More

    ತಿ.ನರಸೀಪುರದಲ್ಲಿ ಶಿವ ದೀಪೋತ್ಸವ ಸಂಭ್ರಮ

    ತಿ.ನರಸೀಪುರ: ಪಟ್ಟಣದ ಹಳೇ ಸಂತೆಮಾಳದ ಶ್ರೀ ಶಿವಕಾಮ ಸುಂದರಮ್ಮ ಸಮೇತ ಶ್ರೀ ಅನಾದಿ ಮೂಲಸ್ಥಾನೇಶ್ವರಸ್ವಾಮಿ ದೇವಾಲಯದಲ್ಲಿ ಮಂಗಳವಾರ ರಾತ್ರಿ ಶಿವ ದೀಪೋತ್ಸವ ಸಂಭ್ರಮದಿಂದ ಜರುಗಿತು.


    ದೇಗುಲದ ಪ್ರಧಾನ ಅರ್ಚಕ ಟಿ.ಎಸ್.ರಾಘವೇಂದ್ರ ಸಾಕಪ್ಪ ನೇತೃತ್ವದಲ್ಲಿ ಅರ್ಚಕ ಆರ್.ಅರ್ಜುನ್ ಅವರು ಶ್ರೀ ಅನಾದಿ ಮೂಲಸ್ಥಾನೇಶ್ವರಸ್ವಾಮಿಗೆ ಬೆಳಗ್ಗೆ ಅಭಿಷೇಕ, ಏಕದಶ ರುದ್ರಾಭಿಷೇಕ ನೆರವೇರಿಸಿ ಪೂಜಾ ಕೈಂಕರ್ಯಗಳನ್ನು ನಡೆಸಿದರು. ಶಿವಕಾಮ ಸುಂದರಮ್ಮ ದೇವಸ್ಥಾನದಲ್ಲಿ ಅಭಿಷೇಕ ಹಾಗೂ ವಿಶೇಷ ಹೂವಿನ ಅಲಂಕಾರದೊಂದಿಗೆ ಪೂಜೆ ಮಾಡಲಾಯಿತು.


    ಶ್ರೀ ಸಚ್ಚಿತಾನಂದಸ್ವಾಮಿ ಗುಡಿಯಲ್ಲಿ ಅರ್ಚಕ ಭವಾನಿಶಂಕರ್ ಅವರು ಏಕವಾರ ರುದ್ರಾಭಿಷೇಕ ಸೇರಿದಂತೆ ವಿಶೇಷ ಪೂಜೆಗಳನ್ನು ನೆರವೇರಿಸಿದರು.


    ಸಂಜೆ 6.30ರಲ್ಲಿ ಶಿವ ದೀಪೋತ್ಸವಕ್ಕೆ ಚಾಲನೆ ನೀಡಲಾಯಿತು. ದೇವಸ್ಥಾನ ಪ್ರಾಂಗಣ, ಆವರಣ ಹಾಗೂ ಸುತ್ತ ಇರಿಸಿದ್ದ ಸಾವಿರಾರು ದೀಪಗಳನ್ನು ಮಹಿಳೆಯರು, ಮಕ್ಕಳು ಸೇರಿದಂತೆ ಭಕ್ತರು ಹಚ್ಚುವ ಮೂಲಕ ದೀಪೋತ್ಸವಕ್ಕೆ ಮೆರುಗು ನೀಡಿದರು. ರಾತ್ರಿ ಸಮಯದಲ್ಲಿ ಸದಾ ಕಗ್ಗತ್ತಲಿನಿಂದ ಕೂಡಿದ ದೇಗುಲ ಆವರಣದಲ್ಲಿ ಹಣತೆಗಳು ಬೆಳಕು ನೀಡಿದವು. ಕಾರ್ಗತ್ತಲಿನ ನಡುವೆ ಸುವರ್ಣ ಬಣ್ಣದ ಜ್ಯೋತಿ ಪ್ರಕಾಶಮಾನವಾಗಿ ಉರಿಯಿತು.


    ಅನಾದಿ ಮೂಲಸ್ಥಾನೇಶ್ವರಸ್ವಾಮಿ ದೇಗುಲ ಪ್ರಾಂಗಣದಲ್ಲಿ ದೀಪಗಳ ನಡುವೆ ಬಿಡಿಸಿದ್ದ ರಂಗೋಲಿ ಎಲ್ಲರ ಗಮನ ಸೆಳೆಯಿತು. ಮಹಿಳೆಯರು ದೀಪಗಳನ್ನು ಬೆಳಗಿ ಸಂಭ್ರಮಿಸಿದರು. ಬಳಿಕ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts