More

    ತಗ್ಗಿದ ಸುವರ್ಣಾವತಿ ನೀರು

    ಕೊಳ್ಳೇಗಾಲ: ಸುವರ್ಣಾವತಿ ಜಲಾಶಯ ತುಂಬಿ ಹರಿದು ಪ್ರವಾಹ ಉಂಟಾಗಿದ್ದ ಸ್ಥಿತಿ ತಗ್ಗಿದ್ದು, ನದಿಯಲ್ಲಿ ನೀರು ಇಳಿಮುಖವಾಗಿದೆ. ಸಂತ್ರಸ್ತರು ಕಾಳಜಿ ಕೇಂದ್ರಗಳಿಂದ ಸ್ವಗ್ರಾಮಗಳಿಗೆ ವಾಪಸ್ ಹೋಗುತ್ತಿದ್ದಾರೆ.


    ಪಟ್ಟಣದ ಬೆಂಡರಹಳ್ಳಿ ರಸ್ತೆ ಮುಳುಗಿ ಹಾಗೂ ದೊಡ್ಡರಂಗನಾಥ ಕೆರೆ ಕೋಡಿ ಬಿದ್ದು ಮಧುವನಹಳ್ಳಿ ಗ್ರಾಮದ ಮನೆಗಳಿಗೆ ನೀರು ನುಗ್ಗಿತ್ತು. 70ಕ್ಕೂ ಹೆಚ್ಚು ಸಂತ್ರಸ್ತರನ್ನು ಪಟ್ಟಣದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಳಿಸಿದ್ದರು. ಸಂತ್ರಸ್ತರು ಗ್ರಾಮಕ್ಕೆ ಮರಳಿದ್ದಾರೆ.


    ಸುವರ್ಣಾವತಿ ನದಿಗೆ ಅಧಿಕ ಪ್ರಮಾಣದ ನೀರು ಹರಿಬಿಟ್ಟಿರುವುದರಿಂದ ನದಿಯ ಸಮೀಪದ ಕುಣಗಳ್ಳಿ ಸಂಪರ್ಕಿಸುವ ಬೆಂಡರಹಳ್ಳಿ ರಸ್ತೆ ಹಾಗೂ ಮುಳ್ಳೂರು- ಕಲಿಯೂರು ಸಂಪರ್ಕ ಕಲ್ಪಿಸುವ ಸೇತುವೆ ರಸ್ತೆ ಜಲಾವೃತವಾಗಿದ್ದು, ಸಂಚಾರಕ್ಕೆ ಆಡಚಣೆಯಾಗಿತ್ತು. ಬುಧವಾರ ಪ್ರವಾಹ ಇಳಿಕೆಯಾಗಿದ್ದು, ಬೆಂಡರಹಳ್ಳಿ ಮಾರ್ಗವಾಗಿ ಯಳಂದೂರು ಹಾಗೂ ಬಿಳಿಗಿರಿರಂಗನ ಬೆಟ್ಟಕ್ಕೆ ಪ್ರಯಾಣಿಸುವರಿಗೆ ಅನುಕೂಲವಾಗಿದೆ.


    ಮಧುವನಹಳ್ಳಿ ಗ್ರಾಮದ ಜಿ.ವಿ. ಗೌಡ ಕಾಲನಿಗೆ ತಾಲೂಕು ಕಚೇರಿ ಸಿಬ್ಬಂದಿ ಭೇಟಿ ನೀಡಿ ಸಂತ್ರಸ್ತರಿಂದ ದಾಖಲೆಗಳನ್ನು ಪಡೆದುಕೊಂಡರು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ. ಕಾವೇರಿ ಬುಧವಾರ ಕಾಳಜಿ ಕೇಂದ್ರಕ್ಕೆ ಭೇಟಿ ಮಾಡಿ ಸಂತ್ರಸ್ತರ ಆರೋಗ್ಯ ವಿಚಾರಿಸಿದರು. ಉಪವಿಭಾಗಾಧಿಕಾರಿ ಗೀತಾ ಹುಡೇದ, ತಹಸೀಲ್ದಾರ್ ಮಂಜುಳಾ, ಇಒ ಮಹೇಶ್, ಟಿಎಚ್‌ಒ ಗೋಪಾಲ್ ಮತ್ತಿತ್ತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts