More

    ತೊಗಟವೀರ ಸಮಾಜದಲ್ಲಿರಲಿ ದಾನಗುಣ

    ದಾವಣಗೆರೆ: ತೊಗಟವೀರ ಸಮಾಜದವರು, ವರ್ತಕರು ತಮ್ಮ ದುಡಿಮೆ ಅಲ್ಪ ಭಾಗವನ್ನು ದಾನಕ್ಕಾಗಿ ಮೀಸಲಿಡಬೇಕು. ನಿಮ್ಮ ದಾನದ ಗುಣ
    ಮುಂದಿನ ಪೀಳಿಗೆಗೆ ಸಹಕಾರಿಯಾಗಲಿದೆ ಎಂದು ತಪಸೀಹಳ್ಳಿಯ ಶ್ರೀ ದಿವ್ಯ ಜ್ಞಾನನಂದಗಿರಿ ಸ್ವಾಮೀಜಿ ಹೇಳಿದರು.
    ದಾವಣಗೆರೆಯಲ್ಲಿ ಶನಿವಾರ, ತೊಗಟವೀರ ಸಮಾಜ ಸೇವಾ ಸಮಿತಿ ಟ್ರಸ್ಟ್‌ನಿಂದ ಹಮ್ಮಿಕೊಂಡಿದ್ದ ತೊಗಟವೀರ ಸಮುದಾಯಭವನದ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಸಮಾಜದವರಲ್ಲಿ ಉತ್ತಮ ಆಕಾಂಕ್ಷೆಗಳಿರಬೇಕು. ಗುರಿಗೆ ಪೂರಕವಾಗಿ ಪರಿಶ್ರಮವೂ ಇರಬೇಕು. ಹಾಗಾದಾಗ ಜೀವನದಲ್ಲಿ ಯಶಸ್ಸು ಕಾಣಬಹುದು. ಸನ್ನಡತೆ ಮತ್ತು ಜ್ಞಾನದ ಬದುಕು ನಿಮ್ಮದಾಗಲಿ ಎಂದು ಹೇಳಿದರು.
    ದಾವಣಗೆರೆಯಲ್ಲಿ ಸಮಾಜದಿಂದ ಮೀಸಲಿಟ್ಟಿರುವ 2.5 ಎಕರೆ ಜಾಗವನ್ನು ಶೈಕ್ಷಣಿಕ ಉದ್ದೇಶಕ್ಕೆ ಬಳಸಲು ಯೋಜನೆ ರೂಪಿಸಿ ಎಂದು ಹೇಳಿದ ಸ್ವಾಮೀಜಿ, ಊಟ ಮತ್ತು ಯೋಗದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆಯೂ ವಿವರಿಸಿದರು.
    ಕಾರ್ಯಕ್ರಮದಲ್ಲಿ ಸಮಾಜದ 25 ದಾನಿಗಳನ್ನು ಸನ್ಮಾನಿಸಲಾಯಿತು. ತೊಗಟವೀರ ಸಮಾಜ ಸೇವಾ ಸಮಿತಿ ಟ್ರಸ್ಟ್‌ನ ಅದ್ಯಕ್ಷ ಎಲ್.ಟಿ.ದ್ವಾರಕಾನಾಥ್, ಉಪಾಧ್ಯಕ್ಷ ಎಲ್.ಎಸ್.ಸುಧಾಕರ್, ಕಾರ್ಯದರ್ಶಿ ಡಿ.ಬಸವರಾಜಪ್ಪ, ಸಹ ಕಾರ್ಯದರ್ಶಿ ಜಿ.ಎನ್.ರವಿಕುಮಾರ್, ಅನಸೂಯಮ್ಮ, ಡಿ.ಕೆ. ತಿಮ್ಮಪ್ಪ, ಕೆ.ಎಚ್.ಅನಂತ್, ಕೆ.ಎಸ್.ಚೌಡಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts