More

    ತಗ್ಗಿದ ಮಳೆ ಅಬ್ಬರ, ನಿಲ್ಲದ ನದಿ ಉಬ್ಬರ

    ಬೆಳಗಾವಿ: ಮಹಾರಾಷ್ಟ್ರ ಪಶ್ಚಿಮ ಘಟ್ಟ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಸತತ ಆರು ದಿನಗಳಿಂದ ಸತ ತವಾಗಿ ಸುರಿಯುತ್ತಿದ್ದ ಮಳೆಯ ಆರ್ಭಟ ಶುಕ್ರವಾರ ತಗ್ಗಿದೆ. ಆದರೆ, ಜಲಾಯನ ಪ್ರದೇಶಗಳಲ್ಲಿ ನೀರಿನ ಹರಿವು ಕಡಿಮೆಯಾಗಿಲ್ಲ. ಗುರುವಾರ ರಾತ್ರಿ ಧಾರಾಕಾರ ಸುರಿದ ಮಳೆಯಿಂದಾಗಿ ವೇದಗಂಗಾ, ದೂಧಗಂಗಾ ನದಿಯಿಂದ 29,750 ಕ್ಯೂಸೆಕ್, ರಾಜಾಪುರ ಬ್ಯಾರೇಜ್‌ನಿಂದ 1,30,250 ಕ್ಯೂಸೆಕ್ ಸೇರಿ ಕೃಷ್ಣಾ ನದಿಗೆ ಒಟ್ಟು 1,60, 000 ಕ್ಯೂಸೆಕ್, ಘಟಪ್ರಭಾ ನದಿಗೆ 29,002 ಕ್ಯೂಸೆಕ್ ಹಾಗೂ
    ಮಲಪ್ರಭಾ ನದಿಗೆ 20,266 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹಿಡಕಲ್ ಡ್ಯಾಂ ಹಾಗೂ ನವೀಲು ತೀರ್ಥ ಜಲಾಶಯ ಶೇ.98ಭರ್ತಿಯಾಗಿವೆ.

    ಪಶ್ಚಿಮ ಘಟ್ಟ ಮತ್ತು ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆಯಿಂದ ಎಳೆಬಿಸಿಲು ಹಾಗೂ ಮೋಡ ಕವಿ ವಾತಾವರಣವಿತ್ತು. ಕೃಷ್ಣಾ, ಘಟಪ್ರಭಾ ಮತ್ತು ಮಲಪ್ರಭಾ ನದಿಗಳಲ್ಲಿ ನೀರಿನ ಹರಿವು ಮಟ್ಟ ಹೆಚ್ಚಾಗಿದ್ದರಿಂದ ನದಿ ದಡದ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಬೆಳಗಾವಿ ನಗರ ಮತ್ತು ಖಾನಾಪುರ ತಾಲೂಕಿನ ವಿವಿಧ ಭಾಗಗಳಲ್ಲಿ ಜಿಟಿಜಿಟಿ ಮಳೆ ಸುರಿಯುತ್ತಿದೆ. ಮೂಡಲಗಿ ತಾಲೂಕಿನಲ್ಲಿ ನೂರಾರು ಎಕರೆ ಕಬ್ಬು ಹಾಗೂ ಇತರ ಬೆಳೆ ಜಲಾವೃತವಾಗಿದ್ದು, ರೈತರು ಕಂಗಾಲಾಗಿದ್ದಾರೆ.

    ನಿರಂತರ ಮಳೆ ಮತ್ತು ನದಿಗಳ ಪ್ರವಾಹದಿಂದಾಗಿ ಕೃಷ್ಣಾ, ಉಪ ನದಿಗಳಿಗೆ ಮತ್ತು ಘಟಪ್ರಭಾ ನದಿಗಳಿಗೆ ಅಡ್ಡಲಾಗಿರುವ ನಿರ್ಮಿಸಿರುವ 22 ಸೇತುವೆಗಳು ಮುಳುಗಡೆಯಾಗಿದ್ದವು. ಶುಕ್ರವಾರ ಮಳೆ ಕೊಂಚ ಬಿಡುವು ಕೊಟ್ಟಿದ್ದರಿಂದ ಸೇತುವೆ ಮೇಲೆ ಹರಿಯುತ್ತಿದ್ದ ನೀರಿನ ಪ್ರಮಾಣ ಕಡಿಮೆಯಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts