More

    ತರಹೇವಾರಿ ಮೂರ್ತಿಗಳು ಲಗ್ಗೆ

    ಚಿಕ್ಕಮಗಳೂರು: ಗೌರಿ-ಗಣೇಶ ಹಬ್ಬದಾಚರಣೆಗೆ ಕ್ಷಣಗಣನೆ ಆರಂಭವಾಗಿದ್ದು, ತರಹೇವಾರಿ ಮೂರ್ತಿಗಳು ಮಾರುಕಟ್ಟೆಗೆ ಬಂದಿವೆ. ಈ ವರ್ಷ ಕಲಾವಿದರ ಮೊಗದಲ್ಲಿ ಸಂತಸ ಮೂಡಿದೆ. ಅಲ್ಲದೆ ಜನರು ಹೊಸ ಉಡುಪು, ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೊಂದೆಡೆ ವಿವಿಧ ಖಾದ್ಯಗಳ ತಯಾರಿಕೆಯಲ್ಲಿ ಮಹಿಳೆಯರು ನಿರತರಾಗಿದ್ದಾರೆ.

    ಕಳೆದೆರಡು ವರ್ಷಗಳಿಂದ ದೇಶಾದ್ಯಂತ ಕರೊನಾ ಆವರಿಸಿ ಬಹುತೇಕ ಹಬ್ಬಗಳ ಸಂಭ್ರಮಕ್ಕೆ ಬ್ರೇಕ್ ಬಿದ್ದಿತ್ತು. ಅಲ್ಲದೆ ಲಾಕ್​ಡೌನ್​ನಿಂದ ಜನರಿಗೆ ಆರ್ಥಿಕ ಸಂಕಷ್ಟವೂ ಎದುರಾಗಿತ್ತು. ಗೌರಿ-ಗಣೇಶ ಹಬ್ಬದಾಚರಣೆಗೆ ವಿಘ್ನ ಎದುರಾಗಿ ಜಿಲ್ಲಾಡಳಿತದ ಹಲವು ನಿರ್ಬಂಧಗಳಿಂದ ಭಕ್ತರಲ್ಲೂ ಉತ್ಸಾಹ ಮರೆಯಾಗಿತ್ತು.

    ಈ ವರ್ಷ ಎಲ್ಲ ವಿಘ್ನಗಳು ನಿವಾರಣೆಯಾಗಿ ವ್ಯಾಪಾರ, ವಹಿವಾಟು ಕೊಂಚ ಕೈಹಿಡಿದು ಹಬ್ಬ ಹರಿದಿನಗಳಿಗೆ ಕಳೆಬಂದಂತಾಗಿದೆ. ಬೀದಿ ವ್ಯಾಪಾರಸ್ಥರು ಗೌರಿ-ಗಣೇಶ ಮೂರ್ತಿಗಳನ್ನು ಮಾರಾಟಕ್ಕಿಟ್ಟಿದ್ದು ಬಹುತೇಕ ಮೂರ್ತಿಗಳು ಮುಂಗಡ ಬುಕ್ಕಿಂಗ್ ಆಗಿ ದೊಡ್ಡ ದೊಡ್ಡ ವಿಗ್ರಹಕ್ಕೆ ಭಾರಿ ಡಿಮಾಂಡ್ ಬಂದಿದೆ. ಎಂ.ಜಿ. ರಸ್ತೆ ಗಣಪತಿ ದೇವಾಲಯದ ಆಸುಪಾಸಿನಲ್ಲಿ ಬೀದಿಬದಿ ಸಾವಿರಾರು ಗೌರಿ ಗಣೇಶ ಮೂರ್ತಿಗಳನ್ನು ಮಾರಾಟಕ್ಕಿಡಲಾಗಿದೆ.

    50 ರೂ.ನಿಂದ 15 ಸಾವಿರ ರೂ.ವರೆಗಿನ ಗಣೇಶ ಮೂರ್ತಿಗಳಿದ್ದು, ಸಂಪೂರ್ಣ ಮಾರಾಟ ಮಾಡುವ ವಿಶ್ವಾಸದಲ್ಲಿದ್ದಾರೆ ಮೂರ್ತಿ ತಯಾರಕರು. ಕುಂಬಾರ ಬೀದಿಯಲ್ಲಿ ಹತ್ತಾರು ಶಿಲ್ಪಿಗಳು ಸಾವಿರಾರು ಗಣೇಶ ಮೂರ್ತಿಗಳನ್ನು ತಯಾರಿಸಿದ್ದಾರೆ. ಸೋಮವಾರ ಮೂರ್ತಿಗಳಿಗೆ ಶಿಲ್ಪಿಗಳು ಅಂತಿಮ ಸ್ಪರ್ಶ ನೀಡುತ್ತಿದ್ದರು.

    ಮಹಾರಾಜ, ಪೇಟ ಗಣಪ, ಶಿವಲಿಂಗ ಪೂಜಾ ಗಣಪ, ಬಸವಣ್ಣ ಗಣಪ, ಸಿಂಹಾಸನ, ಕಾಳಿಂಗ ಮರ್ದನ, ಪುನೀತ್ ರಾಜ್​ಕುಮಾರ್ ಗಣಪ, ಸಾವರ್ಕರ್ ಗಣಪ, ಕಮಲ ಗಣಪ, ಗಜಮುಖ ಗಣಪನ ಮೂರ್ತಿಗಳು ಕಲಾವಿದರ ಕೈಚಳಕದಲ್ಲಿ ಮೂಡಿಬಂದಿದೆ. ಕುಂಬಾರ ಬೀದಿಯಲ್ಲಿ ಕಲಾವಿದರಾದ ಏಕಂತರಾಮು, ಚೇತನ್, ದಿನೇಶ್, ಸತೀಶ್, ಸಾಗರ್, ಸದಾನಂದ, ಸಿದ್ದೇಶ್, ಸುರೇಶ್, ರಮೇಶ್, ರವಿ, ದೇವರಾಜು, ರೇಣುಕಾ ಸೇರಿದಂತೆ ಹತ್ತಾರು ಶಿಲ್ಪಿಗಳು 1500ಕ್ಕೂ ಹೆಚ್ಚು ಮೂರ್ತಿಗಳನ್ನು ತಯಾರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts