಗೆ ಹೆಚ್ಚಿಸಲಾಗಿದೆ. ಈ ಬಗ್ಗೆ ನಾಳೆಯೇ(ಶನಿವಾರ) ಆದೇಶ ಹೊರಬೀಳಲಿದೆ. ಸಕರ್ಾರದ ಮೇಲೆ ಭಾರ ಬಿದ್ದರೂ ರೈತರ ಹಿತದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದರು.
    ರೈತರ ಆರ್ಥಿಕ ಸ್ಥಿತಿ ಸುಧಾರಿಸಬೇಕಾದರೆ ಪಶುಪಾಲನೆಯಲ್ಲಿ ತೊಡಗುವುದು ಅಗತ್ಯ. ನೈಸರ್ಗಿಕ ವಿಕೋಪದಂಥ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಸಹ ಇದು ಶಕ್ತಿ ತುಂಬಲಿದೆ. ರೈತರು ಪಶುಪಾಲನೆಯನ್ನು ಉಪ ಕಸುಬು ಬದಲಾಗಿ ಮುಖ್ಯ ಕಸುಬಾಗಿ ಮಾಡಿಕೊಳ್ಳಬೇಕು. ರೈತರ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ. ಮಾರ್ಚ್​ 5ರಂದು ರಾಜ್ಯ ಬಜೆಟ್ ಮಂಡಿಸುತ್ತಿದ್ದು, ರೈತ ಪರವಾಗಿ ಇರಲಿದೆ ಎಂದು ಸುಳಿವು ನೀಡಿದರು.
    ಪಶು ಸಂಗೋಪನೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಮಾತನಾಡಿ, ಪಶುಪಾಲನೆಯಲ್ಲಿ ರೈತರು ಇನ್ನಷ್ಟು ಕ್ರಿಯಾಶೀಲವಾಗಿ ತೊಡಗಲು ಸರ್ಕಾರ ಪ್ರಯತ್ನಿಸುತ್ತಿದೆ. ಹಾಲು ಉತ್ಪನ್ನದಲ್ಲಿ ರಾಜ್ಯ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಜಾನುವಾರು ಸಂರಕ್ಷಣೆ ಹಾಗೂ ಸಂವರ್ಧನೆಗೆ ಒತ್ತು ನೀಡಲಾಗಿದೆ. ಪಶು ಮೇಳ ಮೂಲಕ ರೈತರನ್ನು ಪಶುಪಾಲನೆಯತ್ತ ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts