More

    ಡೇರಿ ಚುನಾವಣೆ ನಡೆಸಲು ಗ್ರಾಮಸ್ಥರ ಆಗ್ರಹ

    ಅರಸೀಕೆರೆ: ತಾಲೂಕಿನ ತೊಳಲತೊರೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಗೆ ಅಧಿಸೂಚನೆ ಪ್ರಕಟಗೊಂಡು ಬರೋಬ್ಬರಿ ಮೂರೂವರೆ ತಿಂಗಳು ಕಳೆದಿದ್ದು ಪ್ರಕ್ರಿಯೆ ನಡೆಸದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆ ಗ್ರಾಮಸ್ಥರು ಸಹಕಾರ ಸಚಿವರನ್ನು ಒತ್ತಾಯಿಸಿದ್ದಾರೆ.

    ಈ ಸಂಬಂಧ ಡಿ.21ರಂದು ಜಿಲ್ಲಾ ಉಪನಿಬಂಧಕ ಕಚೇರಿಯ ಹಿರಿಯ ನಿರೀಕ್ಷಕ ವಸೀಂ ಷರೀಫ್ ಅವರನ್ನು ಆಡಳಿತಾಧಿಕಾರಿಯಾಗಿ ನೇಮಿಸಿರುವುದಲ್ಲದೇ ದೃಢೀಕೃತ ಮತದಾರರ ಪಟ್ಟಿ ಪ್ರಕಟಿಸಿ ಚುನಾವಣೆ ನಡೆಸುವಂತೆ ಆದೇಶ ಹೊರಡಿಸಲಾಗಿದೆ. ಸದ್ಯ ಆಡಳಿತ ಮಂಡಳಿ ಅಸ್ತಿತ್ವದಲ್ಲಿಲ್ಲದ ಕಾರಣ ಏಳು ತಿಂಗಳ ಹಿಂದೆ ಆಡಳಿತಾಧಿಕಾರಿ ನೇಮಿಸಲಾಗಿದ್ದು, ಷೇರುದಾರರ ಸಮಸ್ಯೆ ಆಲಿಸುತ್ತಿಲ್ಲ. ಜತೆಗೆ ಪ್ರಭಾವಿ ಮುಖಂಡರ ಒತ್ತಡಕ್ಕೆ ಮಣಿದು ಇಲ್ಲಸಲ್ಲದ ಸಬೂಬು ನೀಡುವ ಮೂಲಕ ಕಾಲತಳ್ಳುವ ಕೆಲಸ ಮಾಡಲಾಗುತ್ತಿದೆ.

    ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಸಂಬಂಧಿಸಿದ ಸಹಕಾರ ಇಲಾಖೆಯ ಉನ್ನತಾಧಿಕಾರಿಗಳು ಕೂಡಲೇ ಚುನಾವಣಾ ಪ್ರಕ್ರಿಯೆ ನಡೆಸಬೇಕು. ವಿಳಂಬಕ್ಕೆ ಕಾರಣವಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ಇಲ್ಲದಿದ್ದಲ್ಲಿ ಜಿಲ್ಲಾ ಸಹಕಾರ ನಿಬಂಧಕರ ಕಚೇರಿ ಎದುರು ಹೋರಾಟ ನಡೆಸುವುದಾಗಿ ಸಂಘದ ಷೇರುದಾರರಾದ ನಾಗರತ್ನಮ್ಮ, ಮಂಜುಳಾ, ಚೈತ್ರಾ ಹೇಳಿಕೆಯಲ್ಲಿ ಎಚ್ಚರಿಸಿದ್ದು, ಬುಧವಾರ ಜಿಲ್ಲಾ ಸಹಕಾರ ಉಪನಿಬಂಧಕರಿಗೂ ದೂರು ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts