More

    ತಪ್ಪು ಮಾಹಿತಿ ನೀಡಿದವರ ವಿರುದ್ಧ ಕ್ರಮಕ್ಕೆ ಆಗ್ರಹ

    ಶಿರಸಿ: ಹೊಸ ಬಡಾವಣೆಯ ಅನುಮೋದನೆಗಾಗಿ ನೀಡಿದ ಸಂಪರ್ಕ ರಸ್ತೆಯ ಮಾಹಿತಿ ಸುಳ್ಳಾಗಿದ್ದು, ಸರ್ಕಾರಕ್ಕೆ ತಪ್ಪು ಮಾಹಿತಿ ಕೊಟ್ಟವರ ವಿರುದ್ಧ ಕ್ರಮವಾಗಬೇಕು ಹಾಗೂ ಬಡಾವಣೆ ಅನುಮೋದನೆಯನ್ನು ತಡೆಹಿಡಿದು ಗ್ರಾಮಸ್ಥರಿಗೆ ನ್ಯಾಯ ನೀಡಬೇಕು ಎಂದು ಇಲ್ಲಿನ ಇಸಳೂರಿನ ನಿವಾಸಿಗಳು ಆಗ್ರಹಿಸಿದ್ದಾರೆ.

    ಗ್ರಾಮಸ್ಥರಾದ ದುಶ್ಯಂತರಾಜ ಕೊಲ್ಲೂರಿ, ನಾಗೇಶ ಹೆಗಡೆ, ಪಿ.ವಿ. ಹೆಗಡೆ ಹಾಗೂ ಇತರರು ವಿಷಯದ ಕುರಿತು ಗುರುವಾರ ಸುದ್ದಿಗೋಷ್ಠಿ ಆಯೋಜಿಸಿ ಮಾತನಾಡಿ, ಇಸಳೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಹೊಸ ಬಡಾವಣೆ ನಿರ್ವಣವಾಗುತ್ತಿದೆ. ಅದಕ್ಕೆ ಅನುಮತಿ ಪಡೆಯಲು 30 ಅಡಿ ಅಗಲದ ರಸ್ತೆಯ ಅಗತ್ಯವಿದೆ. ಆದರೆ, ಬಡಾವಣೆಯ ಮುಖ್ಯಸ್ಥರು ಗ್ರಾಮದ ನಡುವೆ ಹಾದುಹೋಗಿರುವ ಕಿರಿದಾದ ರಸ್ತೆಯ ಮಾಹಿತಿಯನ್ನು ಗ್ರಾಮ ಪಂಚಾಯಿತಿಗೆ ನೀಡಿದ್ದಾರೆ. ಅಲ್ಲದೆ, ಪಂಚಾಯಿತಿಯಿಂದ ಮೇಲಧಿಕಾರಿಗಳಿಗೂ ತಪ್ಪು ಮಾಹಿತಿ ರವಾನಿಸಲಾಗಿದೆ. ಇದರಿಂದ ಒಂದೊಮ್ಮೆ ರಸ್ತೆ ವಿಸ್ತರಣೆಯಾದರೆ ರಸ್ತೆ ಅಕ್ಕಪಕ್ಕದ ನಿವಾಸಿಗಳಿಗೆ ಅನ್ಯಾಯವಾಗುತ್ತದೆ. ಈ ಪ್ರಕರಣದಲ್ಲಿ ಭೂ ಮಾಫಿಯಾ ಹಾಗೂ ಹಣಕಾಸಿನ ವ್ಯವಹಾರ ನಡೆದಿರುವ ಶಂಕೆಯಿದೆ ಎಂದು ಆರೋಪಿಸಿದರು. ಪಂಚಾಯಿತಿಗೆ ತಪ್ಪು ಮಾಹಿತಿ ನೀಡಿದ ಬಡಾವಣೆ ಮುಖ್ಯಸ್ಥರು, ಪಂಚಾಯಿತಿಯಿಂದ ಮೇಲಧಿಕಾರಿಗಳಿಗೆ ತಪ್ಪು ಸಂದೇಶ ನೀಡಿದ ಅಧಿಕಾರಿ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಹೊಸ ಬಡಾವಣೆಗೆ ನೀಡಿದ ಅನುಮತಿಯನ್ನು ತಕ್ಷಣ ರದ್ದುಪಡಿಸಬೇಕು. ಇಲ್ಲವಾದರೆ ಕಾನೂನು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

    ಈ ವೇಳೆ ಸ್ಥಳಿಕರಾದ ಪ್ರಸನ್ನ ಹೆಗಡೆ, ಚಂದ್ರಶೇಖರ ಮೊಗೇರ, ಸುಭಾಷ, ಬಸವರಾಜ, ಜಗದೀಶ, ಸುರೇಶ ಇತರರಿದ್ದರು. </

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts