More

    ತುಂಗಾದಿಂದ ಭದ್ರಾಕ್ಕೆ ನೀರು ಕೊಂಡೊಯ್ಯುವ ಕಾಮಗಾರಿ ಮೊದಲಾಗಲಿ

    ಶಿವಮೊಗ್ಗ: ಭದ್ರಾ ಜಲಾಶಯದಿಂದ ವಾಣಿ ವಿಲಾಸ ಸಾಗರಕ್ಕೆ ನೀರು ಕೊಂಡೊಯ್ಯಲು ನಮ್ಮ ವಿರೋಧವಿಲ್ಲ. ಆದರೆ ಅದಕ್ಕೂ ಮುನ್ನ ಗಾಜನೂರಿನ ತುಂಗಾ ಜಲಾಶಯದಿಂದ ಭದ್ರಾಕ್ಕೆ 15.50 ಟಿಎಂಸಿ ನೀರು ಕೊಂಡೊಯ್ಯುವ ಕಾಮಗಾರಿ ಮುಗಿಸುವುದು ಒಳಿತು ಎಂದು ರೈತ ಮುಖಂಡ ಕೆ.ಟಿ.ಗಂಗಾಧರ್ ಅಭಿಪ್ರಾಯಪಟ್ಟರು.

    ಯೋಜನೆ ಪ್ರಕಾರ ತುಂಗಾದಿಂದ ಭದ್ರಾಕ್ಕೆ 15.50 ಟಿಎಂಸಿ ನೀರೆತ್ತಬೇಕು. ಬಳಿಕ ಭದ್ರಾದಿಂದ 21 ಟಿಎಂಸಿ ನೀರನ್ನು ಮಳೆಗಾಲದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಹರಿಸಬೇಕು. ಆದರೆ ತುಂಗಾದಿಂದ ಭದ್ರಾಕ್ಕೆ ನೀರು ಹರಿಸುವ ಕಾಮಗಾರಿ ಮುಕ್ತಾಯವಾಗದೇ ಇರುವುದರಿಂದ ಸದ್ಯಕ್ಕೆ ವಾಣಿ ವಿಲಾಸ ಸಾಗರಕ್ಕೆ ನೀರು ಹರಿಸುವುದು ಕಷ್ಟವಾಗಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ತುಂಗಾ ಜಲಾಶಯದಿಂದ ಭದ್ರಾಕ್ಕೆ 11 ಕಿಮೀ ಕಾಲುವೆ ನಿರ್ವಣವಾಗಬೇಕು. ಆದರೆ ಈ ಯೋಜನೆ ಕುಂಟುತ್ತಾ ಸಾಗುತ್ತಿದೆ. ಪೂರ್ಣವಾಗಲು ಇನ್ನೆರಡು ವರ್ಷ ಬೇಕಾಗಬಹá-ದು. ಕೆಲವೆಡೆ ಸುರಂಗ ಮಾರ್ಗ ನಿರ್ವಣಕ್ಕೆ ಇನ್ನೂ ಟೆಂಡರ್ ಪ್ರಕ್ರಿಯೆಯೇ ನಡೆದಿಲ್ಲ. ಮೊದಲು ಈ ಕಾಮಗಾರಿಗೆ ವೇಗ ನೀಡುವಂತೆ ಸಿಎಂಗೆ ಪತ್ರ ಬರೆದಿರುವುದಾಗಿ ತಿಳಿಸಿದರು.

    ತುಂಗಾ ಜಲಾಶಯಕ್ಕೆ ಮಳೆಗಾಲದಲ್ಲಿ ಅಪಾರ ಪ್ರಮಾಣದ ನೀರು ಹರಿದುಬರುತ್ತದೆ. ಆದರೆ ನಾವು ಅದರ ಸಂಪೂರ್ಣ ಬಳಕೆ ಮಾಡಿಕೊಳ್ಳುತ್ತಿಲ್ಲ. ಮಳೆಗಾಲದ ಬಳಿಕ ತುಂಗಾ ಜಲಾಶಯದಿಂದ ಭದ್ರಾಕ್ಕೆ ನೀರು ಕೊಂಡೊಯ್ಯುವುದು ಸಮಸ್ಯೆಯಾಗá-ತ್ತದೆ. ಹೀಗಾಗಿ ಎಚ್ಚರಿಕೆಯ ನಡೆ ಅವಶ್ಯ ಎಂದರು.

    ರೈತ ಸಂಘದ ಶಿವಮೊಗ್ಗ ತಾಲೂಕು ಅಧ್ಯಕ್ಷ ಸಣ್ಣರಂಗಪ್ಪ, ಉಪಾಧ್ಯಕ್ಷ ಪರಮೇಶ್ವರಪ್ಪ, ಕಾರ್ಯದರ್ಶಿ ಮಂಜುನಾಥ್, ಡಿ.ವಿ.ವಿರೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts