More

    ತಹಸೀಲ್ದಾರ್ ಕಚೇರಿ ನೌಕರ ಎಸಿಬಿ ಬಲೆಗೆ

    ಜೊಯಿಡಾ: ತಹಸೀಲ್ದಾರ್ ಕಚೇರಿಯಲ್ಲಿ ನೌಕರನೊಬ್ಬ ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದ ಘಟನೆ ಮಂಗಳವಾರ ಜೊಯಿಡಾದಲ್ಲಿ ನಡೆದಿದೆ.

    ಕಂದಾಯ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ಮಂಜುನಾಥ ರೆಡ್ಡಿ ಹುಚ್ಚಣ್ಣನವರ ಬಂಧಿತ ಆರೋಪಿ. ಕರಂಬಾಳಿಯ ಗೋಪಿಕಾ ಶಾಂತಾ ಸಾವಂತ ಅವರ ಪಹಣಿ ಪತ್ರಿಕೆಯಲ್ಲಿನ ಹೆಸರು ಬದಲಾವಣೆಗಾಗಿ ಇವರ ಸಂಬಂಧಿ ಮೋಹನ ಬಾಲಕೃಷ್ಣ ದೇಸಾಯಿ ಬಳಿ ಆರೋಪಿಯು 11000 ರೂ. ಬೇಡಿಕೆ ಇಟ್ಟಿದ್ದ. ಇದರಲ್ಲಿ ಮಂಗಳವಾರ ಮುಂಗಡವಾಗಿ 6000 ರೂ.ಗಳನ್ನು ಕಾಳಿ ಬ್ರಿಗೇಡ್ ಅವುರ್ಲಿ ಘಟಕದ ಅಧ್ಯಕ್ಷ ಮೋಹನ ದೇಸಾಯಿ ಅವರಿಂದ ಪಡೆಯುತ್ತಿದ್ದಾಗ ಕಾರವಾರ ಎಸಿಬಿ ಡಿವೈಎಸ್​ಪಿ ಶ್ರೀಕಾಂತ ಕೆ. ನೇತೃತ್ವದ ತಂಡ ದಾಳಿ ಮಾಡಿ ವಶಕ್ಕೆ ಪಡೆದು, ಪ್ರಕರಣ ದಾಖಲಿಸಿದೆ. ಕಾರ್ಯಾಚರಣೆಯಲ್ಲಿ ಎಸಿಬಿ ಡಿವೈಎಸ್​ಪಿ ಶ್ರೀಕಾಂತ ಕೆ., ಸಿಪಿಐಗಳಾದ ಅನಿಷ ಮುಜಾವರ, ಅಲಿ ಶೇಖ್, ಸಿಬ್ಬಂದಿ ರಾಜೇಶ ಪ್ರಭು, ಶಿವಕುಮಾರ, ಗಜೇಂದ್ರ, ಕೃಷ್ಣಾ, ಪ್ರಸಾದ, ಮಂಜುನಾಥ ಮಡಿವಾಳ ಮುಂತಾದವರು ಭಾಗವಹಿಸಿದ್ದರು.

    ಈ ಮಹಿಳೆಯು ಆರು ತಿಂಗಳಿಂದ ಪಹಣಿ ಪತ್ರಿಕೆಯಲ್ಲಿ ಹೆಸರು ಬದಲಾವಣೆಗಾಗಿ ತಮ್ಮ ಸಂಬಂಧಿ ಮೋಹನ ದೇಸಾಯಿ ಜೊತೆಯಲ್ಲಿ ಕಚೇರಿಗೆ ಅರ್ಜಿ ನೀಡಿ ಅಲೆದಾಡುತ್ತಿದ್ದಳು. ಈ ಬಗ್ಗೆ ಕೆಲಸ ಮಾಡಿಕೊಡಲು 11 ಸಾವಿರ ಹಣದ ಬೇಡಿಕೆಯನ್ನು ಮಂಜುನಾಥ ರೆಡ್ಡಿ ಹುಚ್ಚಣ್ಣನವರ ಇಟ್ಟಿದ್ದರು ಎನ್ನಲಾಗುತ್ತಿದೆ. ಈ ಬಗ್ಗೆ ಜೊಯಿಡಾದಲ್ಲಿನ ಕಾಳಿ ಬ್ರಿಗೇಡ್ ಸಂಘಟನೆಗೆ ಮಹಿಳೆ ತನಗಾಗುತ್ತಿರುವ ಅನ್ಯಾಯದ ಬಗ್ಗೆ ಹೇಳಿಕೊಂಡಿದ್ದಳು. ಈ ಬಗ್ಗೆ ಕಾಳಿ ಬ್ರಿಗೇಡ್ ಎಸಿಬಿಗೆ ಮಾಹಿತಿ ನೀಡಿತ್ತು. ಇದರಲ್ಲಿ 6000 ರೂ. ಲಂಚವನ್ನು ಮಂಗಳವಾರ ನೀಡುತ್ತಿದ್ದಾಗ ಎಸಿಬಿ ದಾಳಿ ನಡೆದಿದೆ.

    ಕಾಳಿ ಬ್ರಿಗೇಡ್ ಸಂಚಾಲಕ ರವಿ ರೇಡ್ಕರ, ಸತೀಶ ನಾಯ್ಕ, ಸುನೀಲ ದೇಸಾಯಿ, ಪ್ರಭಾಕರ ನಾಯ್ಕ, ರಾಜೇಶ ದೇಸಾಯಿ, ಅಜೀತ ಟೇಂಗ್ಸೆ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts