More

    ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ರಚಿಸಿ

    ಮುಂಡರಗಿ: ತಾಲೂಕಿನ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ರಚಿಸಲು ಅಧಿಸೂಚನೆ ಹೊರಡಿಸುವಂತೆ ಬಂಜಾರ ಸಮುದಾಯದಿಂದ ತಹಸೀಲ್ದಾರ್ ಆಶಪ್ಪ ಪೂಜಾರಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

    ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಯುವ ಘಟಕದ ಉಪಾಧ್ಯಕ್ಷ ಸುಭಾಸ ಗುಡಿಮನಿ ಮಾತನಾಡಿ, ತಾಲೂಕಿನ 13 ತಾಂಡಾಗಳಲ್ಲಿ ಬೀಡನಾಳ ಸಣ್ಣ ತಾಂಡಾ ಮತ್ತು ದೊಡ್ಡ ತಾಂಡಾ, ಹಮ್ಮಿಗಿ ತಾಂಡಾ, ಶಿವಾಜಿನಗರ, ವಿರುಪಾಪುರ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ರಚಿಸಲು ಅಧಿಸೂಚನೆ ಹೊರಡಿಸಲಾಗಿದೆ. ಇನ್ನುಳಿದ ಬಸಾಪುರ ತಾಂಡಾ, ಶೀರನಹಳ್ಳಿ ತಾಂಡಾ, ಕಪ್ಪತಗಿರಿ ತಾಂಡಾ, ಅತ್ತಿಕಟ್ಟಿ ತಾಂಡಾ, ದಿಂಡೂರ ತಾಂಡಾ, ಕಕ್ಕೂರ ತಾಂಡಾ, ಜಾಲವಾಡಗಿ ತಾಂಡಾ, ಮುರುಡಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ರಚಿಸಬೇಕು ಎಂದು ಆಗ್ರಹಿಸಿದರು.

    ತಾಲೂಕು ತಾಂಡಾ ಅಭಿವೃದ್ಧಿ ನಿಗಮ ಸಂಪನ್ಮೂಲ ವ್ಯಕ್ತಿ ಡಾ. ಮಿಟ್ಯಾ ನಾಯಕ ಮಾತನಾಡಿ, 2016ನೇ ಸಾಲಿನ ಗೆಜೆಟ್​ನ ತಿದ್ದುಪಡಿ ಆದೇಶದಂತೆ ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಆದೇಶಿಸಲಾಗಿದೆ. ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಆಯ್ಕೆ ಮಾಡುವುದಕ್ಕೆ ತಾಲೂಕು ದಂಡಾಧಿಕಾರಿ, ಜಿಲ್ಲಾಧಿಕಾರಿಗೆ ಅಧಿಕಾರವಿದೆ. ಇನ್ನುಳಿದ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿಸಬೇಕು ಎಂದು ಒತ್ತಾಯಿಸಿದರು.

    ಫಕೀರಪ್ಪ ನಾಯಕ, ಡಾಕಪ್ಪ ನಾಯಕ, ರೂಪ್ಲಪ್ಪ ನಾಯಕ, ರಾಮಪ್ಪ ಸಕ್ರುನಾಯಕ, ಹನುಮಪ್ಪ ನಾಯಕ, ಸಕ್ರಪ್ಪ ನಾಯಕ, ಈರೇಶ ಲಮಾಣಿ, ಸುರೇಶ ಮಾಳಗಿಮನಿ, ಲಕ್ಷ್ಮ ಮುರುಡಿ, ಲಕ್ಷ್ಮ ಮಾಳಗಿಮನಿ, ಎಸ್.ಆರ್. ಪವಾರ ಇತರರಿದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts