More

    ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ

    ಬೆಳಗಾವಿ: ತೋಟಗಾರಿಕೆಯ ಇಲಾಖೆಯಡಿ ಎಸ್ಸಿ-ಎಸ್ಟಿ ಸಮುದಾಯದ ರೈತರ ಹೆಸರಲ್ಲಿ ಶೆಡ್ ನೆಟ್, ಹನಿ ನೀರಾವರಿ ಯೋಜನೆಯನ್ನು ದುರ್ಬಳಕೆ ಮಾಡಿಕೊಂಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ, ರೈತರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ರಾಯಬಾಗ ತಾಲೂಕಿನ ರೈತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟಿಸಿದರು.

    ರಾಯಬಾಗದ ತೋಟಗಾರಿಕೆ ಇಲಾಖೆ ಅಧಿಕಾರಿಗಳು ರಾಯಬಾಗ ತಾಲೂಕಿನ ಬಸ್ತವಾಡ ಗ್ರಾಮದ ಪರಿಶಿಷ್ಟ ಜಾತಿ ರೈತರಿಗೆ ತಪ್ಪು ಮಾಹಿತಿ ನೀಡಿ, ಅವರ ದಾಖಲೆ ಪಡೆದು ಶೆಡ್‌ನೆಟ್ ಹಾಗೂ ಹನಿ ನೀರಾವರಿ ಕಾಮಗಾರಿಗಳನ್ನು ಮಾಡಿಸಿದ್ದಾರೆ. ಆದರೆ, ಅದರ ಸಂಪೂರ್ಣ ಲಾಭವನ್ನು ರೈತರಿಗೆ ಒದಗಿಸದೆ ಅರ್ಹ ರೈತರಿಗೆ ಸೇರಬೇಕಿದ್ದ ಲಕ್ಷಾಂತರ ರೂ.ಅನುದಾನ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿದರು.
    ಅನಕ್ಷರಸ್ಥ ರೈತರಿಗೆ ತಿಳಿಯದೆ ಅವರ ಹೆಸರಲ್ಲೇ ಚಿಕ್ಕೋಡಿಯಲ್ಲಿ ಬ್ಯಾಂಕ್ ಖಾತೆ ತೆರೆದು ಯೋಜನೆಯ ಹಣ ಜಮೆ ಮಾಡಿ, ಖಾತೆ ಚೆಕ್ ಬುಕ್ ಹಾಗೂ ಪಾಸ್‌ಬುಕ್ ತಮ್ಮ ಬಳಿಯೇ ಇಟ್ಟುಕೊಂಡು ದುರ್ಬಳಕೆ
    ಮಾಡಿದ್ದಾರೆ. ಅಲ್ಲದೆ, ಸರ್ಕಾರದ ಸಬ್ಸಿಡಿ ಹಣವನ್ನು ರೈತರ ಖಾತೆಯಿಂದ ನಿಯಮಬಾಹಿರವಾಗಿ ಮೊರಬದ ಬನಶಂಕರಿ ಅಗ್ರೋ ಕೇಂದ್ರಕ್ಕೆ ಜಮೆ ಮಾಡಿ ಎಲ್ಲರೂ ಸರ್ಕಾರಿ ಅನುದಾನ ಲಪಟಾಯಿಸಿದ್ದಾರೆ.
    ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಬೇಕು ಹಾಗೂ ಅರ್ಹ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪ್ರಕಾಶ ಮಾಂಗ, ಬಸವಂತ ಭಜಂತ್ರಿ, ಸಿದ್ದಪ್ಪ ಮಾಂಗ, ಮಂಜುನಾಥ ಮಾಂಗ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts