More

    ಡಿಸೆಂಬರ್‌ದೊಳಗೆ ಎಲ್ಲ ರಸ್ತೆ ಅಭಿವೃದ್ಧಿ

    ಮೂಡಲಗಿ, ಬೆಳಗಾವಿ: ಪಟ್ಟಣದ ರಸ್ತೆಗಳ ಅಭಿವೃದ್ಧಿಗೆ ನಗರೋತ್ಥಾನ ಯೋಜನೆಯಡಿ ಅನುದಾನ ಬಿಡುಗಡೆಗೊಂಡಿದ್ದು, ಹೆಚ್ಚುವರಿಯಾಗಿ 5 ಕೋಟಿ ರೂ. ಬಿಡುಗಡೆ ಮಾಡುವಂತೆ ಪೌರಾಡಳಿತ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

    ಪಟ್ಟಣದ ಕಲ್ಮೇಶ್ವರ ವೃತ್ತದ ಬಳಿ ನಗರೋತ್ಥಾನ ಯೋಜನೆಯಡಿ 4.05 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಡಿಸೆಂಬರ್ ಅಂತ್ಯದೊಳಗೆ ಮೂಡಲಗಿ ಪಟ್ಟಣದ ಎಲ್ಲ ಪ್ರಮುಖ ರಸ್ತೆಗಳು ಅಭಿವೃದ್ಧಿಯಾಗಲಿವೆ ಎಂದರು.

    ಮೂಡಲಗಿ ತಾಲೂಕಿನ ಸರ್ವಾಂಗೀಣ ಪ್ರಗತಿಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದೇನೆ. ತಾಲೂಕಿನ ಎಲ್ಲ ರಸ್ತೆಗಳ ಸುಧಾರಣೆ ಮಾಡುವ ಮೂಲಕ ಸೌಂದರ್ಯೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದೇನೆ. ಈಗಾಗಲೇ ಪ್ರಗತಿಯಲ್ಲಿರುವ ರಸ್ತೆ ಕಾಮಗಾರಿಗಳು ಡಿಸೆಂಬರ್ ತಿಂಗಳಲ್ಲಿ ಪೂರ್ಣಗೊಳ್ಳಲಿವೆ ಎಂದು ಹೇಳಿದರು.
    ತಾಲೂಕಿನ ಸಾರ್ವಜನಿಕರು ಮತ್ತು ರೈತರ ಪ್ರಮುಖ ಕೋರಿಕೆಯಾಗಿರುವ ಉಪನೋಂದಣಾಧಿಕಾರಿಗಳ ಕಚೇರಿಯನ್ನು ಇದೇ ತಿಂಗಳ ಅಂತ್ಯದೊಳಗೆ ಸಾರ್ವಜನಿಕರಿಗೆ ಅರ್ಪಣೆ ಮಾಡಲಾಗುವುದು. ಈಗಾಗಲೇ ಕಚೇರಿ ಆರಂಭಕ್ಕೆ ಅಗತ್ಯವಿರುವ ಎಲ್ಲ ಕಾರ್ಯಗಳು ಮುಗಿದಿವೆ. ಕಚೇರಿಯನ್ನು ಸಾರ್ವಜನಿಕರ ಸಮ್ಮುಖದಲ್ಲಿ ಉದ್ಘಾಟನೆ ಮಾಡಲಾಗುವುದು ಎಂದರು.

    ಪುರಸಭೆ ಅಧ್ಯಕ್ಷ ಹನುಮಂತ ಗುಡ್ಲಮನಿ, ಉಪಾಧ್ಯಕ್ಷೆ ರೇಣುಕಾ ಹಾದಿಮನಿ, ಪುರಸಭೆ ಮಾಜಿ ಅಧ್ಯಕ್ಷ ರಾಮಣ್ಣ ಹಂದಿಗುಂದ, ರವಿ ಸಣ್ಣಕ್ಕಿ, ಮಾಜಿ ಪುರಸಭೆ ಉಪಾಧ್ಯಕ್ಷ ರವೀಂದ್ರ ಸೋನವಾಲ್ಕರ, ಹುಸೇನಸಾಬ್ ಶೇಖ, ಸದಸ್ಯರಾದ ಭೀಮಶಿ ಸಣ್ಣಕ್ಕಿ, ಶಿವು ಚಂಡಕಿ, ಆನಂದ ಟಪಾಲ್, ಅಬ್ದುಲ್‌ಗಪಾರ ಡಾಂಗೆ, ಈರಣ್ಣ ಕೊಣ್ಣುರ, ಹನುಮಂತ ಪೂಜೇರಿ, ಸಿದ್ದಪ್ಪ ಮಗದುಮ್, ಶಿವು ಸಣ್ಣಕ್ಕಿ, ಈರಪ್ಪ ಮುನ್ಯಾಳ, ಪಾಂಡುರಂಗ ಮಹೇಂದ್ರಕರ, ಸತ್ಯೆವ್ವ ಅರಮನಿ, ಅರಬಾವಿ ಮಂಡಲ ಬಿಜೆಪಿ ಅಧ್ಯಕ್ಷ ಮಹಾದೇವಿ ಶೆಕ್ಕಿ, ಮುಖಂಡರಾದ ಡಾ. ಎಸ್.ಎಸ್. ಪಾಟೀಲ, ಗಿರೀಶ ಢವಳೇಶ್ವರ, ಸಿದ್ದು ಗಡ್ಡೆಕಾರ, ರಾಜು ಪೂಜೇರಿ, ಚನ್ನಪ್ಪ ಅಥಣಿ, ನನ್ನು ಶೇಖ, ಪ್ರಕಾಶ
    ಮುಗಳಖೋಡ, ಸುನೀಲ ಸತ್ತರಡ್ಡಿ, ಮರೇಪ್ಪ ಮರೆಪ್ಪಗೋಳ, ರವಿ ನೇಸೂರ, ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ, ಗುತ್ತಿಗೆದಾರ ಬಿ.ಕೆ. ಗಂಗರಡ್ಡಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts