More

     ಡಿ.ಹೊಸಹಳ್ಳಿಯಲ್ಲಿ ಗಂಗಾಧರಯ್ಯ ಅಂತ್ಯಕ್ರಿಯೆ ; ಕರ್ತವ್ಯದ ವೇಳೆ ಹೃದಯಾಘಾತದಿಂದ ಪ್ರೊಬೆಷನರಿ ಎಸಿ ಸಾವು

    ತುರುವೇಕೆರೆ: ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಬಿಬಿಎಂಪಿ ಆರಂಭಿಸಿರುವ ಕೋವಿಡ್ ಆರೈಕೆ ಕೇಂದ್ರದ ನೋಡಲ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರೊಬೆಷನರಿ ಉಪವಿಭಾಗಾಧಿಕಾರಿ ಎಚ್.ಎಂ. ಗಂಗಾಧರಯ್ಯ (45) ಅಂತ್ಯಸಂಸ್ಕಾರ ದಂಡಿನಶಿವರ ಹೋಬಳಿಯ ಡಿ.ಹೊಸಹಳ್ಳಿಯಲ್ಲಿ ಸರ್ಕಾರಿ ಗೌರವಗಳೊಂದಿಗೆ ಭಾನುವಾರ ನೆರವೇರಿತು.

    ಬಿಐಇಸಿಯಲ್ಲಿ ಕರ್ತವ್ಯನಿರ್ವಹಿಸುತ್ತಿದ್ದ ವೇಳೆ ಶನಿವಾರ ಸಂಜೆ ಗಂಗಾಧರಯ್ಯಗೆ ಎದೆನೋವು ಕಾಣಿಸಿಕೊಂಡಿದೆ. ನಂತರ ಹತ್ತಿರದ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಿದ್ದಾಗ ಚಿಕಿತ್ಸೆ ಲಕಾರಿಯಾಗದೆ ಸಾವನ್ನಪ್ಪಿದ್ದರು. ಮೃತರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಭಾನುವಾರ ಬೆಳಗ್ಗೆ ತಾಲೂಕು ಆಡಳಿತ ಡಿ.ಹೊಸಹಳ್ಳಿಯಲ್ಲಿ ಪಾರ್ಥಿವ ಶರೀರದ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿತ್ತು. ಸಚಿವ ಜೆ.ಸಿ.ವಾಧುಸ್ವಾಮಿ, ಶಾಸಕ ಮಸಾಲ ಜಯರಾಂ, ವಾಜಿ ಶಾಸಕ ಎಂ.ಟಿ.ಕೃಷ್ಣಪ್ಪ, ಜಿಲ್ಲಾಧಿಕಾರಿ ಡಾ.ರಾಕೇಶ್‌ಕುವಾರ್, ಎಸ್.ಪಿ.ವಂಶಿಕೃಷ್ಣ ದರ್ಶನ ಪಡೆದು ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಮಧ್ಯಾಹ್ನ 12 ಗಂಟೆಗೆ ಗಣ್ಯರು, ಅಧಿಕಾರಿಗಳು ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದರು. ಅಂತ್ಯಕ್ರಿಯೆ ವೇಳೆ ಎಸ್.ಪಿ.ಡಾ.ವಂಶಿಕೃಷ್ಣ, ತಿಪಟೂರು ಉಪವಿಭಾಗಾಧಿಕಾರಿ ಕೆ.ಆರ್.ನಂದಿನಿ, ತಹಸೀಲ್ದಾರ್ ಆರ್.ನಯಿಂ ಉನ್ನೀಸಾ, ಸಿಪಿಐ.ಲೋಕೇಶ್, ಎಎಸ್‌ಐ, ಶಿವಲಿಂಗಯ್ಯ ಮತ್ತು ಅಧಿಕಾರಿಗಳು ಇದ್ದರು.

    ಏರ್​ಫೋರ್ಸ್ ಉದ್ಯೋಗಿಯಾಗಿದ್ದರು: ರೈತ ಕುಟುಂಬದ ಹಿನ್ನೆಲೆಯ ಮೃತ ಎಚ್.ಎಂ.ಗಂಗಾಧರಯ್ಯ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಅಮ್ಮಸಂದ್ರದ ಮೈಸೆಂಕೋ ಶಾಲೆಯಲ್ಲಿ ಮುಗಿಸಿ, ತುಮಕೂರಿನಲ್ಲಿ ಡಿಪ್ಲೊಮಾ ಪದವಿ ಪಡೆದರು. ನಂತರ 1996ರಲ್ಲಿ ಇಂಡಿಯನ್ ಏರ್​ಫೋರ್ಸ್‌ಗೆ ನೇಮಕವಾಗಿ 20 ವರ್ಷ ಸೇವೆ ಸಲ್ಲಿಸಿ 2016ರಲ್ಲಿ ಸೇವೆ ಪೂರ್ಣಗೊಳಿಸಿದ ಬಳಿಕ, 2 ವರ್ಷ ಉಪನ್ಯಾಸಕರಾಗಿ, 2 ವರ್ಷ ವಿಧಾನಸೌಧದಲ್ಲಿ ಎ್ಡಿಎ ಸಬ್ ರಿಜಿಸ್ಟ್ರಾರ್ ಅಗಿ ಕರ್ತವ್ಯನಿರ್ವಹಿಸಿದ್ದಾರೆ. ದೂರ ಶಿಕ್ಷಣದ ಮೂಲಕ ಬಿ.ಎ, ಎಂ.ಎ, ಎನ್‌ಇಟಿ ಪದವಿ ಪಡೆದು, 2017ನೇ ಸಾಲಿನ ಕೆಎಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, 2019ರಿಂದ ಪ್ರೊಬೆಷನರಿ ಉಪವಿಭಾಗಾಧಿಕಾರಿಯಾಗಿದ್ದರು.

    ಪರಿಹಾರಕ್ಕೆ ಒತ್ತಾಯ: ಪ್ರತಿಭಾವಂತ, ದಕ್ಷ ಅಧಿಕಾರಿ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ಹಾಗೂ ಸರ್ಕಾರಿ ನೌಕರಿ ಕೊಡಬೇಕೆಂದು ಶಾಸಕ ಮಸಾಲಜಯರಾಂ ಸರ್ಕಾರಕ್ಕೆ ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts