More

    ಡಿಜಿಟಲ್ ಡಿಸೈನ್ ಫಾರ್ಮಿಂಗ್ ಕಾರ್ಯಾಗಾರ

    ದಾವಣಗೆರೆ: ತಂತ್ರಜ್ಞಾನದ ವೈವಿಧ್ಯಮಯ ಸಂಶೋಧನೆಯಿಂದಾಗಿ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವುದು ದೊಡ್ಡ ಸವಾಲಿನ ಪ್ರಶ್ನೆಯಾಗಿದೆ. ಮಾಧ್ಯಮ ಸಂಸ್ಥೆಗಳ ಬೇಡಿಕೆಗೆ ತಕ್ಕಂತೆ ವಿದ್ಯಾರ್ಥಿಗಳು ಕೌಶಲ ಅಳವಡಿಸಿಕೊಂಡು ಭವಿಷ್ಯದ ದಾರಿಗೆ ಸನ್ನದ್ಧರಾಗುವುದು ಅನಿವಾರ್ಯ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಬಸವರಾಜ ಬಣಕಾರ ಅಭಿಪ್ರಾಯಪಟ್ಟರು.

    ದಾವಣಗೆರೆ ವಿಶ್ವವಿದ್ಯಾಲಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ದೃಶ್ಯಕಲಾ ಮಹಾವಿದ್ಯಾಲಯದ ಸಭಾಂಗಣದಲ್ಲಿ ಸೋಮವಾರ, ಪತ್ರಿಕೋದ್ಯಮ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿರುವ 15 ದಿನಗಳ ಡಿಜಿಟಲ್ ಡಿಸೈನ್- ಪೇಜ್ ಫ್ರೇಮಿಂಗ್ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

    ತಂತ್ರಜ್ಞಾನ ಬದುಕಿನ ಅವಿಭಾಜ್ಯ ಅಂಗವಾಗಿದೆ. ವೃತ್ತಿ ಕೌಶಲ, ತಂತ್ರಜ್ಞಾನ ಬಳಕೆಯ ಜತೆಗೆ ವಿಷಯ ಜ್ಞಾನಗಳು ವ್ಯಕ್ತಿತ್ವವನ್ನು ಗಟ್ಟಿಗೊಳಿಸುತ್ತವೆ. ಏನೇ ಕಷ್ಟವಿದ್ದರೂ ಕಲಿಯುವ ಮತ್ತು ಕಲಿತದ್ದನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ನಿಲುವು ಮುಖ್ಯ. ವಾಸ್ತವವನ್ನು ಅರಿತು ವಿದ್ಯಾರ್ಥಿಗಳು ಭವಿಷ್ಯದ ಯೋಚನೆ ಮಾಡಬೇಕು ಎಂದು ತಿಳಿಸಿದರು.

    ಕೇವಲ ಪತ್ರಿಕೋದ್ಯಮ ಅಥವಾ ಟಿವಿ ಮಾಧ್ಯಮಕ್ಕೆ ಜೋತು ಬೀಳದೇ ವಿಭಿನ್ನ ರೀತಿಯಲ್ಲಿ ಯೋಚನೆ ಮಾಡಬೇಕು. ತಂತ್ರಜ್ಞಾನವನ್ನು ಬಳಸಿಕೊಂಡು ಜನರಿಗೆ ನಿಖರವಾದ ಮಾಹಿತಿಯನ್ನು ಸಕಾಲಕ್ಕೆ ಒದಗಿಸಲು ಆದ್ಯತೆ ನೀಡಬೇಕು.

    ವಿದ್ಯಾರ್ಥಿಗಳು ಪದವಿ ಮುಗಿಸಿ ಹೊರ ಬರುತ್ತಿದ್ದಂತೆ ಅವಕಾಶಗಳು ಹುಡುಕಿಕೊಂಡು ಬರುವಂತೆ ತಯಾರಾಗಬೇಕು ಎಂದು ಹೇಳಿದರು.

    ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ರವೀಂದ್ರ ಕಮ್ಮಾರ, ಪತ್ರಿಕೋದ್ಯಮ ವಿಭಾಗದ ಅಧ್ಯಕ್ಷ ಡಾ. ಶಿವಕುಮಾರ ಕಣಸೋಗಿ ಮಾತನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts