More

    ತೆಂಗು ಪುನಶ್ಚೇತನಕ್ಕೆ 3 ಕೋಟಿ ರೂ. ಅನುದಾನ

    ಚಿತ್ರದುರ್ಗ: ಜಿಲ್ಲೆಯ ಹೊಸದುರ್ಗ, ಹಿರಿಯೂರು, ಹೊಳಲ್ಕೆರೆ ತಾಲೂಕಿನಲ್ಲಿ ತೆಂಗು ಬೆಳೆಗೆ ಕಪ್ಪು ತಲೆ ಹುಳು ಬಾಧೆಯಿಂದ ಉಂಟಾಗಿರುವ ಹಾನಿ ತಡೆಗಟ್ಟಿ, ಪುನಶ್ಚೇತನಗೊಳಿಸಲು ಸರ್ಕಾರ ಮೊದಲ ಹಂತದಲ್ಲಿ 3.04 ಕೋಟಿ ರೂ. ಅನುದಾನ ನೀಡಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ ತಿಳಿಸಿದ್ದಾರೆ.

    ಹೊಸದುರ್ಗದ ಶ್ರೀರಾಂಪುರ ಹೋಬಳಿಯಲ್ಲಿ ಈಗಾಗಲೇ ಮೊದಲ ಹಂತದ ಕಾರ್ಯಕ್ರಮ ಆರಂಭವಾಗಿದೆ. ಇಲ್ಲಿ 500 ಹೆಕ್ಟೇರ್‌ನಲ್ಲಿ ಕಪ್ಪು ತಲೆ ಹುಳುವಿನ ಬಾಧೆಯಿಂದ ಸಂಪೂರ್ಣ ಹಾಳಾಗಿರುವ ತೆಂಗಿನ ಗಿಡ ತೆರವುಗೊಳಿಸಿ, ಒಂದು ಹೊಸ ಗಿಡ ನೆಡಲು ತಲಾ 1ಸಾವಿರ ರೂ.ನಂತೆ ಪ್ರತಿ ಹೆಕ್ಟೇರ್‌ಗೆ 32 ಗಿಡ ನೆಡಲು ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಹಿರಿಯೂರು ತಾಲೂಕಿನಲ್ಲಿ 352, ಹೊಳಲ್ಕೆರೆ ತಾಲೂಕಿನಲ್ಲಿ 100 ಹೆಕ್ಟೇರ್‌ನಲ್ಲಿ ಸಸಿ ನೆಡಲು ಅನುದಾನ ವಿತರಿಸಲಾಗುವುದು. ಜವಗೊಂಡನಹಳ್ಳಿ, ರಾಮಗಿರಿ ಹೋಬಳಿಯಲ್ಲಿ ಪುನಶ್ಚೇತನ ಕೈಗೊಳ್ಳಲಾಗಿದೆ. ಈ ತಾಲೂಕುಗಳ ರೈತರಿಗೆ ಔಷಧಿ, ಗೊಬ್ಬರ, ಪರಿಕರವನ್ನು ಉಚಿತವಾಗಿ ನೀಡಿ, ತಜ್ಞರಿಂದ ತರಬೇತಿ ಹಾಗೂ ಪ್ರಾತ್ಯಕ್ಷಿಕೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts