More

    ತಾಪಂ ಮೊದಲ ಸಭೆಗೆ ವಿಘ್ನ!

    ಲಕ್ಷ್ಮೇಶ್ವರ: ತಾಲೂಕು ಪಂಚಾಯಿತಿಯ ಮೊದಲ ಸಭೆಗೆ ವಿವಿಧ ಅಧಿಕಾರಿಗಳು ಗೈರಾಗಿದ್ದರಿಂದ ಸಭೆಯನ್ನು ಆ.5 ಕ್ಕೆ ಮುಂದೂಡಿದ ಘಟನೆ ಜರುಗಿತು. ಪೂರ್ವ ನಿಗದಿಯಂತೆ ಸೋಮವಾರ ಬೆಳಗ್ಗೆ 11 ಕ್ಕೆ ನೂತನ ಅಧ್ಯಕ್ಷ ಪರಶುರಾಮ ಇಮ್ಮಡಿ ಅವರ ಅಧ್ಯಕ್ಷತೆಯಲ್ಲಿ ಮೊದಲ ಸಭೆ ಆರಂಭವಾಯಿತು. ಪ್ರಾರಂಭದಲ್ಲಿ ನೂತನ ತಾಪಂ ಸದಸ್ಯರನ್ನು ಸನ್ಮಾನಿಸ ಲಾಯಿತು.

    ಈ ವೇಳೆ ಮಾತನಾಡಿದ ತಾಪಂ ಅಧ್ಯಕ್ಷ ಪರಶುರಾಮ ಇಮ್ಮಡಿ, ದಶಕಗಳ ಕಾಲದ ಹಿರಿಯರ ಹೋರಾಟದ ಫಲವಾಗಿ ಲಕ್ಷೆ್ಮೕಶ್ವರ ತಾಲೂಕು ಕೇಂದ್ರ ವಾಗಿದೆ. ಕಡಿಮೆ ಅವಧಿಯಲ್ಲಿ ಹೆಚ್ಚು ಅಭಿವೃದ್ಧಿ ಕಾರ್ಯಗಳನ್ನು ಮಾಡ ಬೇಕಾಗಿದೆ. ಅದಕ್ಕೆ ಅಧಿಕಾರಿಗಳ, ಸದಸ್ಯರ ಸಹಕಾರ ಮುಖ್ಯವಾಗಿದೆ ಎಂದರು.

    ಈ ವೇಳೆ ಪ್ರಮುಖವಾಗಿ ಕಂದಾಯ, ಆರೋಗ್ಯ, ಶಿಕ್ಷಣ, ಪಿಡಬ್ಲ್ಯುಡಿ, ಉಪನೋಂದಣಿ, ಹೆಸ್ಕಾಂ, ಭೂ-ಮಾಪನ ಸೇರಿ 13 ಪ್ರಮುಖ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಗೈರಾಗಿರುವುದು ಅಧ್ಯಕ್ಷರ ಗಮನಕ್ಕೆ ಬಂದಿತು. ಇದಕ್ಕೆ ಅಸಮಾಧಾನಗೊಂಡ ಅಧ್ಯಕ್ಷ ಮತ್ತು ಸದಸ್ಯರು ಇದೇ ಮೊದಲ ಬಾರಿ ಹೊಸದಾಗಿ ತಾಪಂ ಸಭೆ ನಡೆಯುತ್ತಿದೆ. ಕರೊನಾ ಸಂಕಷ್ಟದ ನಡುವೆಯೂ ಬಹಳಷ್ಟು ಅಭಿವೃದ್ಧಿ ಕಾರ್ಯ, ಕರೊನಾ ತಡೆಗಟ್ಟುವ ಕ್ರಮ, 15ನೇ ಹಣಕಾಸು ಕ್ರಿಯಾಯೋಜನೆ ರೂಪಿಸುವುದು, ಇಲಾಖೆಗಳ ಪ್ರಗತಿ ನೋಟದ ಬಗ್ಗೆ ರ್ಚಚಿಸಬೇಕಿತ್ತು. ಸಭೆ ನಡೆಯುವ ಕುರಿತು 8 ದಿನ ಮೊದಲೇ ಎಲ್ಲರಿಗೂ ನೋಟಿಸ್ ತಲುಪಿಸಲಾಗಿದೆ. ಆದಾಗ್ಯೂ 13 ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಗೈರಾಗಿರುವುದು ಸದಸ್ಯರ ಅಸಮಾಧಾನಕ್ಕೆ ಕಾರಣವಾಯಿತು.

    ಸಭೆಗೆ ಗೈರಾದ ಎಲ್ಲ ಅಧಿಕಾರಿಗಳಿಗೆ ಯಾವುದೇ ಮುಲಾಜಿಲ್ಲದೆ ನೋಟಿಸ್ ಜಾರಿ ಮಾಡಿ. ಅಲ್ಲದೆ, ಆ. 5 ರಂದು ಮತ್ತೆ ಸಭೆ ಕರೆದು ಅಂದು ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಆದೇಶಿಸಬೇಕು ಎಂದು ತಾಪಂ ಇಒ ಎನ್.ಎಚ್. ಓಲೇಕಾರ ಅವರಿಗೆ ಅಧ್ಯಕ್ಷ ಪರಶುರಾಮ ಇಮ್ಮಡಿ ಸೂಚಿಸಿದರು.

    ಸಭೆಯಲ್ಲಿ ತಾಪಂ ಉಪಾಧ್ಯಕ್ಷೆ ಹುಸೇನಬಿ ಅತ್ತಿಗೇರಿ, ಸದಸ್ಯರಾದ ನಿಂಗಪ್ಪ ಜಾಲವಾಡಗಿ, ಚನ್ನಮ್ಮ ಹಿರೇಮಠ, ಸುಶೀಲವ್ವ ಲಮಾಣಿ, ಗಿರಿಜವ್ವ ಲಮಾಣಿ, ಮುತ್ತಕ್ಕ ಬೆಟಗೇರಿ, ಕೃಷಿ, ತೋಟಗಾರಿಕೆ, ಪಂಚಾಯತ್ ರಾಜ್, ಸಮಾಜ ಕಲ್ಯಾಣ, ಪಶು- ಸಂಗೋಪನಾ, ಸಿಡಿಪಿಒ, ಆಹಾರ ಸೇರಿ 15 ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

    ಪ್ರತ್ಯೇಕ ತಾಪಂ ರಚನೆ: ಲಕ್ಷ್ಮೇಶ್ವರ ತಾಲೂಕು ಕೇಂದ್ರ ಘೊಷಣೆಯಾಗಿ ಎರಡೂವರೆ ವರ್ಷದ ಬಳಿಕ ಪ್ರತ್ಯೇಕ ತಾಲೂಕು ಪಂಚಾಯಿತಿ ರಚನೆಯಾಗಿದೆ. ಜು. 14 ಕ್ಕೆ ತಾಪಂ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆ ನಡೆದು ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts