More

    “ಎದ್ದೇಳೋ ಅರ್ಜುನ, ನನ್ನ ಆನೆ ಬದುಕಿಸಿಕೊಡಿ….” ಬಿಕ್ಕಿ ಬಿಕ್ಕಿ ಅತ್ತ ಮಾವುತ ವಿನು

    ಹಾಸನ: ಅಯ್ಯೋ…. ಎದ್ದೇಳೋ ಅರ್ಜುನ…ಎಂಥ ರಾಜನ ಮಿಸ್ ಮಾಡಿಕೊಂಡೆ. ನನ್ನ ಆನೆ ನನಗೆ ಬೇಕು, ಅವನು ಯಾರಿಗೂ ಬಗ್ಗುವನಲ್ಲ ಅಂತಹುದರಲ್ಲಿ … ಮಲಗಿದ್ದಾನೆ ಎಬ್ಬಿರಿಸಿ, ನಮ್ಮಾನೆಯನ್ನು ನಮ್ಮೂರಿಗೆ ತೆಗೆದುಕೊಂಡು ಹೋಗಬೇಕು…ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ದಬ್ಬಳಿಕಟ್ಟೆ ಸಮೀಪದ ಕೆಎಫ್‌ಡಿಸಿ ನೆಡುತೋಪಿನಲ್ಲಿ ಆನೆ ಅರ್ಜುನನ ಕಳೇಬರವನ್ನು ತಬ್ಬಿಕೊಂಡು ಅಳುತ್ತಿದ್ದ ಮಾವುತ ವಿನು ಗದ್ಗದಿತರಾಗಿ ನುಡಿದ ಮಾತುಗಳಿವು.

    ಮೈಸೂರು ದಸರಾ ಸಮಯದಲ್ಲಿ 8 ಬಾರಿ ಅಂಬಾರಿ ಹೊತ್ತು ನಾಡದೇವತೆ ಚಾಮುಂಡೇಶ್ವರಿಯನ್ನು ಮೆರೆಸಿದ್ದ ಅರ್ಜುನ ಆನೆ ಸೋಮವಾರ (ಡಿ.5) ಮೃತಪಟ್ಟಿದೆ. ಆನೆಯ ಅಂತ್ಯಸಂಸ್ಕಾರಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಜನರು ತಂಡೋಪತಂಡವಾಗಿ ಬಂದು ದರ್ಶನ ಪಡೆಯುತ್ತಿದ್ದಾರೆ. ಮಾವುತ ವಿನು ರೋಧಿಸುತ್ತಿದ್ದ ದೃಶ್ಯ ಎಂಥ ಕಲ್ಲು ಹೃದಯದವರ ಕಣ್ಣನ್ನೂ ತೇವ ಮಾಡಿತ್ತು. ಇತ್ತ ವಿನುವಿಗೆ ಉಮ್ಮಳಿಸಿ ಬರುತ್ತಿರುವ ದುಃಖ ತಡೆಯಲು ಆಗುತ್ತಿಲ್ಲ. ಪದೇ ಪದೇ ಅರ್ಜುನ ಬಳಿ ಹೋಗಿ, ಮಕ್ಕಳು, ಹೆಂಡತಿ, ಅಪ್ಪ ಎಲ್ಲರೂ ಅಳುತ್ತಿದ್ದಾರೆ. ಇಲ್ಲಿ ಅಂತ್ಯಸಂಸ್ಕಾರಕ್ಕೆ ಮಾಡಲು ಬಿಡುವುದಿಲ್ಲ, ಇದನ್ನು ನಮ್ಮೂರಿಗೆ ತೆಗೆದುಕೊಂಡು ಹೋಗುತ್ತೇನೆ, ಎದ್ದೇಳು ರಾಜ ಎಂದು ರೋದಿಸುತ್ತಿದ್ದಾರೆ.

    ವಿನುವಿನ ದುಃಖವನ್ನು ನೋಡಿ ಅರಣ್ಯಾಧಿಕಾರಿ ಶಿಲ್ಪಾ ಅವರ ಕಣ್ಣು ತೇವಗೊಂಡವು. ಅಲ್ಲಿ ನೆರೆದಿದ್ದ ಪ್ರತಿಯೊಬ್ಬರ ಕಣ್ಣಲ್ಲಿ ನೀರು, ದುಃಖ ಮಡುಗಟ್ಟಿದೆ.

    ಅರಣ್ಯಾಧಿಕಾರಿಗಳ ನಿರ್ಲಕ್ಷ್ಯ
    ಅರಣ್ಯಾಧಿಕಾರಿಗಳ ನಿರ್ಲಕ್ಷ್ಯದಿಂದಲೇ ಅರ್ಜುನ ಮೃತಪಟ್ಟಿದ್ದಾನೆ. ಅರಣ್ಯಾಧಿಕಾರಿಗಳ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕು. ವಿಧಾನಸಭೆ ಅಧಿವೇಶನದಲ್ಲಿ ಈ ಬಗ್ಗೆ ತುರ್ತು ಚರ್ಚೆ ಮಾಡಬೇಕು ಎಂದು ಸ್ಥಳೀಯರು ಇದೇ ಸಮಯದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಯಡೇಹಳ್ಳಿ ಮಂಜುನಾಥ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಜನರು, ಇದು ನಮ್ಮ ನಾಡಿನ ಹೆಮ್ಮೆ. ಇಲ್ಲಿ ಯಾವ ವ್ಯವಸ್ಥೆಯನ್ನೂ ಮಾಡಿಲ್ಲ. ಕನಿಷ್ಠ ಪೆಂಡಾಲ್ ಹಾಕುವ ಯೋಗ್ಯತೆಯೂ ಇಲ್ಲ. ಜಿಲ್ಲಾಧಿಕಾರಿ, ಅರಣ್ಯ ಅಧಿಕಾರಿ ಯಾರು ಬಂದಿಲ್ಲ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

    ಅಂತ್ಯಕ್ರಿಯೆಗೆ ಸಿದ್ಧತೆ 
    ಅರ್ಜುನನನ್ನು ನೆಡುತೋಪಿನಲ್ಲಿ ಅಂತ್ಯಕ್ರಿಯೆ ಮಾಡಲು ಎಲ್ಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಮೈಸೂರು ರಾಜಮನೆತನದ ಪುರೋಹಿತ ಪ್ರಹ್ಲಾದ್ ಅವರು ಸ್ಥಳಕ್ಕೆ ಬರಲಿದ್ದು, ನಂತರ ಸಕಲ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕಾವಾಡಿಗರ ವಿಡಿಯೋ ವೈರಲ್: ‘ಅರ್ಜುನ’ನ ಸಾವಿನ ಸುತ್ತ ಅನುಮಾನದ ಹುತ್ತ… ಅರಣ್ಯ ಇಲಾಖೆ ಸಿಬ್ಬಂದಿ ಮತ್ತೊಂದು ಎಡವಟ್ಟು ಬಯಲು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts