More

    ತಾರತಮ್ಯ ನಿವಾರಣೆಗೆ ಒತ್ತಾಯಿಸಿ ರೈತರ ಪ್ರತಿಭಟನೆ

    ಚಿತ್ರದುರ್ಗ: ಬರ ಪರಿಹಾರ ಮತ್ತು ಬೆಳೆ ವಿಮೆ ಪರಿಹಾರ ವಿತರಣೆಯಲ್ಲಿ ಆಗುತ್ತಿರುವ ತಾರತಮ್ಯವನ್ನು ಸರಿಪಡಿಸಿ ನೊಂದ ಎಲ್ಲ ರೈತರಿಗೂ ಪರಿ ಹಾರ ವಿತರಿಸಬೇಕೆಂದು ಆಗ್ರಹಿಸಿ ರಾಜ್ಯರೈತ ಸಂಘದ ನೇತೃತ್ವದಲ್ಲಿ ರೈತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ನಗರದ ನೀ ಲಕಂಠೇಶ್ವರ ದೇವಾಲಯದಿಂದ ಮೆರವಣಿಗೆ ಮೂಲಕ ಡಿಸಿ ಕಚೇರಿವರೆಗೂ ಆಗಮಿಸಿದ ಪ್ರತಿಭಟನಾಕಾರರು ವೀರ ವನಿತೆ ಒನಕೆ ಓಬವ್ವ ವೃತ್ತದಲ್ಲಿ ಮಾನವ ಸರಪಳಿ ರಚಿಸಿ,ಧರಣಿ ನಡೆಸಿದರು.
    ಬೆಳೆ ನಷ್ಟ ಪರಿಹಾರ ವಿತರಣೆ ಸಮಸ್ಯೆಗಳನ್ನು ನಿವಾರಿಸಲು ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗಿದೆ. ಆದರೆ ದಾಖಲೆಗಳನ್ನು ಪಡೆದು ಪರಿಶೀಲಿಸುವುದಾಗಿ ಅಧಿಕಾರಿ,ಸಿಬ್ಬಂದಿ ಹೇಳುತ್ತಾರೆ. ನೀರಾವರಿ ಜಮೀನು,ಕೊಳವೆ ಬಾವಿ ಇದೆ ಎಂದು ಅಥವಾ ಪರಿಹಾರ ಬಂದಿಲ್ಲ ವಾದರೆ ಸರ್ಕಾರವನ್ನೇ ಕೇಳಿ ಎಂದೆಲ್ಲ ಉಡಾಫೆಯಾಗಿ ಉತ್ತರಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಅನೇಕ ಗ್ರಾಮಗಳಲ್ಲಿ ಬೆರಳಣಿಕೆ ರೈತರಿಗೆ ಪರಿಹಾರ ಬಂದಿದೆ,ಇನ್ನು ಕೆಲವರಿಗೆ ಹಣ ಬಂದಿದೆ ಎಂದು ಮೊಬೈಲ್‌ಗೆ ಮೆಸೆಜ್ ಬಂದ ರೂ ಬ್ಯಾಂಕ್ ಖಾತೆಯಲ್ಲಿ ಜಮಾ ಆಗಿರುವುದಿಲ್ಲವೆಂದು ದೂರಿದರು. ಬೆಳೆ ವಿಮೆ ಪರಿಹಾರ ವಿತರಣೆಯಲ್ಲೂ ರೈತರಿಗೆ ವಂಚನೆ ಆಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಶೇಂಗಾ,ಮೆಕ್ಕೆಜೋಳ,ರಾಗಿ ಈರುಳ್ಳಿ,ಸಜ್ಜೆ,ಹತ್ತಿ,ಹೂವು,ಸೂರ‌್ಯಕಾಂತಿ ಇತ್ಯಾದಿ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಪ್ರತಿ ಹೆಕ್ಟೇರ್‌ಗೆ 35 ಸಾವಿರ ರೂ.ಪರಿಹಾರ ವಿತರಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ರಾಜ್ಯ ರೈತ ಸಂಘದ ಅಧ್ಯಕ್ಷ ಡಾ.ವಾಸು ದೇವಮೇಟಿ,ಜಿಲ್ಲಾಧ್ಯಕ್ಷ ಇ.ಎನ್.ಲಕ್ಷ್ಮೀಕಾಂತ್,ಭೂಮಿ ಮತ್ತು ವಸತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಸತ್ಯಪ್ಪ ಮಲ್ಲಾಪುರ,ಓಂಕಾರಪ್ಪ, ಬಿ.ಕುಮಾರ್,ಎಚ್.ಶಿವಮೂರ್ತಿ,ಪಿ.ನಾಗರಾಜ್,ಡಿ.ಆರ್.ಶ್ರೀಧರೆಡ್ಡಿ,ಎಚ್.ಅಂಜಿನಪ್ಪ,ಸಿದ್ದೇಶ್‌ಯಾದವ್,ಟಿ.ಮೋಹನ್,ಸ್ನೇಹಲತಾ ರೆಡ್ಡಿ,ಪಾಪಣ್ಣ,ಪದ್ಮಮ್ಮ,ಸಾವಿತ್ರಮ್ಮ,ಪಾಪಣ್ಣ,ಟಿ.ವೀರೇಶ್,ಎನ್.ರಾಜಣ್ಣ,ಗುರುಮೂರ್ತಿ,ಮಂಜಣ್ಣ,ಎಸ್.ಟಿ.ಕೆಂಚಪ್ಪ,ಪಿ.ಆರ್.ರವಿ ಶಂಕರ್,ಕೆ.ಶಿವಪ್ರಸಾದ್,ಟಿ.ತಿಪ್ಪೇಸ್ವಾಮಿ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts