More

    ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಬಿಜೆಪಿ ಬೆಂಬಲಿಸಿ

    ಎಚ್.ಡಿ.ಕೋಟೆ: ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಬಿಜೆಪಿ ಬೆಂಬಲಿಸಬೇಕು ಎಂದು ಅಭ್ಯರ್ಥಿ ಕೆ.ಎಂ.ಕೃಷ್ಣನಾಯಕ ಮನವಿ ಮಾಡಿದರು.
    ತಾಲೂಕಿನಲ್ಲಿ ಭಾನುವಾರ ವಿವಿಧ ಆದಿವಾಸಿ ಹಾಡಿಗಳಿಗೆ ಹಾಗೂ ಗ್ರಾಮಗಳಿಗೆ ಭೇಟಿ ನೀಡಿ ಮತಯಾಚನೆ ಮಾಡಿ ಮಾತನಾಡಿ, ಹತ್ತು ವರ್ಷಗಳಲ್ಲಿ ಭಾರತ ಅಭಿವೃದ್ಧಿಯತ್ತ ಸಾಗಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರು, ಬಡವರು, ಶೋಷಿತ ಸಮುದಾಯ ಸೇರಿದಂತೆ ಎಲ್ಲ ವರ್ಗದ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಹಲವಾರು ಯೋಜನೆಗಳನ್ನು ಜಾರಿ ಮಾಡಿ ಭಾರತ ಪ್ರಗತಿಯತ್ತ ಸಾಗಲು ಕಾರಣರಾಗಿದ್ದಾರೆ ಎಂದರು.
    ಪ್ರತಿಯೊಂದು ಕುಟುಂಬ ಪ್ರಗತಿಯತ್ತ ಸಾಗಬೇಕು ಎಂಬುದೇ ಬಿಜೆಪಿ ಸಿದ್ಧಾಂತ. ಪ್ರತಿಯೊಂದು ಕುಟುಂಬ ಕೂಡ ಶುದ್ಧ ಕುಡಿಯುವ ನೀರು ಕುಡಿಯಬೇಕು. ಆರೋಗ್ಯವಂತ ಸಮಾಜ ನಿರ್ಮಾಣ ಆಗಬೇಕು ಎಂಬ ಮೂಲ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರತಿ ಮನೆಗೂ ನಲ್ಲಿ ವ್ಯವಸ್ಥೆ ಮಾಡಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
    ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ನಂತರ ಜನರು ನೆಮ್ಮದಿ ಬದುಕು ಕಾಣಲು ಸಾಧ್ಯವಾಯಿತು. ಮತ್ತೊಮ್ಮೆ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರ ನಡೆಸಲಿದ್ದು, ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಆಯ್ಕೆಯಾದರೆ ತಾಲೂಕಿನಲ್ಲಿ ಅಭಿವೃದ್ಧಿ ಪರ್ವ ನಡೆಯಲಿದೆ ಎಂದರು.
    ಈಗಿನ ಶಾಸಕರು ಕಳೆದ ಐದು ವರ್ಷಗಳ ಅಧಿಕಾರಾವಧಿಯಲ್ಲಿ ತಾಲೂಕಿನ ಅಭಿವೃದ್ಧಿಗೆ ಪೂರಕವಾದ ಕೆಲಸ ಕಾರ್ಯಗಳನ್ನು ಮಾಡದೆ ಕಾಲಹರಣ ಮಾಡಿದ್ದಾರೆ. ತಾಲೂಕಿನ ಜನತೆ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿ ಬಿಜೆಪಿ ಬೆಂಬಲಿಸುವ ಮೂಲಕ ಬದಲಾವಣೆ ಬಯಸಿದ್ದಾರೆ ಎಂದು ತಿಳಿಸಿದರು.
    ಜೆಡಿಎಸ್ ಪಕ್ಷದ ಅಭ್ಯರ್ಥಿ ನಮಗೆ ನೇರ ಸ್ಪರ್ಧಿ ಅಲ್ಲವೇ ಅಲ್ಲ, ಹಿಂದೆ ಅವರ ಕುಟುಂಬ ಅಧಿಕಾರ ನಡೆಸಿದೆ. ಆದರೆ ತಾಲೂಕಿನ ಅಭಿವೃದ್ಧಿಯಲ್ಲಿ ಅವರ ಪಾತ್ರ ಶೂನ್ಯ ಎಂದರು.
    ನಾನು ಅಧಿಕಾರ ಇಲ್ಲದೆ ಇದ್ದಾಗ ಹಲವಾರು ಸಮಾಜ ಸೇವೆ ಮಾಡಿದ್ದೇನೆ. ಇನ್ನೂ ಹೆಚ್ಚಿನ ಸೇವೆ ಮಾಡಲು ಜನರು ಹೆಚ್ಚು ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು. ತಾಲೂಕಿನಲ್ಲಿ ನಿರುದ್ಯೋಗ ಸಮಸ್ಯೆ ಇದ್ದು ನಾನು ಶಾಸಕನಾಗಿ ಆಯ್ಕೆಯಾದ ಮೊದಲು ಮಾಡುವ ಕೆಲಸವೇ ನಿರುದ್ಯೋಗ ಸಮಸ್ಯೆ ಬಗೆಹರಿಸುವುದು. ಅದಕ್ಕಾಗಿ ಸರಗೂರು ಮತ್ತು ಎಚ್.ಡಿ.ಕೋಟೆ ಅವಳಿ ತಾಲೂಕಿನಲ್ಲಿ ಕೈಗಾರಿಕೆ ಸ್ಥಾಪನೆ ಮಾಡಿ ಉದ್ಯೋಗ ನೀಡುವುದೇ ನನ್ನ ಮೊದಲ ಗುರಿ ಎಂದು ತಿಳಿಸಿದರು.
    ಅಂತರಸಂತೆ, ಎನ್.ಬೆಳ್ತೂರು, ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡಕನಮಾಳ, ಡಿ.ಬಿ.ಕುಪ್ಪೆ, ಮಚ್ಚೂರು, ಕಾಕನಕೋಟೆ, ಬಾವಲಿ, ಆನೆಮಾಳ ಹಾಡಿ, ಬಾವಲಿ ಹಾಡಿ, ಗುಂಡತ್ತೂರು, ಕಾರಾಪುರ, ಎನ್.ಬೆಳ್ತೂರು, ಹಳೇ ಗೇಟ್, ಮಳಲಿ, ಮಗ್ಗೆ, ಕೆ.ಆರ್.ಪುರ, ರಾಗಲಕುಪ್ಪೆ, ಹೊಸಹೊಳಲು, ಹೊನ್ನಮ್ಮನ ಕಟ್ಟೆ, ದಮ್ಮನಕಟ್ಟೆ, ಹುಣಸೆಕುಪ್ಪೆ, ಸೋಗಹಳ್ಳಿ, ಹೊಸಮಾಳ, ಬದನಕುಪ್ಪೆ, ಅಂತರಸಂತೆ ಸೇರಿದಂತೆ ವಿವಿಧ ಗ್ರಾಮಗಳಿಗೆ ತೆರಳಿ ರೋಡ್ ಶೋ ಮೂಲಕ ಮತಯಾಚನೆ ಮಾಡಿದರು.

    ವೆಂಕಟಸ್ವಾಮಿ, ಹರೀಶ್, ಸುಬ್ರಹ್ಮಣ್ಯ, ರವಿ, ರಾಜು ಬಿಡಗಲು, ವಿಜಯಕುಮಾರ್, ಮಾರುತಿ, ಪ್ರದೀಪ್, ಸುದೀರ್, ನಿಂಗಣ್ಣಸ್ವಾಮಿ, ಮಲ್ಲೇಗೌಡ, ವಕೀಲ ಪ್ರಶಾಂತ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts