More

    ತಿಕೋಟಾ ಬರಪೀಡಿತ ಘೋಷಣೆಯಾಗಲಿ; ವಿಜುಗೌಡ ಪಾಟೀಲ ಆಗ್ರಹ

    ವಿಜಯಪುರ: ರಾಜಕೀಯ ದುರುದ್ದೇಶದಿಂದ ಬರಪೀಡಿತ ಪಟ್ಟಿಯಿಂದ ಹೊರಗುಳಿದಿರುವ ತಿಕೋಟಾ ತಾಲೂಕಿಗೆ ಕೇಂದ್ರದ ಬರ ಅಧ್ಯಯನ ತಂಡ ಭೇಟಿ ನೀಡಬೇಕು. ತಿಕೋಟಾ ತಾಲೂಕು ಕೂಡ ಬರಪೀಡಿತ ಪ್ರದೇಶವೆಂದು ಘೋಷಿಸಬೇಕೆಂದು ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಒತ್ತಾಯಿಸಿದರು.

    ತಿಕೋಟಾ ಹೊರತುಪಡಿಸಿ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ತಿಕೋಟಾ ಜಿಲ್ಲೆಯಿಂದ ಹೊರಗಿದೆಯೇ? ಬಬಲೇಶ್ವರ ಬರಪೀಡಿತ ಎಂದು ಘೋಷಣೆಯಾಗಿದ್ದು, ಅದರ ಪಕ್ಕದ ತಿಕೋಟಾದಲ್ಲಿ ಅಷ್ಟೊಂದು ಸಮೃದ್ಧ ಮಳೆಯಾಗಿದೆಯೇ? ಇದರ ಹಿಂದೆ ರಾಜಕೀಯ ಹುನ್ನಾರ ಅಡಗಿದೆ. ಹೀಗಾಗಿ ಕೇಂದ್ರದ ಬರ ಅಧ್ಯಯನ ತಂಡ ತಿಕೋಟಾಕ್ಕೂ ಭೇಟಿ ನೀಡಿ ಅಲ್ಲಿನ ರೈತರ ಸಮಸ್ಯೆ ಆಲಿಸಬೇಕೆಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಒತ್ತಾಯಿಸಿದರು.

    ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆಗಿದ್ದ ನನಗೆ ಹೆಚ್ಚು ಮತಗಳು ಬಂದಿವೆ ಎಂಬ ಕಾರಣಕ್ಕೆ ರಾಜಕೀಯ ದುರುದ್ದೇಶದಿಂದ ತಿಕೋಟಾ ತಾಲೂಕನ್ನು ಕೈ ಬಿಡಲಾಗಿದೆ. ಕೃಷಿ ಇಲಾಖೆ ಜಂಟಿ ನಿರ್ದೇಶಕರಲ್ಲಿ ಇರುವ ಜಿಲ್ಲೆಯ ಮಳೆಯ ಸ್ಥಿತಿಗತಿ ಆಧರಿಸಿ ಕೇಂದ್ರ ಬರ ಅಧ್ಯಯನ ತಂಡ ತಿಕೋಟಾ ತಾಲೂಕಿಗೆ ಭೇಟಿ ನೀಡಬೇಕು. ಅದನ್ನು ಬಿಟ್ಟು ಕೆರೆಗೆ ನೀರು ತುಂಬಿರುವ ಯಕ್ಕುಂಡಿ, ಬಬಲೇಶ್ವರ ಪ್ರದೇಶಕ್ಕೆ ಕರೆದೊಯ್ದು ಕೇಂದ್ರದ ಅಧಿಕಾರಿಗಳ ದಿಕ್ಕು ತಪ್ಪಿಸಬಾರದು. ಬಂಜರು ಭೂಮಿ ಹೆಚ್ಚಿರುವ ತಿಕೋಟಾ ಭಾಗಕ್ಕೆ ಕೇಂದ್ರದ ಬರ ಅಧ್ಯಯನ ತಂಡ ಭೇಟಿ ನೀಡಬೇಕು ಎಂದರು.

    ರಾಜ್ಯ ಭೀಕರ ಬರ ಪರಿಸ್ಥಿತಿ ಎದುರಿಸುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಜನರ ಸಮಸ್ಯೆ ಆಲಿಸಲು ಜಿಲ್ಲೆಯಲ್ಲಿ ಇರಬೇಕಾಗಿತ್ತು. ಈ ದುಃಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ವಿದೇಶ ಪ್ರವಾಸಕ್ಕೆ ಹೋಗಿದ್ದಾರೆ ಎಂದು ವಿಜುಗೌಡ ದೂರಿದರು.

    ನಮ್ಮ ಸರ್ಕಾರದಲ್ಲಿ ಅನುಷ್ಠಾನಕ್ಕೆ ತಂದಿರುವ ಕೆರೆಗೆ ನೀರು ತುಂಬಿಸುವ ಯೋಜನೆಗೆ ಈಗಲೂ ಕೆರೆಗೆ ನೀರು ಹರಿಸಲು ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts