More

    ತೀರ್ಥಹಳ್ಳಿ ಎಳ್ಳಮಾವಾಸ್ಯೆ ಜಾತ್ರೆಗೆ ಭರದ ಸಿದ್ಧತೆ

    ತೀರ್ಥಹಳ್ಳಿ: ಅಕಾಲಿಕ ಮಳೆಯ ನಡುವೆಯೂ ನಾಡಿನಲ್ಲಿ ಮನೆಮಾತಾಗಿರುವ ತೀರ್ಥಹಳ್ಳಿಯ ಎಳ್ಳಮಾವಾಸ್ಯೆ ಜಾತ್ರೆ ಗುರುವಾರದಿಂದ ಮೂರು ದಿನಗಳ ಕಾಲ ನಡೆಯಲಿದ್ದು ಇದರ ಅಂಗವಾಗಿ ಶ್ರೀ ರಾಮೇಶ್ವರ ದೇವಸ್ಥಾನ ಸಂಕೀರ್ಣ ಸೇರಿ ಪಟ್ಟಣವನ್ನು ಸುಂದರವಾಗಿ ಅಲಂಕಾರಗೊಳಿಸಲಾಗಿದೆ.
    ಗುರುವಾರ ನಸುಕಿನಿಂದ ತುಂಗಾನದಿಯ ಮಧ್ಯದಲ್ಲಿರುವ ಪುರಾಣ ಪ್ರಸಿದ್ಧ ಪರಶುರಾಮ ಕೊಂಡದಲ್ಲಿ ತೀರ್ಥಸ್ನಾನ ನಡೆಯಲಿದೆ. ಅಕಾಲಿಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು ತೀರ್ಥಸ್ನಾನಕ್ಕೆ ಆಗಮಿಸುವ ಭಕ್ತರ ಸುರಕ್ಷತೆಗಾಗಿ ರಾಮಮಂಟಪಕ್ಕೆ ಸಾಗುವ ಮಾರ್ಗದಲ್ಲಿ ಪಪಂ ವತಿಯಿಂದ 6.80 ಲಕ್ಷ ರೂ. ವೆಚ್ಚದಲ್ಲಿ ಡಿಟ್ಯಾಚಬಲ್ ಸೇತುವೆ ನಿರ್ಮಿಸಲಾಗಿದೆ.
    ಶುಕ್ರವಾರ ಮಧ್ಯಾಹ್ನ ರಥೋತ್ಸವ ಹಾಗೂ ಶನಿವಾರ ಸಂಜೆ 7 ಗಂಟೆಗೆ ತುಂಗಾನದಿಯಲ್ಲಿ ಸಿಡಿಮದ್ದು ಪ್ರದರ್ಶನದೊಂದಿಗೆ ರಾಮೇಶ್ವರ ದೇವರ ಅದ್ದೂರಿ ತೆಪ್ಪೋತ್ಸವ ನಡೆಯಲಿದೆ. ರಾಮೇಶ್ವರ ದೇವಸ್ಥಾನದ ಆವರಣ, ರಥಬೀದಿ, ಅಜಾದ್ ರಸ್ತೆ ಮತ್ತು ತುಂಗಾ ಸೇತುವೆ ಹಾಗೂ ತುಂಗಾ ನದಿಯ ಇಕ್ಕೆಲೆಗಳಲ್ಲಿ ಅಳವಡಿಸಿರುವ ವಿದ್ಯುತ್ ಅಲಂಕಾರದಿAದ ಇಡೀ ಪಟ್ಟಣ ಝಗಮಗಿಸುತ್ತಿದೆ.
    ಅಕಾಲಿಕ ಮಳೆ
    ಕಳೆದ ಎರಡು ದಿನಗಳಿಂದ ತಾಲೂಕಿನಲ್ಲಿ ಸಂಜೆ ಹೊತ್ತಿನಲ್ಲಿ ಮಳೆಯಾಗುತ್ತಿದ್ದು ಜಾತ್ರೆಗೆ ಹಿನ್ನಡೆಯಾಗಿದೆ. ದೂರದ ಊರುಗಳಿಂದ ಜಾತ್ರೆ ವ್ಯಾಪಾರಕ್ಕೆ ದೊಡ್ಡ ಸಂಖ್ಯೆಯಲ್ಲಿ ಬಂದವರು ಮಳೆಯ ಅಡಚಣೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts