More

    ತಾಲೂಕಾಡಳಿತಕ್ಕೆ ನಾಮಫಲಕ ಬಿಸಿತುಪ್ಪ


    ಯಾದಗಿರಿ: ಶಹಾಪುರದ ಹಳೆ ಬಸ್ನಿಲ್ದಾಣದ ಖಾಲಿ ಜಾಗೆಯಲ್ಲಿ ಕಳೆದೆರಡು ದಿನದ ಹಿಂದೆ ರಾತ್ರಿ ವೇಳೆ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ನಾಮಫಲಕ ಅಳವಡಿಸಿದ್ದು, ಅದನ್ನು ತೆರವುಗೊಳಿಸಲು ಸಾರಿಗೆ ಸಂಸ್ಥೆ ಅಧಿಕಾರಿಗಳು ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಸಂಗ ತಾಲೂಕಾಡಳಿತಕ್ಕೆ ಬಿಸಿತುಪ್ಪವಾಗಿ ಪರಿಣಮಿಸಿದೆ.

    ನಿಲ್ದಾಣದ ಆವರಣದಲ್ಲಿನ ಖಾಲಿ ನಿವೇಶನದಲ್ಲಿ ಭಾನುವಾರ ತಡರಾತ್ರಿ ಕೆಲ ದಲಿತಪರ ಸಂಘಟನೆಗಳ ಮುಖಂಡರು ನಾಮಫಲಕ ಅಳವಡಿಸಿದ್ದಾರೆ. ಬೆಳಗ್ಗೆ ಇದನ್ನು ಕಂಡ ಸಾರಿಗೆ ಸಂಸ್ಥೆ ಅಧಿಕಾರಿಗಳು ಕೂಡಲೇ ತೆರವುಗೊಳಿಸುವಂತೆ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆದರೆ, ನೀವೇ (ಸಾರಿಗೆ ಸಂಸ್ಥೆಯವರು) ತೆರವುಗೊಳಿಸಲು ಮುಂದಾದರೆ ನಾವು ಭದ್ರತೆ ಕೊಡುತ್ತೇವೆ ಎಂದು ಖಾಕಿ ಪಡೆ ಹೇಳಿ ಕೈತೊಳೆದುಕೊಂಡಿದೆ.

    ಏತನ್ಮಧ್ಯೆ ನಾಮಫಲಕದ ಸ್ಥಳದಲ್ಲಿ ಅಂಬೇಡ್ಕರ್ ಪರಿನಿರ್ವಾಣ ದಿನ ಆಚರಣೆಗೆ ಸಂಘಟನೆಗಳು ಸಜ್ಜಾಗಿದ್ದು ಸಂಸ್ಥೆಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಮಂಗಳವಾರ ಸಾರಿಗೆ ಸಂಸ್ಥೆ ಮತ್ತು ದಲಿತಪರ ಸಂಘಟನೆ ಮುಖಂಡರ ಸಮ್ಮುಖದಲ್ಲಿ ತಹಸೀಲ್ದಾರ್ ಉಮಾಕಾಂತ ಹಳ್ಳೆ ಸಭೆ ನಡೆಸಿ, ನಾಮಫಲಕ ತೆರವುಗೊಳಿಸುವಂತೆ ಮನವಿ ಮಾಡಿದರೂ ಮುಖಂಡರು ಒಪ್ಪದೆ ಬಸ್ನಿಲ್ದಾಣದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು.

    1985ರಲ್ಲಿ ನಗರದಲ್ಲಿನ ರಾಜ್ಯ ಹೆದ್ದಾರಿಯ ಕಮಾನ್ ಮುಂಭಾಗದಲ್ಲಿದ್ದ ಡಾ.ಅಂಬೇಡ್ಕರ್ ಕಟ್ಟೆಯನ್ನು ತೆರವುಗೊಳಿಸಲಾಗಿತ್ತು. ಅಲ್ಲದೆ, ಹಿಂದಿದ್ದ ಜಿಲ್ಲಾಧಿಕಾರಿಗಳು ಬಾಬಾ ಸಾಹೇಬರ ಪುತ್ಥಳಿ ಸ್ಥಾಪನೆಗೆ ಸ್ಥಳ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಅಲ್ಲಿಂದ ನಾವು ಅನೇಕ ಬಾರಿ ಸಕರ್ಾರಗಳಿಗೆ, ಸಂಬಂಧಿಸಿದ ಸಚಿವರಿಗೆ ಮನವಿ ನೀಡುತ್ತಲೇ ಬಂದಿದ್ದೇವೆ. ಆದರೆ, ಇದುವರೆಗೂ ಈ ಭರವಸೆ ಈಡೇರಿಲ್ಲ. ಹೀಗಾಗಿ ಕೊನೆಗೆ ಬೇಸತ್ತು ಹಳೆ ಬಸ್ ನಿಲ್ದಾಣದಲ್ಲಿ ಅಂಬೇಡ್ಕರ್ ನಾಮಫಲಕ ಅಳವಡಿಸಿದ್ದೇವೆ ಎಂಬುದು ದಲಿತ ಸಂಘಟನೆಗಳ ವಾದ.

    ಬುಧವಾರ ಪರಿನಿರ್ವಾಣ ದಿನ ಇರುವುದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಕಲ್ಪಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts