More

    ತಾಪಂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಂದು

    ಗಜೇಂದ್ರಗಡ: ಗಜೇಂದ್ರಗಡ ನೂತನ ತಾಲೂಕು ಪಂಚಾಯಿತಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳಿಗೆ ಜು. 23ರಂದು ಚುನಾವಣೆ ನಡೆಯಲಿದೆ. ಆಡಳಿತ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ವಲಯದಲ್ಲಿ ರಾಜಕೀಯ ಚಟುವಟಿಕೆಗಳು ಚುರುಕಾಗಿವೆ.

    ತಾಪಂ ವ್ಯಾಪ್ತಿಯಲ್ಲಿ 6 ಕ್ಷೇತ್ರಗಳಿವೆ. 4ರಲ್ಲಿ ಕಾಂಗ್ರೆಸ್ ಮತ್ತು 2ರಲ್ಲಿ ಬಿಜೆಪಿ ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮತ್ತು ಉಪಾಧ್ಯಕ್ಷ ಸ್ಥಾನ 2ಎಗೆ ಮೀಸಲಿದೆ. ಈಗಾಗಲೇ ಅಧ್ಯಕ್ಷ ಸ್ಥಾನಕ್ಕೆ ನಿಡಗುಂದಿ ಕ್ಷೇತ್ರದ ಸದಸ್ಯೆ ಜಯಶ್ರೀ ಪಾಟೀಲ ಹೆಸರು ಮುಂಚೂಣಿಯಲ್ಲಿದೆ. ಈ ಮಧ್ಯೆ ಮುಶಿಗೇರಿ ಕ್ಷೇತ್ರದ ರೇಣುಕಾ ಬೆನಕನವಾರಿ ಸಹ ಪೈಪೋಟಿ ನಡೆಸಿದ್ದಾರೆ ಎನ್ನಲಾಗುತ್ತಿದೆ.

    ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ರಾಜೂರ ಕ್ಷೇತ್ರದ ಶಶಿಧರ ಹೂಗಾರ ಹೆಸರು ಬಹುತೇಕ ಖಚಿತ ಎಂಬ ಮಾತು ಕೇಳಿಬರುತ್ತಿವೆ.

    ಗಜೇಂದ್ರಗಡ ತಾಪಂ ವ್ಯಾಪ್ತಿಗೆ ಗೋಗೇರಿ, ಕುಂಟೋಜಿ, ರಾಂಪೂರ, ರಾಜೂರ, ಸೂಡಿ, ಲಕ್ಕಲಕಟ್ಟಿ, ಮುಶಿಗೇರಿ, ನಿಡಗುಂದಿ, ಶಾಂತಗೇರಿ, ಹಾಲಕೇರಿ ಗ್ರಾಪಂಗಳ ಅಂದಾಜು 45 ಗ್ರಾಮಗಳು ಬರಲಿವೆ. ಕ್ಷೇತ್ರ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿ ದೃಷ್ಟಿಯನ್ನಿಟ್ಟಕೊಂಡು ಅಧ್ಯಕ್ಷ- ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆಯೋ ಅಥವಾ ಬರುವ ತಾಪಂ ಚುನಾವಣೆ ದೃಷ್ಟಿಕೋನದಿಂದ ಆಯ್ಕೆ ಪ್ರಕ್ರಿಯೆ ನಡೆಯುತ್ತದೆಯೋ ಎನ್ನುವ ಬಗ್ಗೆ ಕುತೂಹಲ ಮೂಡಿದೆ.

    ಪಕ್ಷದ ಪ್ರಾಮಾಣಿಕ ಕಾರ್ಯಕರ್ತಳಾಗಿ ಕೆಲಸ ಮಾಡಿದ್ದೇನೆ. ಹೀಗಾಗಿ ತಾಪಂ ಅಧ್ಯಕ್ಷ ಸ್ಥಾನ ಸಿಗಲಿದೆ ಎನ್ನುವ ನಿರೀಕ್ಷೆಯಲ್ಲಿದ್ದೇನೆ. ಅಂತಿಮವಾಗಿ ವರಿಷ್ಠರ ನಿರ್ಧಾರಕ್ಕೆ ಬದ್ಧವಾಗಿದ್ದೇನೆ.

    | ಜಯಶ್ರೀ ಪಾಟೀಲ, ತಾಪಂ ಸದಸ್ಯೆ, ನಿಡಗುಂದಿ ಕ್ಷೇತ್ರ

    ತಾಪಂ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ್ಧಾಗಿದ್ದೇನೆ.

    | ಶಶಿಧರ ಹೂಗಾರ, ತಾಪಂ ಸದಸ್ಯ ರಾಜೂರ ಕ್ಷೇತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts