More

    ಡಾ. ವೀರೇಂದ್ರ ಹೆಗ್ಗಡೆ ಜನಸೇವೆ ಅನುಕರಣೀಯ, ಶಾಸಕ ನಿಸರ್ಗ ನಾರಾಯಣಸ್ವಾಮಿ ಅಭಿಪ್ರಾಯ, 20 ಆಕ್ಸಿಜನ್ ಕಾನ್ಸನ್‌ಟ್ರೇಟರ್ ಸೇವೆಗೆ ಲಭ್ಯ

    ದೇವನಹಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಜನಪರ ಸೇವೆ, ಕೊಡುಗೆಗಳು ಆದರ್ಶನೀಯ. ಅವರ ಒಂದೊಂದು ಕಾರ್ಯವೂ ಮೈಲಿಗಲ್ಲು ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಶ್ಲಾಘಿಸಿದರು.

    ದೇವನಹಳ್ಳಿಯ ಶ್ರೀ ಕ್ಷೇತ್ರದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಚೇರಿಯಲ್ಲಿ ತಾಲೂಕಿನ ಜನರಿಗೆ ಶ್ರೀ ಕ್ಷೇತ್ರದಿಂದ ಕೊಡುಗೆಯಾಗಿ ಬಂದ 20 ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳನ್ನು ಬಳಕೆಗೆ ಶುಕ್ರವಾರ ಬಿಡುಗಡೆ ಮಾಡಿ ಮಾತನಾಡಿದರು.

    ಜನರ ಆರೋಗ್ಯ ಜೀವ ರಕ್ಷಣೆಯ ಕಾಳಜಿಯಿಂದ ಹಲವು ಸಂಘ-ಸಂಸ್ಥೆಗಳು ಸೇವೆ ಸಲ್ಲಿಸಲು ಮುಂದೆ ಬರುತ್ತಿವೆ. ಹಲವು ರೀತಿಯ ನೆರವು, ವೈದ್ಯಕೀಯ ಪರಿಕರಗಳನ್ನು ಕೊಡುಗೆಯಾಗಿ ಕೊಡುತ್ತಿವೆ. ಇದರಲ್ಲಿ ಶ್ರೀ ಕ್ಷೇತ್ರ ಮುಂಚೂಣಿಯಲ್ಲಿದೆ ಎಂದರು.

    ನಾವು ಕೂಡ ಶಾಸಕರ ಅನುದಾನದಿಂದ ಜಿಲ್ಲಾಧಿಕಾರಿ ಅವರಿಗೆ 50 ಲಕ್ಷ ರೂ. ಅನುದಾನವನ್ನು ಶನಿವಾರ ನೀಡಲಿದ್ದೇನೆ ಎಂದು ಹೇಳಿದರು.

    ಯಾರೂ ಕೂಡ ಕರೊನಾ ಬಗ್ಗೆ ಭಯಪಡುವುದು ಬೇಡ. ನಾನು ನಿಮ್ಮ ಜತೆ ಇದ್ದೇನೆ. ಸಮಪರ್ಕವಾಗಿ ಬೆಡ್ ವ್ಯವಸ್ಥೆ ಮತ್ತು ಉತ್ತಮ ವೈದ್ಯಕೀಯ ಸೇವೆ ದೊರಕಿಸಿ ಕೊಟ್ಟು, ಗುಣಮುಖರಾಗಲು ಸಹಕರಿಸುತ್ತೇನೆ ಎಂದು ಭರವಸೆ ನೀಡಿದರು.

    ಎಸ್‌ಕೆಡಿಆರ್‌ಡಿಪಿಯ ಜಿಲ್ಲಾ ಜಾಗೃತಿ ಸಮಿತಿ ಅಧ್ಯಕ್ಷ ಬಿ.ಕೆ. ನಾರಾಯಣಸ್ವಾಮಿ ಮಾತನಾಡಿ, ಹೋಂ ಐಸೋಲೇಷನ್‌ನಲ್ಲಿ ಇರುವವರಿಗೆ ಉಸಿರಾಟದ ಸಮಸ್ಯೆ ಇದ್ದಲ್ಲಿ, ಅಂಥವರು ಈ ಕಾನ್ಸನ್‌ಟ್ರೇಟರ್ ಅನ್ನು ಒಂದು ವಾರ ಬಳಸಿಕೊಳ್ಳಬಹುದು. ನಮ್ಮ ಜಿಲ್ಲೆಯ ಎಲ್ಲರ ಮನವಿಗೆ ಸ್ಪಂದಿಸಿ ಧರ್ಮಾಧಿಕಾರಿ ಅವರು ದೇವನಹಳ್ಳಿಗೆ 20 ಹಾಗೂ ಆನೇಕಲ್‌ಗೆ 20 ಕಾನ್ಸನ್‌ಟ್ರೇಟರ್‌ಗಳನ್ನು ಕೊಡುಗೆಯಾಗಿ ಕೊಟ್ಟಿದ್ದಾರೆ. ದೇವನಹಳ್ಳಿ ತಾಲೂಕಿನಲ್ಲಿ ಅಗತ್ಯ ಇರುವವರು ಮೊ:9844930496 ಹಾಗೂ ಆನೇಕಲ್‌ನವರು ಮೊ:9663521316ಕ್ಕೆ ಕರೆ ಮಾಡಿದರೆ, ಕಾನ್ಸನ್‌ಟ್ರೇಟರ್ ಒದಗಿಸಲಾಗುವುದು ಎಂದರು.

    ತಾಲೂಕು ವೈದ್ಯಾಧಿಕಾರಿ ಡಾ. ಪಿ.ಕೆ. ಸಂಜಯ್, ಎಸ್‌ಕೆಡಿಆರ್‌ಡಿಪಿಯ ಜಿಲ್ಲಾ ನಿದೇರ್ಶಕ ಸತೀಶ್‌ನಾಯಕ್, ಯೋಜನಾಧಿಕಾರಿ ಅಕ್ಷತಾ ರೈ, ಕೃಷಿ ಅಧಿಕಾರಿ ಮನೋಹರ್, ಪುರಸಭೆ ಸದಸ್ಯರಾದ ಜಿ.ಎ. ರವೀಂದ್ರ, ವೈ.ಆರ್. ರುದ್ರೇಶ್, ಮಾಜಿ ಸದಸ್ಯ ಸೊಸೈಟಿ ಕುಮಾರ್, ಟೌನ್ ಜೆಡಿಎಸ್ ಅಧ್ಯಕ್ಷ ಮುನಿನಂಜಪ್ಪ, ಕಾರ್ಯದರ್ಶಿ ಸಾಯಿಕುಮಾರ ಬಾಬು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮುನಿರಾಜು, ಜಿಲ್ಲಾ ಜಾಗೃತಿ ಸಮಿತಿ ಸದಸ್ಯರಾದ ನರಸಿಂಹಮೂರ್ತಿ, ಬಲಮುರಿ ಶ್ರೀನಿವಾಸ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts