More

    ತುಂಗಭದ್ರಾ ನದಿಯಲ್ಲಿ 3 ಲಕ್ಷ ಗೆಂಡೆಮೀನು ಮರಿಗಳ ಬಿತ್ತನೆ

    ಕಂಪ್ಲಿ: ಮೀನುಗಾರರ ಅನುಕೂಲಕ್ಕಾಗಿ ಇಲ್ಲಿನ ತುಂಗಭದ್ರಾ ನದಿಯಲ್ಲಿ ಬುಧವಾರ ಇಲಾಖೆ ಅಧಿಕಾರಿಗಳು ಜಿಪಂ ಯೋಜನೆಯಡಿ 3ಲಕ್ಷ ಸಾಮಾನ್ಯ ಗೆಂಡೆತಳಿ ಮೀನು ಮರಿಗಳ ಬಿತ್ತನೆ ಮಾಡಿದರು.

    ಬಳ್ಳಾರಿಯ ಮೀನುಗಾರಿಕೆ ಇಲಾಖೆ ಅಪರ ನಿರ್ದೇಶಕ ಡಿ.ತಿಪ್ಪೇಸ್ವಾಮಿ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಮೀನು ಮರಿ ಬೇಡಿಕೆ ಹೆಚ್ಚಿದ್ದರಿಂದ ಇಲ್ಲಿನ ತುಂಗಭದ್ರಾ ನದಿಗೆ ಮೀನು ಮರಿ ಬಿಡಲು ಆಗಿರಲಿಲ್ಲ. ಕಂಪ್ಲಿಯ ಮೀನುಗಾರರ ಸಹಕಾರ ಸಂಘದ ಕಚೇರಿ ಕಟ್ಟಡ ನಿರ್ಮಾಣಕ್ಕಾಗಿ ಕೆಎಂಆರ್‌ಸಿ ಅನುದಾನದಡಿ 45ಲಕ್ಷ ರೂ. ನೀಡಲಾಗಿದೆ. ಪಟ್ಟಣದ 17 ಮೀನುಗಾರರಿಗೆ ತಲಾ 10 ಸಾವಿರ ರೂ. ಮೌಲ್ಯದ ಮೀನುಗಾರಿಕೆ ಸಲಕರಣೆ ವಿತರಿಸಲಾಗಿದೆ. ಕಂಪ್ಲಿ, ಎಮ್ಮಿಗನೂರು ಭಾಗಗಳಲ್ಲಿ 100 ಹೆಕ್ಟೇರ್ ಪ್ರದೇಶದಲ್ಲಿ ಮೀನುಕೊಳ ನಿರ್ಮಿಸುವ ಗುರಿ ಹೊಂದಿದ್ದು, ಈಗಾಗಲೇ 50 ಹೆಕ್ಟೇರ್‌ನಲ್ಲಿ ಮೀನು ಕೊಳಗಳನ್ನು ನಿರ್ಮಿಸಲಾಗಿದೆ. ಕಂಪ್ಲಿಯಲ್ಲಿ ಮತ್ಸ್ಯಾಶ್ರಯ ಯೋಜನೆಯಡಿ ಪರಿಶಿಷ್ಟರಿಗೆ 1.75 ಲಕ್ಷ ರೂ, ಸಾಮಾನ್ಯರಿಗೆ 1.20 ಲಕ್ಷ ರೂ. ಸಹಾಯಧನದಂತೆ ಐದು ಮನೆಗಳ ನಿರ್ಮಾಣಕ್ಕೆ ಸಹಾಯಧನ ವಿತರಿಸಲಾಗಿದೆ ಎಂದು ತಿಳಿಸಿದರು.

    ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಎನ್.ಬಸವನಗೌಡ ಮಾತನಾಡಿ, ಮೀನುಗಾರರ ಅಭಿವೃದ್ಧಿಗಾಗಿ ನಾರಿಹಳ್ಳ ಜಲಾಶಯಕ್ಕೆ ರಾಜ್ಯವಲಯದಿಂದ 4 ಲಕ್ಷ ಮತ್ತು ಜಿಪಂ ಯೋಜನೆಯಡಿ 2 ಲಕ್ಷ ಒಟ್ಟು 6 ಲಕ್ಷ ಮೀನುಮರಿಗಳನ್ನು ಬಿತ್ತನೆ ಮಾಡಲಾಗಿದೆ. ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮೀನುಹೊಂಡ, ಐಸ್‌ಪ್ಲ್ಯಾಂಟ್, ಕೋಲ್ಡ್ ಸ್ಟೋರೇಜ್ ನಿರ್ಮಿಸಿಕೊಳ್ಳಲು ಸಹಾಯಧನ ಒದಗಿಸಲಾಗುವುದು. ಕೆಎಂಆರ್‌ಸಿ ಯೋಜನೆಯಡಿ 2023-24ನೇ ಸಾಲಿನಿಂದ ಪ್ರತಿವರ್ಷ ಕಂಪ್ಲಿ ಮತ್ತು ಸಿರುಗುಪ್ಪ ಭಾಗಗಳಲ್ಲಿ ತಲಾ 6ಲಕ್ಷ ದೊಡ್ಡ ಗಾತ್ರದ ಮೀನುಗಳ ಬಿತ್ತನೆ ಮಾಡಲಾಗುವುದು ಎಂದರು.

    ಮೀನು ಬಿತ್ತನೆ ಸಂದರ್ಭದಲ್ಲಿ ಮೀನುಗಾರ ಸಹಕಾರ ಸಂಘದ ಅಧ್ಯಕ್ಷ ಎಸ್.ಆರ್.ಚಿನ್ನರಾಜು, ಕಾರ್ಯದರ್ಶಿ ಆರ್.ಕೃಷ್ಣ, ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಜಿ.ಎಸ್.ಷಡಕ್ಷರಿ, ಸಹಾಯಕ ನಿರ್ದೇಶಕ ಶಿವಣ್ಣ, ಮುನಿರಾಬಾದಿನ ಮೀನು ಮರಿ ಪಾಲನಾ ಕೇಂದ್ರದ ಉಪನಿರ್ದೇಶಕರಾದ ಕನ್ನಿಭಾಗ್ಯ, ಹಗರಿಬೊಮ್ಮನಹಳ್ಳಿಯ ರಿಯಾಜ್ ಅಹ್ಮದ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts