More

    ಡಿಸಿಎಂ ಲಕ್ಷ್ಮಣ ಸವದಿ ಸೇವೆ ಶ್ಲಾಘನೀಯ

    ಕೊಕಟನೂರ: ಕರೊನಾ ಸಂಭವನೀಯ ಮೂರನೆಯ ಅಲೆ ಮಕ್ಕಳನ್ನು ಬಾಧಿಸಲಿದ್ದು, ಮೈಮರೆತರೆ ಅಪಾಯ ಎದುರಾಗಬಹುದು. ಸಾರ್ವಜನಿಕರು ಸೂಕ್ತ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಬಿಜೆಪಿ ಮುಖಂಡ ಕಿರಣಕುಮಾರ ಪಾಟೀಲ ಹೇಳಿದರು.

    ಅಥಣಿ ತಾಲೂಕಿನ ನಂದಗಾಂವ, ಬಳವಾಡ ಹಾಗೂ ಘಟನಟ್ಟಿ ಗ್ರಾಮಗಳಲ್ಲಿ ಸೋಮವಾರ ಸತ್ಯ ಸಂಗಮ ಪ್ರತಿಷ್ಠಾನ ವತಿಯಿಂದ 4,000 ಬಡಜನರಿಗೆ ಹಾಗೂ ಕರೊನಾ ಸೇನಾನಿಗಳಿಗೆ ಉಚಿತ ಆಹಾರ ಧಾನ್ಯ ಕಿಟ್ ವಿತರಿಸಿ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಯಾವುದೇ ಫಲಾಪೇಕ್ಷೆ ಇಲ್ಲದೆ ಅಥಣಿ ಮತಕ್ಷೇತ್ರದ ಜನರಿಗೆ ಸಹಾಯ ಹಸ್ತ ಚಾಚಿದ್ದಾರೆ. ಶುದ್ಧ ಹೃದಯದಿಂದ ಮಾಡಿದ ದಾನ ದೇವನೊಲುಮೆಗೆ ಕಾರಣವಾಗುತ್ತದೆ ಎಂಬಂತೆ ಸವದಿ ಅವರ ನಿಸ್ವಾರ್ಥ ಸೇವೆ ಅಭಿನಂದನಾರ್ಹ ಎಂದರು. ಯುವ ಮುಖಂಡ ಚಿದಾನಂದ ಸವದಿ ಮಾತನಾಡಿ, ರೈತ ಹೋರಾಟದ ಮೂಲಕ ನಾಯಕನಾಗಿ ಬೆಳೆದ ನಮ್ಮ ತಂದೆ ಲಕ್ಷ್ಮಣ ಸವದಿ ಅವರು ಅಧಿಕಾರವಿಲ್ಲದಿದ್ದಾಗಲೂ ಜನರ ಕಷ್ಟಗಳಿಗೆ ಸ್ಪಂದಿಸಿದ್ದಾರೆ. ನೆರೆ, ಬರ ಪರಿಸ್ಥಿತಿಯಲ್ಲಿ ಬಡವರ, ಶ್ರಮಿಕರ ಪರ ಕೆಲಸ ಮಾಡಿದ್ದು, ಕ್ಷೇತ್ರದ ಜನರ ಕಷ್ಟದಲ್ಲಿ ಎಂದಿಗೂ ಜೊತೆಯಾಗಿ ನಿಲ್ಲುವುದಾಗಿ ತಿಳಿಸಿದರು.

    ನ್ಯಾಯವಾದಿ ಸುಶೀಲಕುಮಾರ ಪತ್ತಾರ ಮಾತನಾಡಿದರು. ಸಿಪಿಐ ಶಂಕರಗೌಡ ಬಸನಗೌಡರ, ಬಾಬು ಗಲಗಲಿ, ಶಾಂತಿನಾಥ ನಂದೇಶ್ವರ, ಅಪ್ಪುಗೌಡ ನೇಮಗೌಡ, ರಾವಸಾಬ ಪಾಟೀಲ, ಮುತ್ತಣ್ಣ ಕಾರ್ತಾಳ, ಬಂಡು ಜಗತಾಪ, ಕುಮಾರ ಗಲಗಲಿ, ಶ್ರೀಮಂತ ಬಸರಿಖೋಡಿ, ಮಲ್ಲಿಕಾರ್ಜುನ ಹರೋಲಿ, ರಮಜಾನ್ ನದಾಫ್, ಅಪ್ಪಾಸಾಬ ಪಾಟೀಲ, ರಾಜು ಯಕ್ಕಂಚಿ, ಪ್ರದೀಪ ನಂದಗಾಂವ, ಪ್ರಶಾಂತ ಅಕ್ಕೋಳ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts